Central Govt Sustainable Development ಶಿವಮೊಗ್ಗ, ಉಪವಿಭಾಗಾಧಿಕಾರಿಗಳ ಸಭಾಂಗಣ, ಹಳೆ ಡಿ.ಸಿ ಕಛೇರಿಯಲ್ಲಿ 18ನೇ ಸಾಂಖ್ಯಿಕ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗಾಯಿತ್ರಿ ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯ ಶಿವಮೊಗ್ಗ ಇವರು ವಹಿಸಿದ್ದು, ಮಾನ್ಯ ಶ್ರೀಮತಿ ಮೇಘನಾ ಅವರ ಜಿಲ್ಲಾಧಿಕಾರಿಗಳು ಹಾಗೂ ಗಣ್ಯರಿಂದ ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ, ಪ್ರೋ.ಪಿ.ಸಿ ಮಹಾಲನೋಬಿಸ್ ರವರ ಭಾವಚಿತ್ರಕ ಪುಷ್ಪನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಪ್ರತಿ ವರ್ಷದಂತ ಸಾಂಖ್ಯಿ ದಿನಾಚರಣೆಯಂದು ಕೇಂದ್ರ ಸರ್ಕಾರವು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ Alignment of state Indicators Frame Work with National Indicators Framework for Monitoring Sustainable, Development ಎಂಬ ವಿಷಯನ್ನು ನೀಡಿದೆ.
ಸದರಿ ವಿಷಯ ಕುರಿತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು.
ಹಾಗೂ ಈ ವಿಷಯ ಕುರಿತು ನುರಿತ ಪ್ರಾಧ್ಯಾಪಕರಾದ ಡಾ. ಶ್ರೀ ಕುಂದನ್ ಬಸವರಾಜ್, ಸಹ್ಯಾದ್ರಿ ವಾಣಿಜ್ಯ ನಿರ್ವಹಣ ಕಾಲೇಜು ಇವರಿಂದ ಉಪನ್ಯಾಸ ಕಾರ್ಯಕ್ರಮವನ್ನು ನೀಡಲಾಯಿತು. ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಈ ಮೇಲಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಅಯ ಇಲಾಖಾ ಮುಖ್ಯಸ್ಥರುಗಳಿಂದ ವಿಷಯ ಮಂಡನೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಇಲಾಖಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕ ಕೇಂದ್ರ ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿಗಳು, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ತಹಶೀಲ್ದಾರ್, ಶಿವಮೊಗ್ಗ ಇವರುಗಳು ಹಾಜರಿದ್ದರು. ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಹೆಚ್.ಇ.ಮಹೇಶ್ವರಪ್ಪ ಇವರು ಪ್ರೋ ಪಿ.ಸಿ.ಮಹಾಲನೋಬಿಸ್ ಇವರ ಜನ್ಮ ದಿನಾಚರಣೆ ಮತ್ತು ಸಾಂಖ್ಯಿ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಗಾಯಿತ್ರಿ ಮುಖ್ಯ ಯೋಜನಾಧಿಕಾರಿಗಳು ಇವರು ಮಾತನಾಡಿ ಅಂಕಿ-ಅಂಶ ಗಳು ನಿಖರತೆ ಮತ್ತ ಪ್ರಾಮಾಣಿಕತೆಯಿಂದ ಕೂಡಿರಬೇಕು. ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಯಾವ ರೀತಿಯ ಪ್ರಮುಖ ಅಂಶಗಳ ಕೊರತೆ ಇದೆಯೋ ಆ ಕೊರತೆ ನೀಗಿಸಲು ಬೇಕಾಗಿರುವ Central Govt Sustainable Development ಅಂಶಗಳ ಸುಸ್ಥಿರ ಗುರಿಗಳು ಎಂದ ವಿವರಿಸಿದರು. ಮತ್ತು ರಾಷ್ಟ್ರೀಯ ಸೂಚಕಗಳ ಚೌಕಟ್ಟನ್ನು ರಾಜ್ಯ ಸೂಚಕಗಳ ಚೌಕಟ್ಟಿನೊಂದಿಗೆ ಜೋಡ ಮಾಡುವುದರ ಕುರಿತು ವಿವರಣೆ ನೀಡಿದರು.