Special Prayer at Badamakan Mosque for Rain ಮಳೆಗಾಗಿ ಪ್ರಾರ್ಥಿಸಿ ಚಿಕ್ಕಮಗಳೂರು ಜಿಲ್ಲಾ ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ವತಿಯಿಂದ ನಗರದ ಬಡಮಕಾನ್ ಮಸೀದಿಯಲ್ಲಿ ಶುಕ್ರವಾರ ಸಂಜೆ ಮುಖಂಡರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್‌ಖಾನ್ ಮಾತನಾಡಿ ಜನ, ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ರೈತರು ಭೂಮಿಯನ್ನು ಬಿತ್ತಿ ಬೆಳೆ ಬೆಳೆಯಲು ಅನುಕೂಲವಾಗುವಂತೆ ಕಾಲ ಕಾಲಕ್ಕೆ ಮಳೆ ಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಮರಗಿಡಗಳ ನಾಶದಿಂದ ಪ್ರಕೃತಿ ಮುನಿಸಿಕೊಂಡ ಹಿನ್ನೆಲೆಯಲ್ಲಿ ಮರಗಿಡಗಳನ್ನು ನಗರದಲ್ಲಿ ಹೆಚ್ಚಾಗಿ ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ನಗರದ ಪ್ರತಿಯೊಬ್ಬರು ಗಿಡನೆಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮಾನವನಿಗೆ ದೇವರ ನಡುವೆ ಸಂಬಂಧಗಳು ಇದ್ದರೂ ಅದಕ್ಕೆ ಪ್ರತಿಯಾಗಿ ಜೀವಿಗಳಿಗೆ ಅದ್ಬುತವಾದ ಕಾರ್ಯಗಳನ್ನು ದೇವನು ಕರುಣಿಸುವನು. ಎಲ್ಲರೊಂದಿಗೂ ಒಳ್ಳೆತನವನ್ನು ಪ್ರದರ್ಶಿಸಿದರೆ ಮಾತ್ರ ಜೀವ ಜಂತು ಗಳು ಹಾಗೂ ಹಸಿರಿನ ಪ್ರಕೃತಿ ಸಂಪತ್ತು ಉಳಿಸಬಹುದು ಎಂದರು.
Special Prayer at Badamakan Mosque for Rain ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರುಗಳಾದ ತನ್ವೀರ್‌ಪಾಷ, ಜುನೇದ್ ಆಫೀಸ್, ಜಾವೀದ್, ರಾಘವೇಂದ್ರ, ಪ್ರಸಾದ್ ಮತ್ತಿತರರು ಹಾಜರಿದ್ದರು.