Saturday, November 23, 2024
Saturday, November 23, 2024

Sri Adichunchanagiri Shikshana Trust ಇಂದಿನ ಮಕ್ಕಳೇ ನಾಳಿನ ನಮ್ಮ ಪ್ರಭುಗಳು-ಮಾಯಣ್ಣ ಗೌಡ

Date:

Sri Adichunchanagiri Shikshana Trust ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದಷ್ಟೇ ಮಾತಲ್ಲ, ನಾಳಿನ ನಮ್ಮ ಪ್ರಭುಗಳು ಆಗುತ್ತಾರೆ. ಹಾಗಾಗಿ ಈ ಮಕ್ಕಳನ್ನು ನಾನು ಆತ್ಮೀಯವಾಗಿ ಗೆಳೆಯರು ಎಂದು ಪ್ರೀತಿಯಿಂದ ಸಂಬೋಧಿಸುತ್ತೇನೆ ಎಂಬುದಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.

ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಸಲಾಗಿದ್ದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆ, ಬಿಜಿಎಸ್ ವಸತಿಯುತ ಪ್ರೌಢಶಾಲೆ, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ವಿದ್ಯಾರ್ಥಿ ಸಂಘ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶದ ಸಂವಿಧಾನ 3 ವಿಭಾಗಗಳನ್ನು ಹೊಂದಿದೆ.ನಮ್ಮ ನಡುವಿನ ಶಾಸನಗಳನ್ನು ಹೊರ ತರುವ ಶಾಸಕಾಂಗದ ಕೆಲಸವನ್ನು ಕಾರ್ಯಾಂಗ ಅಧಿಕಾರಿ ವಲಯವನ್ನು ಬಳಸಿಕೊಂಡು ಜಾರಿಗೆ ತರುತ್ತದೆ.ಈ 2 ಅಂಗಗಳು ತಪ್ಪು ಮಾಡಿದಾಗ ನ್ಯಾಯಾಂಗ ಅವುಗಳನ್ನು ತಿದ್ದಿ ಸರಿ ಮಾಡುವ ಕೆಲಸ ಮಾಡುತ್ತದೆ.ಇಂತಹ ವ್ಯವಸ್ಥೆ ನಮ್ಮ ಎಲ್ಲಾ ಕಡೆ ಇರುವುದರಿಂದ ಅತ್ಯಂತ ವ್ಯವಸ್ಥಿತವಾದ ಸರ್ಕಾರ ನಡೆಯಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಸಂತಸದಿಂದ ಇರಲು ಸಾಧ್ಯ ಎಂದು ಅವರು ಹೇಳಿದರು.

ಶಿವಮೊಗ್ಗ ನಗರದ ಹೋಟೆಲ್ ಒಂದರಲ್ಲಿ ಅನಗತ್ಯವಾಗಿ ರಸ್ತೆಗೆ ಕಸ ಹಾಕುತ್ತಿದ್ದ ವಿಷಯದ ಬಗ್ಗೆ ವಿವರಣೆ ನೀಡಿದ ಮಾಯಣ್ಣಗೌಡ ಅವರು ಎಷ್ಟು ಸಾರಿ ಹೇಳಿದರು ಕೇಳದಿದ್ದಾಗ ಪಾಲಿಕೆ ಆಯುಕ್ತನಾಗಿ ನನ್ನ ಕರ್ತವ್ಯ ಅನುಸಾರ 25,000 ದಂಡ ಹಾಕಿದ್ದ ಘಟನೆಯ ಬಗ್ಗೆ ಕಾರ್ಯಾಂಗದ ಸ್ವರೂಪ ಹಾಗೂ ನಮ್ಮ ನಡುವಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿ ಸಂಘ ಎಂಬುದು ಕೇವಲ ಒಂದು ಗುಂಪಲ್ಲ. ನಿಮಗೆ ಬದುಕುವ ಹಾಗೂ ಹೊಸತನದ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಶಕ್ತಿಯನ್ನು ನೀಡುವಂತಹ ವೇದಿಕೆ ಇದಾಗಿದೆ. ಒಂದು ಸಲ ವೇದಿಕೆ ಮೇಲೆ ಧೈರ್ಯದಿಂದ ಮಾತನಾಡುವುದನ್ನು ಕಲಿತರೆ ನಂತರ ನಿಮ್ಮ ವಾದವನ್ನು ನೀವು ಸ್ಪಷ್ಟವಾಗಿ ಎಂತವರ ಮುಂದೆಯಾದರು ಮಂಡಿಸುವ ಸಾಮರ್ಥ್ಯ ಬರುತ್ತದೆ ಎಂದರು.

ಒಬ್ಬರಿಂದ ಒಬ್ಬರಿಗೆ ಜವಾಬ್ದಾರಿ ಹಂಚಿಕೆಯಾಗಿರುತ್ತದೆ ಎಂಬ ಬಗ್ಗೆ ವಿವರಣೆ ನೀಡಿದ ಶಿಕ್ಷಣ ಇಲಾಖೆಯ ವ್ಯವಸ್ಥೆಯ ಬಗ್ಗೆ ತಿಳಿ ಹೇಳಿದ ಶ್ರೀಗಳು ದೇಶದ ಆಡಳಿತ ವ್ಯವಸ್ಥೆ ಇರುವುದು ಸಂವಿಧಾನಬದ್ಧ ವ್ಯವಸ್ಥೆಯಾಗಿದೆ ಅದಕ್ಕೆ ಪೂರಕವಾದ ಇಂತಹ ಸಂಘಗಳು ಮಕ್ಕಳನ್ನು ಬೆಳೆಸುವಲ್ಲಿ ಬಹು ಮುಖ್ಯ ವೇದಿಕೆಯಾಗಿರುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಅವರು ಮಾತನಾಡಿ, ಬೋಧನೆ ವಿದ್ಯಾರ್ಥಿಯ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯ ನಡುವೆ ನಮ್ಮ ಸಾಮೂಹಿಕ ಪರಿಕಲ್ಪನೆ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ಬೆಳೆಸುವ ಇಂತಹ ವಿದ್ಯಾರ್ಥಿ ಸಂಘಗಳು,ಮಕ್ಕಳಲ್ಲಿ ಸೂಕ್ತ ಅಡಿಪಾಯವನ್ನು ಹಾಕಿಕೊಡುತ್ತವೆ. ಮಕ್ಕಳು ಇಂತಹ ವಯಸ್ಸಿನಲ್ಲಿ ಕಲಿಕೆಗಷ್ಟೇ ಹೆಚ್ಚಿನ ಆಧ್ಯತೆ ನೀಡಿ.ತಾವು ತಲುಪಬಹುದಾದ ನಿಖರ ಗುರಿಗಳನ್ನು ಹೊಂದಿ ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ, ಅಂದುಕೊಂಡಿರುವ ಬದುಕಿನ ಗುರಿಯನ್ನು ತಲುಪುವಂತೆ ಕರೆ ನೀಡಿದರು.

Sri Adichunchanagiri Shikshana Trust ಶಿವಮೊಗ್ಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿಗಳಾದ ರಾಜೇಶ್ ಎ.ವಿ.ರವರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ನಿರ್ದೇಶಕರಾದ ಸತೀಶ್. ಡಿ.ವಿ ಅವರು, ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಾ. ಎಸ್. ಆರ್. ರವರು, ಬಿಜಿಎಸ್ ವಸತಿ ಶಾಲೆಯ ವ್ಯವಸ್ಥಾಪಕರಾದ ಅಮೀಶ್. ಹೆಚ್. ಕೆ ರವರು, ಹಾಗೂ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...