Saturday, November 23, 2024
Saturday, November 23, 2024

Vishwakarma Seva Sanga ಸುವರ್ಣ ಕೆಲಸಗಾರರಿಗೆ ಪೊಲೀಸರಿಂದ ಎದುರಾಗುವ ಸಮಸ್ಯೆಗಳನ್ನ ನ್ಯಾಯಯುತ ಬಗೆಹರಿಸೋಣ- ಶಾಸಕ ಎಚ್.ಡಿ.ತಮ್ಮಯ್ಯ

Date:

Vishwakarma Seva Sanga ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಅನಾದಿಕಾಲದಿಂದಲೂ ವಿಶ್ವಕರ್ಮರು ಅಪರೂಪದ ವಿಗ್ರಹ ಕೆತ್ತನೆಯ ಕಲೆಯಿಂದ ವಿಶಿಷ್ಟ ಕೊಡುಗೆ ನೀಡುವ ಮೂಲಕ ನಿರಂತರ ಕಾಯಕದಲ್ಲಿ ತೊಡಗಿ ಜನಾಂಗದ ಬೆನ್ನಲುಬಾದವರು ಎಂದು ಚನ್ನಗಿರಿ ತಾಲ್ಲೂಕಿನ ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿಪೀಠ ಕಾಶಿಮಠದ ಶ್ರೀ ಶಂಕರಾತ್ಮನಂದ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನೂತನ ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಹಿಂದಿನ ರಾಮಮಂದಿರ, ರಾಜ್ಯದ ಬೇಲೂರು, ಹಳೇಬೀಡು, ಪಟ್ಟದಕಲ್ಲು ಹಾಗೂ ಹಂಪೆ ಸೇರಿದಂತೆ ವಿವಿಧ ಕಡೆಗಳಲ್ಲಿ ಅತ್ಯದ್ಬುತ ಕೆತ್ತಲೆಯ ಶಿಲ್ಪಾಕಲೆಯ ಮೂಲಕ ವಿಶ್ಚಕರ್ಮರು ಛಾಪು ಮೂಡಿಸಿದ್ದಾರೆ. ಇಂದಿಗೂ ಆಗಮಿಸುವ ಪ್ರವಾಸಿಗರು ಕೆತ್ತಲೆಯ ವರ್ಣನೆಯನ್ನು ಪರಸ್ಪರ ವಿಶ್ಲೇಷಣೆಯಲ್ಲಿ ತೊಡಗುವ ಮೂಲಕ ಬಣ್ಣಿಸುತ್ತಿದ್ದಾರೆ ಎಂದರು.

Vishwakarma Seva Sanga ಇಂತಹ ಅದ್ಬುತ ಕಲೆಯನ್ನು ನೀಡಿರುವ ಸಮುದಾಯವು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಹಾಗೂ ರಾಜ ಕೀಯವಾಗಿ ಹಿನ್ನಡೆ ಸಾಧಿಸಲು ಒಗ್ಗಟ್ಟಿನ ಕೊರತೆಯೇ ಮೂಲ ಕಾರಣ. ನಾಡಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ದೊಡ್ಡ ಸಮಾಜಗಳಿವೆ. ಒಗ್ಗಟ್ಟಿನಿಂದ ಒಂದೇ ಸಂಘವನ್ನು ರಚಿಸಿಕೊಂಡಿವೆ. ಆ ರೀತಿಯಲ್ಲಿ ವಿಶ್ಚಕರ್ಮರು ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.

ರಾಜ್ಯದಲ್ಲಿರುವ ವಿಶ್ಚಕರ್ಮ ಮುಖಂಡರು ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡದೇ ಜನಾಂ ಗದ ಅಭಿವೃದ್ದಿ ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಸಮುದಾಯವು ಎಲ್ಲಾ ರಂಗಳಲ್ಲೂ ಮುಂದುವರೆಯ ಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೊಂದಾಣ ಕೆಯ ಮೂಲಕ ಜನಾಂಗದ ಬೆಳವಣ ಗೆಗೆ ಒಗ್ಗಟ್ಟು ಪ್ರದರ್ಶಿ ಸಿದರೆ ರಾಜಕೀಯ ಹಾಗೂ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಪಂಚಕಸುಬುಗಳ ಮೂಲಕ ಭಾರತದಲ್ಲೇ ವಿಶ್ಚಕರ್ಮರು ಎಲ್ಲಾ ವರ್ಗಕ್ಕಿಂತ ಉತ್ತಮ ವರ್ಗವೆನಿಸಿಕೊಂಡಿದೆ. ಸಮಾಜದಲ್ಲಿ ನಡೆಯುವ ಎಲ್ಲಾ ಶುಭಕಾರ್ಯಗಳಿಗೆ ಒಡವೆ, ವಿಗ್ರಹ ಕೆತ್ತನೆ ಹಾಗೂ ಕೊರಾಡಗಿದ್ದ ಮರವನ್ನು ಅತಿಸುಂದರಗೊಳಿಸುವ ಶಕ್ತಿ ವಿಶ್ಚಕರ್ಮರಲ್ಲಿದೆ. ಇಂತಹ ಸಮುದಾ ಯದ ಪೂರ್ವಜರು ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದರು.

ಸುವರ್ಣಕೆಲಸಗಾರರಿಗೆ ಪೊಲೀಸ್ ಅಧಿಕಾರಿಗಳು ಕೆಲವು ವರ್ಷಗಳಿಂದ ಅನೇಕ ತೊಂದರೆ ನೀಡುತ್ತಿದೆ ಎಂದು ತಿಳಿಸಲಾಗಿದೆ. ಇವುಗಳ ಬಗ್ಗೆ ಯಾವುದೇ ಸುವರ್ಣಕೆಲಸಗಾರರು ಭಯಪಡಬಾರದು. ಪ್ರತಿಯೊಂದು ಸಮಸ್ಯೆಗಳು ಎದುರಾದಲ್ಲಿ ಖುದ್ದಾಗಿ ನ್ಯಾಯಸಮ್ಮತವಾಗಿ ಬಗೆಹರಿಸಲಾಗುವುದು. ಜೊತೆಗೆ ವಿಶ್ಚಕರ್ಮರಿಗೆ ಸಭಾಂಗಣದ ಸಂಬಂಧ ನಗರ ಹೊರವಲಯದಲ್ಲಿ ಸೂಕ್ತ ಜಾಗ ಗುರುತಿಸಿ ಭವನ ನಿರ್ಮಾಣಕ್ಕೆ ಮುಂದಾಗ ಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ವಿಶ್ಚಕರ್ಮ ಸೇವಾ ಸಂಘದ ಅಧ್ಯಕ್ಷ ಬಿ.ಜೆ.ಚೇತನ್‌ಕುಮಾರ್ ಮಾತನಾಡಿ ಜಿಲ್ಲೆಯ ವಿವಿಧ ಕಡೆ ಗಳಲ್ಲಿ ಇದ್ದಂತಹ ಕೆಲವು ಸಂಘಗಳು ಸ್ವಾಭಿಮಾನಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರಿಂದ ನೂತನ ಸಂಘವನ್ನು ಸ್ಥಾಪಿಸಲು ಮುಂದಾಗಿದ್ದು ಶೃಂಗೇರಿಯಿಂದ ತಾಲ್ಲೂಕು ಸಂಘ ಮೊದಲು ಪ್ರಾರಂಭಿಸುವ ಮೂಲಕ ಇದೀಗ ಜಿಲ್ಲಾ ಸಂಘವನ್ನು ಸ್ಥಾಪಿಸಿ ಸಮಾಜಮುಖಿ ಕೆಲಸದಲ್ಲಿ ತೊಡಗಲಿದೆ ಎಂದರು.

ಇದೇ ವೇಳೆ ಹಾಸನದ ಅರೆಮಾದನಹಳ್ಳಿ ವಿಶ್ಚಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ವಿಭೂಷಿತ ಶಿವಸುಜ್ಞಾ ನತೀರ್ಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಂತರ ಝೀ ಕನ್ನಡ ಸರಿಗಮಪ ಲಿಟಲ್ ಚಾಂಪಿಯನ್ ಸೀಸನ್ -19ರ ವಿಜೇತೆ ಕು.ಪ್ರಗತಿ ಬಸವರಾಜ್ ಬಡಿಗೇರ್ ಅವರಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಿಶ್ಚಕರ್ಮ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಆರ್.ಭಾಸ್ಕರಾಚಾರ್ಯ, ಉಪಾಧ್ಯಕ್ಷ ರಾದ ಎಸ್.ಸುರೇಶಾಚಾರ್, ಎ.ಉಮೇಶ್, ಶ್ರೀಮತಿ ನೇತ್ರಾವತಿ, ಎಂ.ಹೆಚ್.ವಿಠಲಾಚಾರ್, ಪ್ರಧಾನ ಕಾರ್ಯ ದರ್ಶಿ ಎಂ.ಕೆ.ಮಂಜುನಾಥ ಸುಸಲವಾನಿ, ಸಹ ಕಾರ್ಯದರ್ಶಿ ಕೆ.ಮಹೇಶ್, ಸಂಘಟನಾ ಕಾರ್ಯದರ್ಶಿ ಕೆ.ಎಲ್. ರಮೇಶ್ ಕಡಿದಾಳ್, ಖಜಾಂಚಿ ಎಂ.ಉಮಾಶಂಕರ್, ಹಿರಿಯ ವಿಶ್ಚಕರ್ಮ ಸಮಾಜ ಸಂಘಟಕದ ಮುಖಂಡ ಎಂ.ಎನ್.ವಿಠಲಾಚಾರ್ಯ, ಸಮಾಜ ಸೇವಾ ದುರೀಣ ರತ್ನಾಕರಾಚಾರ್ಯ, ದಾನಿಗಳಾದ ಶ್ರೀಮತಿ ಲತಾ ವಿಶೇಷ್ ಮತ್ತು ಡಾ|| ಎಂ.ಪಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...