Kannada Sahitya Parishath ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ಹಾಗೂ ʻರತ್ನʼ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ
ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2023-24ನೆಯ ಸಾಲಿನ ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ಹಾಗೂ ʻರತ್ನʼ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
2023ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ʻಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನʼ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು 2023ರ ಆಗಸ್ಟ್ 31ಕೊನೆಯ ದಿನವಾಗಿದೆ.
2023ರ ಸೆಪ್ಟೆಂಬರ್ 15 ರ ವರೆಗೆ ದಂಡ ಶುಲ್ಕ ರೂ. 50:00 ಅನ್ನು ಹೆಚ್ಚುವರಿಯಾಗಿ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ.
Kannada Sahitya Parishath ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು 25 ರೂ. ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಇರುವ ಮಾರಾಟ ಮಳಿಗೆಯಲ್ಲಿ ದಿನಾಂಕ 01-07-2023 ರಿಂದ ಪಡೆಯಬಹುದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವ ಸೌಲಭ್ಯವನ್ನು ಪರಿಷತ್ತು ಕಲ್ಪಿಸಿದೆ.
ಅರ್ಜಿ ನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ www.kasapa.in ಮೂಲಕ ಸಹ ಪಡೆದು ಕೊಳ್ಳಬಹುದು. ಅಂತರ್ಜಾಲದ ಮೂಲಕ ಅರ್ಜಿ ನಮೂನೆ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ 25 ರೂ.ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು- 560018 ದೂರವಾಣಿ ಸಂಖ್ಯೆ : 080-26612991, 22423867, 26623584 ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ