Environmental Concern ನಮ್ಮ ಹಳ್ಳಿ ಥಿಯೇಟರ್ (ರಿ) ಸಾಂದೀಪನಿ ಪಬ್ಲಿಕ್ ಶಾಲೆ ಮತ್ತು ರಂಗಾಯಣ ಶಿವಮೊಗ್ಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಕ್ಕಿ ಕಥೆ ನಾಟಕ ಪ್ರದರ್ಶನದಲ್ಲಿ ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗೆ ರಂಗಭೂಮಿಯ ಮೂಲಕ ಪರಿಸರ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಂದು ನಾವು ಯೋಚಿಸಬೇಕಾಗಿದೆ. ಶೈಕ್ಷಣಿಕವಾಗಿ ಪಠ್ಯದ ಮೂಲಕ ಈಗಾಗಲೇ ಮಕ್ಕಳಿಗೆ ಪರಿಸರದ ಬಗ್ಗೆ ಆರಿವು ಮೂಡಿಸಲಾಗುತ್ತಿದೆ. ರಂಗಾಯಣ ಶಿವಮೊಗ್ಗ ನಾಟಕಗಳ ಮೂಲಕ ಮಕ್ಕಳಲ್ಲಿ ಇಂತಹ ಕಾಳಜಿಯನ್ನು ಬೆಳಸುತ್ತಿದೆ. ಹಕ್ಕಿ ಕಥೆ ನಾಟಕ ಪ್ರಕೃತಿ ಮತ್ತು ಮನುಷ್ಯನ ನಡೆವು ನಡೆಯುವ ಸಂಘರ್ಷದ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಡುತ್ತದೆ ಎಂದರು.

ಸಾಂದೀಪನಿ ಪಬ್ಲಿಕ್ ಶಾಲೆ ಮತ್ತು ನಮ್ಮ ಹಳ್ಳಿ ಥಿಯೇಟರ್ ಕಲಾ ತಂಡ ಜಂಟಿಯಾಗಿ ಒಂದು ಸಾವಿರ ಮಕ್ಕಳಿಗೆ ನಾಟಕ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Environmental Concern ಕಾರ್ಯಕ್ರಮದಲ್ಲಿ ಸಾಂದೀಪನಿ ಪಬ್ಲಿಕ್ ಶಾಲೆಯ ನಿರ್ದೇಶಕರಾದ ಶ್ರೀ ರಾಜಶೇಖರ್ ಮತ್ತು ನಮ್ಮ ಹಳ್ಳಿ ಥಿಯೇಟರ್ ತಂಡದ ಅಧ್ಯಕ್ಷರರಾದ ಚೇತನ್ ಕುಮಾರ್ ಸಿ ರಾಯನಹಳ್ಳಿ ಉಪಸ್ಥಿತರಿದ್ದರು.
