Shri Kshetra Dharmasthala Rural Development Project ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಚಿಕ್ಕಮಗಳೂರು ತಾಲ್ಲೂಕು ಟ್ರಸ್ಟ್ ವತಿಯಿಂದ ಹಿರೇಮಗಳೂರಿನ ನರಸಿಂಹಯ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯಗಳ ವ್ಯಸನ ಮತ್ತು ಕಳ್ಳಸಾಗಾಣೆ ವಿರೋಧಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಆಯುಷ್ಮಾನ್ ಅಧಿಕಾರಿ ಡಾ. ಗೀತಾ ಉದ್ಘಾಟಿಸಿ ಮಾತನಾಡಿ ಮಾದಕ ದ್ರವ್ಯಗಳ ಸೇವನ ದೇಹಕ್ಕೆ ಅಪಾಯಕಾರಿ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವು ದೇ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಸಲಹೆ ಮಾಡಿದರು.
Shri Kshetra Dharmasthala Rural Development Project ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಶಾಲಾ ಮುಖ್ಯೋಪಾಧ್ಯಯ ಟಿ.ಜಿ.ಚಂದ್ರನಾಯಕ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಮೇಲ್ವಿಚಾರಕ ಚಂದನ್, ಸೇವಾ ಪ್ರತಿನಿಧಿ ಪ್ರೇಮ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.