Saturday, November 23, 2024
Saturday, November 23, 2024

Kuvempu Kala Mandira ಮೂಲ ಸೌಕರ್ಯ ಗಳ ಕೊರತೆಯ ನಡುವೆಯೂ ಶಿಕ್ಷಕರ ಕ್ರಿಯಾಶೀಲತೆ ಪ್ರಶಂಸಾರ್ಹ-ಎಸ್.ಎಲ್ ಭೋಜೇಗೌಡ

Date:

Kuvempu Kala Mandira ಸರ್ಕಾರಿ ಶಾಲೆಗಳಲ್ಲಿ ಹಲವಾರು ಮೂಲಸೌಕರ್ಯ ಕೊರತೆಗಳ ನಡು ವೆಯೂ ಪ್ರೌಢಶಾಲಾ ಸಹ ಶಿಕ್ಷಕರು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮಕ್ಕಳಿಗೆ ಸ್ಪೂರ್ತಿ ತುಂಬುತ್ತಿರುವುದು ಮೆಚ್ಚುವಂತಹ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಚಿಕ್ಕಮಗಳೂರು ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ 2023-24ನೇ ಸಾಲಿನ ಶೈಕ್ಷಣಿಕ ಮುನ್ನೋಟ, ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲಾ ಸಹ ಶಿಕ್ಷಕರಿಗೆ ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ ಸಮಸ್ಯೆ ಹಾಗೂ ಇತರೆ ಅನೇಕ ನೋವುಗಳಿವೆ. ಈ ನಡುವೆಯು ಕೂಡಾ ಮಕ್ಕಳ ಭವಿಷ್ಯದ ವಿಚಾರದಲ್ಲಿ ರಾಜೀಗೊಳಗಾಗದೇ ಗುಣಮಟ್ಟದ ಶಿಕ್ಷಣಕ್ಕೆ ಶ್ರಮವಹಿಸುತ್ತಿರುವ ಪರಿಣಾಮ ಇಂದು ಸರ್ಕಾರಿ ಶಾಲೆಗಳು ಶೇ. 100 ಫಲಿತಾಂಶ ಸಾಧಿಸಲು ಕಾರಣವಾಗಿದೆ ಎಂದರು.

ಮಕ್ಕಳಿಗೆ ಯಾವುದೇ ತರಗತಿಗಳ ಶಿಕ್ಷಕರು ಕೇವಲ ಪಠ್ಯದಲ್ಲಿರುವುದನ್ನು ಅಭ್ಯಾಸಿಸಿದರೆ ಸಾಲದು. ಜೀವನ ದಲ್ಲಿ ಸೋಲು ಕಂಡಾಗ, ಪರೀಕ್ಷಾ ಸಮಯದಲ್ಲಿ ವಿಶ್ವಾಸ ಕಳೆದುಕೊಂಡಾಗ ಹಾಗೂ ಅನುತ್ತೀರ್ಣರಾದ ಸಂದರ್ಭ ದಲ್ಲಿ ಅವರಿಗೆ ಬದುಕಿನ ಮಹತ್ವವನ್ನು ತಿಳಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಶಿಕ್ಷಕ ವೃತ್ತಿ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಿದರು.

Kuvempu Kala Mandira ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯ, ವಚನಗಳು, ದಾರ್ಶನಿಕರ ಗೀತೆಗಳು ನಶಿಸುತ್ತಿವೆ. ಇವುಗಳನ್ನು ಪುರ‍್ಚುಚ್ಚ ರಿಸಬೇಕಾದ ಸಮಯ ಬಂದಿದೆ. ಎಲ್ಲಾ ದಾರ್ಶನಿಕರು ಪೂರ್ಣಪ್ರಮಾಣದ ಸಂದೇಶವನ್ನು ಸಮಾಜಕ್ಕೇಳಿದ್ದಾರೆ. ಇವುಗಳ ಆಚರಣೆಯಾಗಬೇಕಿದೆ. ಇದರ ನಡುವೆ ಭಾರತೀಯ ಸಂಸ್ಸೃತಿಯ ಹಿನ್ನೆಲೆ ಹೊಂದಿರುವ ಪುಸ್ತಕಗಳ ಅಭ್ಯಾಸಕ್ಕೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ತಾಲ್ಲೂಕಿನ ಪ್ರತಿ ಪ್ರೌಢಶಾಲೆಗಳಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸುವುದು, ಸಂವಾದ ಹಾಗೂ ಪೋಷಕರಿಗೆ ತಿಂಗಳಲ್ಲಿ ಒಂದು ಸಭೆ ನಡೆಸುವ ಮೂಲಕ ಚಲನವಲನಗಳ ಬಗ್ಗೆ ಚರ್ಚಿಸಿದರೆ ಮಕ್ಕಳ ಬೌದ್ಧಿಕ ಶಿಕ್ಷಣಕ್ಕೆ ಸಹಕಾರಿ. ಹಿಂದಿನ ತಲೆಮಾರಿನಲ್ಲಿ ಯಾವುದೇ ಯೂನಿವರ್ಸಿಟಿಗಳಿಗೆ ತೆರಳದೇ ಪೋಷಕರು ಮೌಲ್ಯಧಾರಿತ ಶಿಕ್ಷಣ ನೀಡುವ ಚಿಂತನೆಗಳನ್ನು ರೂಡಿಸಿಕೊಂಡಿದ್ದರು ಎಂದರು.

ಶಿಕ್ಷಕರ ವರ್ಗಾವಣೆ, ನಿವೃತ್ತಿ ನಂತರ ಸಿಗಬೇಕಾದ ಸೌಲಭ್ಯ, ವೇತನ ತಾರತಮ್ಯ ಹಾಗೂ ಹೊಸಪಿಂಚಣಿ ಕಾಯ್ದೆ ರದ್ದುಗೊಳಿಸಿ ಹಳೇ ಪದ್ಧತಿ ಜಾರಿ ಸೇರಿದಂತೆ ಹಲವಾರು ಹಕ್ಕೋತ್ತಾಯಗಳಿಗೆ ಸಂಬಂಧಿಸಿದಂತೆ ಪ್ರೌಢಶಾಲಾ ಸಹ ಶಿಕ್ಷಕರು ತಮ್ಮಲ್ಲಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚಿಸುವ ಮೂಲಕ ಶಿಕ್ಷಕರಿಗೆ ಪೂರಕವಾಗಿ ಸ್ಪಂದಿಸುವ ಕಾರ್ಯದಲ್ಲಿ ತೊಡಲಾಗುತ್ತದೆ ಎಂದು ಭರವಸೆ ನೀಡಿದರು.

ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಹಾಗೂ ವಿಷಯ ಪರೀಕ್ಷಕ ಎಸ್.ಬಿ.ಸತೀಶ್ ಹದಿಹರೆಯದ ವಯಸ್ಸಿನಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಗಳು ಆಕಸ್ಮಿಕವಾಗಿ ಆಗುವಂತಹ ತಪ್ಪುಗಳಿಗೆ ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡುವ ಮೂಲಕ ತಿದ್ದುವ ಜೊತೆಗೆ ಶೈಕ್ಷಣಿಕ ಸಾಮ ರ್ಥ್ಯವನ್ನು ಬೆಳೆಸಲು ಮುಂದಾಗಬೇಕು ಎಂದರು.

ಯುವಪೀಳಿಗೆಯನ್ನು ಸಮಾಜದ ಮುಂಚೂಣಿಗೆ ತರುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ನಿಟ್ಟಿನಲ್ಲಿ ಮಕ್ಕಳ ಮನಸ್ಸಿನಲ್ಲಿ ಓದಿನ ಜೊತೆಗೆ ಹೊರಗಿನ ಪ್ರಪಂಚದ ಅರಿವು, ಜೀವನದಲ್ಲಿ ಶಿಸ್ತನ್ನು ಮೂಡಿಸು ವುದು, ತಾಳ್ಮೆಯ ಮನೋಭಾವ ಹಾಗೂ ಸಮಾಜದಲ್ಲಿ ಪ್ರಾಮಾಣೀಕವಾಗಿ ಜೀವಿಸುವ ಪರಿಪಾಠದ ಕಲೆಯನ್ನು ಶಿಕ್ಷಕರು ಮೈಗೂಡಿಸಿಕೊಂಡು ಮುನ್ನೆಡೆಸಬೇಕು ಎಂದರು.

ಚಿಕ್ಕಮಗಳೂರು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಪ್ರೌಢಶಾಲಾ ಸಹ ಶಿಕ್ಷಕರು ಅನೇಕ ಕುಂದು ಕೊರತೆಗಳಿಗೆ ನಡುವೆಯೂ ಮಕ್ಕಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಖುಷಿಯ ಸಂಗತಿ. ಈಗಾಗಲೇ ಶಿಕ್ಷಕರ ಸಂಘಕ್ಕೆ ಭವನ ನಿರ್ಮಿಸುವ ಸಲುವಾಗಿ ಅಹವಾಲುಗಳು ಬಂದಿರುವ ಹಿನ್ನೆಲೆಯಲ್ಲಿ ಬೋಜೇಗೌಡರು ಹಾಗೂ ಶಾಸಕರ ಗಮನಕ್ಕೆ ತರುವ ಮೂಲಕ ಭವನ ನಿರ್ಮಾಣಕ್ಕೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣಕರ್ತರಾದ ಶಿಕ್ಷಕರು ಹಾಗೂ ಎಸ್.ಎಸ್.ಎಲ್.ಸಿ. ಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ವಿ.ಜಗದೀಶ್ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಿ.ರಂಗನಾಥಸ್ವಾಮಿ, ಅಂತೋಣಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ಆರ್.ಉದಯ್‌ಕು ಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್.ಜಯರಾಮ್, ತಾಲ್ಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಎಫ್.ಎಂ. ಛಲವಾದಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಪ್ರಭಾಕರ್, ಕಾರ್ಯದರ್ಶಿ ಜಿ.ಟಿ.ರಾಜ್‌ಕು ಮಾರ್, ಖಜಾಂಚಿ ಟಿ.ಜಿ.ಕೃಷ್ಣಮೂರ್ತಿರಾಜ್‌ಅರಸ್, ಸಂಘಟನಾ ಕಾರ್ಯರ್ದಿ ಸಿ.ಪಿ.ಕೃಷ್ಣೇಗೌಡ, ಕಾರ್ಯದರ್ಶಿ ಡಿ.ಪಿ.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...