Thursday, February 5, 2026
Thursday, February 5, 2026

Kisan Samman Nidhi Yojana ಕಿಸಾನ್ ಸಮ್ಮಾನ್ ನೋಂದಣಿಗೆ ಜೂನ್ 30 ಅಂತಿಮ ದಿನಾಂಕ

Date:

Kisan Samman Nidhi Yojana ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದೆ.

ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತರು ಜೂ.30 ರೊಳಗಾಗಿ ಯೋಜನೆಯ ಮಾರ್ಗಸೂಚಿಯಂತೆ e-KYC ಮಾಡಿಸುವುದು.

ಪ್ರತಿ ಅರ್ಹ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ ರೂ.6000/- ಗಳನ್ನು, ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರದಿಂದ ರೂ.4000/- ಗಳನ್ನು 2 ಕಂತುಗಳಲ್ಲಿ ಒಟ್ಟು ರೂ.10000/- ಗಳನ್ನು ನೀಡಲಾಗುತ್ತಿದೆ.

Kisan Samman Nidhi Yojana ಈ ಯೋಜನೆಯಡಿಯಿರುವ ಫಲಾನುಭವಿಗಳಿಗೆ ಮುಂದಿನ ಕಂತು ತಮ್ಮ ಬ್ಯಾಂಕ್‌ ಖಾತೆಗೆ ಜಮೆಯಾಗಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಆದ್ದರಿಂದ ರೈತರು ತಮ್ಮ ಆಧಾರ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ನೊಂದಾಯಿಸಿರುವ ಮೊಬೈಲ್‌ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್‌ ಕೆಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸುವುದು.

ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ PMKISAN e-KYC through Face Recognition App ಮೂಲಕ ಸಹ ಜೂ.30 ರೊಳಗಾಗಿ e-KYC ಮಾಡಿಸುವಂತೆ ರೈತರಿಗೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...