Saturday, December 6, 2025
Saturday, December 6, 2025

Super Specialty Eye Hospital ಕಣ್ಣಿನ ಆರೋಗ್ಯಕ್ಕೆ ಮಹತ್ವ ನೀಡಿ-ಭಾಗ್ಯಕ್ಕ

Date:

Super Specialty Eye Hospital ಮಾನವನ ಬದುಕಿನ ಮಾರ್ಗದಲ್ಲಿ ಕಣ್ಣುಗಳು ಅತ್ಯಮೂಲ್ಯ ಅಂಗ. ಇವುಗಳನ್ನು ಸಂರಕ್ಷಿಸುವ ಜೊತೆಗೆ ಹಾನಿಗೊಳಗಾದಂತೆ ಜಾಗೃತೆಯಿಂದ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಬಿಕ್ಕೆಮನೆ ಹಾಗೂ ವಿಗರ್-ಡಿ ಇವರ ಸಂಯುಕ್ತಾಶ್ರಯಲ್ಲಿ ನಡೆದ ಉಚಿತಾ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಜಗತ್ತಿನ ಸುಂದರತೆ ಒಳಗೊಂಡಂತೆ ಒಳ್ಳೆಯದು ಹಾಗೂ ಕೆಟ್ಟದ್ದನ್ನು ನೋಡುವುದಕ್ಕೆ ಕಣ್ಣು. ಆದರೆ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಬಗ್ಗೆ ಹೆಚ್ಚು ಗಮನಹರಿಸದಿರುವುದು ಬೇಸರ ಸಂಗತಿ. ಆ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ನಡೆಯುವ ಉಚಿತ ಶಿಬಿರಗಳಲ್ಲಿ ಗ್ರಾಮಸ್ಥರು ಪಾಲ್ಗೊಂಡು ತಪಾಸಣೆಗೊಳಪಡಿಸಿ ದೃಷ್ಟಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

Super Specialty Eye Hospital ನಗರ ಹೊರತುಪಡಿಸಿದರೆ ಗ್ರಾಮೀಣ ಭಾಗದಲ್ಲಿ ಅತಿಹೆಚ್ಚು ವೃದ್ದರು ದೃಷ್ಟಿ ಸೇರಿದಂತೆ ಆರೋಗ್ಯ ಸಮಸ್ಯೆ ಗಳಿರುತ್ತವೆ. ಚಿಕಿತ್ಸೆಗೊಳಪಡಿಸಲು ತೆರಳಲಿಕ್ಕೆ ಆರ್ಥಿಕ ಸಂಕಷ್ಟವಿರುವ ಹಿನ್ನೆಲೆಯಲ್ಲಿ ಸುಮ್ಮನಾಗುವ ಸ್ಥಿತಿ ಹಲ ವಾರು ಗ್ರಾಮಗಳಲ್ಲಿವೆ. ಆದ್ದರಿಂದ ಅಲ್ಲಲ್ಲಿ ನಡೆಯುವ ಉಚಿತ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ರೂವಾರಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ತಾಪಮಾರಿ ಏರಿಕೆಯಾಗುತ್ತಿರುವ ಪರಿಣಾಮ ಮಾನವನಿಗೆ ಇದರಿಂದ ಅತಿಹೆಚ್ಚು ಆರೋಗ್ಯ ಕಾಡುತ್ತಿದೆ. ಇದನ್ನು ನಿವಾರಿಸಲು ಸಮಾಜದ ನಾಗರೀಕರು ಪ್ರಕೃತಿಯನ್ನು ಕಾಪಾಡಲು ಮುಂದಾಗಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಕೋಟಿಗಟ್ಟಲೇ ಆಸ್ತಿ ಹೊಂದಿದ ವ್ಯಕ್ತಿಯೂ ಸಹ ಆರೋಗ್ಯ ಉತ್ತಮವಾಗದಿದ್ದರೆ ಬದುಕು ಏನೆಂಬುದನ್ನು ತಿಳಿಸುತ್ತದೆ. ಆ ನಿಟ್ಟಿನಲ್ಲಿ ನಾಗರೀಕರು ಎಚ್ಚರವಹಿಸಿಕೊಂಡು ಕಣ್ಣು ಸೇರಿದಂತೆ ಶರೀರಿದ ವಿವಿಧ ಭಾಗಗಳಿಗೆ ಪೂರಕವಾಗುವಂತಹ ವ್ಯಾಯಾಮ ಸೇರಿದಂತೆ ಹಣ್ಣುತರಕಾರಿಗಳನ್ನು ಸೇವಿಸಬೇಕು ಎಂದು ಕಿವಿಮಾತು ಹೇಳಿದರು.

ವೃದ್ದರಲ್ಲಿ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಪೊರೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ಮಾಡಿಸಬೇಕು. ಇಲ್ಲವಾದಲ್ಲಿ ಮುಂದೆ ಪೂರ್ಣಪ್ರಮಾಣದ ದೃಷ್ಟಿ ಸಮಸ್ಯೆ ಎದುರಾಗಲಿದೆ. ಅಂತಹ ಸಮಸ್ಯೆ ಅನು ಭವಿಸುವವರಿಗೆ ಶಿಬಿರದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಮೂಲಕ ಉಚಿತ ಕನ್ನಡಕದ ವ್ಯವಸ್ಥೆಯನ್ನು ಕಲ್ಪಿ ಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ವಸ್ತಾರೆ, ಕೆಳಗೂರು ಹಾಗೂ ಕೂದುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಗ್ರಾಮಸ್ಥರಿಗೆ ಏರ್ಪಡಿಸಿದ್ದ ಶಿಬಿರದಲ್ಲಿ ವೃದ್ದರು, ಮಹಿಳೆಯರು ಭಾಗವಹಿಸಿ ಕಣ್ಣು, ಬಿಪಿ ತಪಾಸಣೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಜಮೀಲ್ ಅಹ್ಮದ್, ವಸ್ತಾರೆ ಗ್ರಾ.ಪಂ. ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಮಧುಸೂದನ್, ಸದಸ್ಯೆ ಸುಧಾ, ಕೆಳಗೂರು ಗ್ರಾ.ಪಂ. ಸದಸ್ಯ ಎಂ.ಡಿ.ಮಂಜಯ್ಯ, ಮಾಜಿ ಸದಸ್ಯ ನವೀಣ್, ಉಪನ್ಯಾಸಕ ಎಂ.ಎಂ.ಲೋಕೇಶ್, ವಸ್ತಾರೆಯ ಶಿವೇಗೌಡ, ಡಾ|| ಮೃಂದಾ ಹಾಗೂ ಸಿಬ್ಬಂದಿಯ ವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...