Karnataka State Press Distributors Union ಶಿವಮೊಗ್ಗ ಪತ್ರಿಕಾ ವಿತರಕರಿಗೆ ಮತ್ತು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಸಲುವಾಗಿ 2018-19 ರ ಬಜೆಟ್ ನಲ್ಲಿ ನಾಮಕಾವಸ್ತೆಗೆ ಎರಡು ಕೋಟಿ ಮೀಸಲಿಟ್ಟಿದ್ದು ಇದುವರೆಗೂ ಯಾವುದೇ ಸೌಲಭ್ಯಗಳನ್ನು ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ವಿತರಿಸಿದ ಇರುವುದು ವಿಷಾದನೀಯ.
ಸರ್ಕಾರ ಕೂಡಲೇ ಕ್ಷಮಾಭಿವೃದ್ಧಿ ನಿಧಿ ಸ್ಥಾಪಿಸುವ ಮೂಲಕ ಪತ್ರಿಕಾ ವಿತರಕರ ಬೇಡಿಕೆಗಳನ್ನು ಈಡೇರಿಸಬೇಕು. ದಿನಪತ್ರಿಕೆ ಹಂಚಲು ಇವಿಎಂ ಬೈಕ್ ಅಥವಾ ಮೊಪೆಡ್ ತೆಗೆದುಕೊಳ್ಳಲು ಸಾಲ ಸೌಲಭ್ಯ ಕೊಡಿಸಬೇಕು. ಪತ್ರಿಕೆ ಹಂಚುವ ಸಮಯದಲ್ಲಿ ಮೃತಪಟ್ಟಲ್ಲಿ ,05 ಲಕ್ಷ ಸಹಾಯಧನ ನೀಡಬೇಕು ಅಪಘಾತವಾದಾಗ ಆಸ್ಪತ್ರೆಯ ವೆಚ್ಚ ಬರಿಸಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಾಲತೇಶ್ ಎನ್ ತಿಳಿಸಿದರು.
ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡತ್ತಾ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ ಹಾಗೂ ಉಚಿತ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
Karnataka State Press Distributors Union ಪತ್ರಕರ್ತರು ಮತ್ತು ಪತ್ರಿಕಾ ವಿತರಕರು 65 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ವತಿಯಿಂದ ಪಿಂಚಣಿ ವ್ಯವಸ್ಥೆ ಮಾಡಬೇಕು. ಮತ್ತು ಅಳಿವಿನ ಅಂಚಿನಲ್ಲಿರುವ ಪತ್ರಿಕಾ ರಂಗಕ್ಕೆ ಸರ್ಕಾರ ಸಬ್ಸಿಡಿ ನೀಡುವ ಮೂಲಕ ಉತ್ತೇಜನ ನೀಡಿ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಖಾಸಗಿ ಶಾಲಾ ಕಾಲೇಜುಗಳಲ್ಲೂ ಕೂಡ ಪತ್ರಿಕೆ ಸರಬರಾಜು ಮಾಡಲು ಆದೇಶ ನೀಡಬೇಕು ಎಂದು ಈ ಸಾಲಿನ ಬಜೆಟ್ ನಲ್ಲಿ ಪತ್ರಿಕಾ ವಿತರಕರಿಗೆ ಮತ್ತು ಪತ್ರಕರ್ತರಿಗೆ ನಾವು ಕೋರಿರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಈ ಮೂಲಕ ಒತ್ತಾಯಿಸಿದರು.
ಸಂದರ್ಭದಲ್ಲಿ ಹುಲಿಗಿ ಕೃಷ್ಣ ಶಿಕಾರಿಪುರ, ಪರಶುರಾಮ್ ರಾವ್ ಭದ್ರಾವತಿ ಗಜೇಂದ್ರ ಶಿಕಾರಿಪುರ ವೆಂಕಟೇಶ್ ಶಿವಮೊಗ್ಗ, ಮಲ್ಲಿಕಾರ್ಜುನ್, ಮಾಲತೇಶ್ ಹಾಗೂ ಹಿರಿಯ ಪತ್ರಿ ಕಾ ವಿತರಕ ಮುಸ್ತಫ, ಪ್ರಧಾನ ಕಾರ್ಯದರ್ಶಿ ನಜೀರ್ ರಾಮು ದುರ್ಘೋಜಿ ಉಪಸ್ಥಿತರಿದ್ದರು.