Department Of Food and Civil Services ತರಕಾರಿ ಬೆಲೆ ಏರಿಕೆ ಮತ್ತು ವಿದ್ಯುತ್ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಈಗ ಬೇಳೆಕಾಳುಗಳ ದರ ಹೆಚ್ಚಳದಿಂದ ತಲೆನೋವು ಉಂಟಾಗಿದೆ.
ತರಕಾರಿಗಳ ಜೊತೆಗೆ ಬೇಳೆಕಾಳು ಧಾರಣೆಯು ಗಗನಕ್ಕೇರಿರುವುದರಿಂದ ಜನ ತತ್ತರಿಸಿದ್ದಾರೆ. ಈಗ ಖರೀದಿಯನ್ನೆ ಕಡಿಮೆ ಮಾಡಿದ್ದಾರೆ.
Department Of Food and Civil Services ಕಳೆದ ವರ್ಷ ಅನಾವೃಷ್ಟಿಯಿಂದ ತೊಗರಿ ಬೆಳೆ ಹಾಳಾಗಿತ್ತು. ದೇಶದ ಹಲವೆಡೆ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬೇಡಿಕೆಗೆ ತಕ್ಕಷ್ಟು ತೊಗರಿ ಉತ್ಪಾದನೆ ಆಗದ ಪರಿಣಾಮ ತೊಗರಿಬೇಳೆ ಮಾತ್ರ ಸುಮಾರು ಒಂದು ತಿಂಗಳ ಹಿಂದೆಯೇ ಹೆಚ್ಚಾಯಿತು. ಉಳಿದ ಧಾನ್ಯಗಳ ಬೆಲೆಯಲ್ಲಿ ಅಂತಹ ಹೆಚ್ಚಳವಾಗಿಲ್ಲ. ಹೊಸ ಬೆಳೆ ಬರುವವರಿಗೆ ದರಗಳೇ ಏರಿಕೆ ಮುಂದುವರಿಯುತ್ತದೆ ಎಂದು ಎಪಿಎಂಸಿ ಸಗಟು ಧಾನ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟೆ ಅವರು ತಿಳಿಸಿದ್ದಾರೆ.