ಎಸ್.ಎಲ್.ಭೈರಪ್ಪ
ಅವರ” ನಾಯಿ ನೆರಳು ಪರಿಚಯ -ಅಂಜುಮ್. ಬಿ.ಎಸ್.
S.L.Bhyrappa ನಾನು ಇತ್ತೀಚೆಗೆ ಓದಿದ ಪುಸ್ತಕ ಎಸ್. ಎಲ್ . ಬೈರಪ್ಪನವರ ಪುಸ್ತಕ ನಾಯಿ ನೆರಳು.
ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು… ಇವರ ಬರಹಗಳು ಎಂತವರನ್ನು ಕೂಡ ತಮ್ಮತ್ತ ಸೆಳೆಯುತ್ತವೆ..
ನಾಯಿ-ನೆರಳು ಪುಸ್ತಕ ನಮ್ಮ ಜನರ ಜೀವನ, ಭಕ್ತಿ, ಶ್ರದ್ದೆ ಮತ್ತು ಅವರಲ್ಲಿ ಮರೆಯಾಗುತ್ತಿರುವ ಭಾರತಿಯ ಸಂಸ್ಕೃತಿ ಬಗ್ಗೆ ಪುನರ್ಜನ್ಮ, ಕರ್ಮ, ಮತ್ತು ಸತ್ಯವನ್ನು ಆದಾರವಾಗಿಟ್ಟುಕೊಂಡು ಒಂದು ಸುಂದರ ಕಥೆಯಾಗಿದೆ.
ಕಥೆಯಲ್ಲಿ ಬರುವ ಅಚುತ್ಯ ಎಂಬ ಪಾತ್ರ ಆಧುನಿಕ ಜೀವನ ಪ್ರತಿಬಿಂಬವಾದರೆ, ಮಿಕ್ಕೆಲ್ಲ ಪಾತ್ರಗಳು ನಮ್ಮ ಪೂರ್ವಜರರನ್ನು ಪ್ರತಿನಿದಿಸುತ್ತವೆ.
ವೆಂಕಮ್ಮ ಎಂಬ ಮುಖ್ಯ ಪಾತ್ರ ಗಂಡನೇ ಸರ್ವಸ್ವ ಎನ್ನುವ ಹೆಣ್ಣಿನ ಭಾವನೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
S.L.Bhyrappa ಕಥೆಯಲ್ಲಿ ಬರುವ ಪ್ರತಿ ಪಾತ್ರವೂ ಕೂಡ ಒಂದೊಂದು ವಿಚಾರಗಳನ್ನ ಮನಸ್ಸಿನಲ್ಲಿ ಹುಟ್ಟಿಸುತ್ತವೆ.. ಪ್ರೊಫೆಸರ್ ರಾಸ್ ಎನ್ನುವ ಪಾತ್ರವು ಪುನರ್ಜನ್ಮ ಎನ್ನುವುದೇ ಇಲ್ಲ ಎಂಬಂತೆ ಬಿಂಬಿತವಾಗಿದೆ.
ನಾಯಿ ನೇರಳು” ಎಂಬ ಹೆಸರಿನ ಚಲನಚಿತ್ರವನ್ನು ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದಾರೆ, ಅವರು ಕಾದಂಬರಿಗೆ ಹೊಸ ದೃಷ್ಟಿಕೋನವನ್ನು ನೀಡುವ ಪ್ರಸ್ತುತ ಪಾತ್ರಗಳಿಗೆ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ.
ಪುನರ್ಜನ್ಮ ಮತ್ತು ನಿಗೂಢ ವಿಜ್ಞಾನದ ಬಗ್ಗೆ ಮಾತನಾಡುವ ಪುಸ್ತಕ.
ಕಥೆಯ ಕೊನೆಯವರೆಗೂ ಓದುಗರ ಮನಸ್ಸಿನಲ್ಲಿ ಕುತೂಹಲವನ್ನು ಹುಟ್ಟು ಹಾಕುವ ನಾಯಿ ನೆರಳು ಪುಸ್ತಕ ಹೊಸದಾಗಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವವರಿಗೆ ಒಂದೊಳ್ಳೆ ಪುಸ್ತಕ ಎನ್ನಬಹುದು.