K.H. Muniyappa ರಾಜ್ಯ ಸರ್ಕಾರ ಚುನಾವಣೆಯ ಪೂರ್ವ ನೀಡಿದ್ದ
ಐದು ಗ್ಯಾರಂಟಿಗಳನ್ನ ಈಗಾಗಲೇ ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಈಡೇರಿಸಿದೆ.
ಪ್ರಸ್ತುತ ಅನ್ನ ಭಾಗ್ಯದ ಉಚಿತ ಹತ್ತು ಕೆಜಿ ಅಕ್ಕಿ ವಿತರಣೆ ಮಾತ್ರ ಕಮಿಟ್ ಆದ ದಿನಕ್ಕೆ ಜಾರಿಗೆ ಮಾಡಲಾಗುತ್ತಿಲ್ಲ ಎಂಬ ಸಂದೇಹ ಕಾಡುತ್ತಿದೆ.
ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ
ಕೆ.ಎಚ್.ಮುನಿಯಪ್ಪ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಟೀಮ್ ನಲ್ಲಿ ದೆಹಲಿಗೆ ತೆರಳಿದ್ದರು.
ರಾಜ್ಯಕ್ಕೆ ಅಗತ್ಯವಿರುವ ಅಕ್ಕಿಗೆ ಬೇಡಿಕೆ ಸಲ್ಲಿಸಲು ಈರ್ವರೂ ಸಿದ್ಧರಾಗಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನ ಭೇಟಿಮಾಡಿದರು.
ಇತ್ತ ಸಚಿವ ಮುನಿಯಪ್ಪನವರು
ಕೇಂದ್ರದ ಆಹಾರ ಸಚಿವ ಪೀಯೂಷ್ ಗೋಯಲ್ ಅವರ ಭೇಟಿಗೆ ಜೂನ್ 22 ರಂದು ದಿನ ಗೊತ್ತು ಮಾಡಿಕೊಂಡಿದ್ದರು.
ಆದರೆ ಭೇಟಿಗೆ ಸಮ್ಮತಿ ನೀಡಿದ್ದ ಕೇಂದ್ರ ಸಚಿವರು ಕೊನೇಘಳಿಗೆಯಲ್ಲಿ ತಮ್ಮ ನಿಲುವು ಬದಲಿಸಿದರಂತೆ.
ಹೀಗಾಗಿ ಸಚಿವ ಮುನಿಯಪ್ಪನವರು
ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವರು,
K.H. Muniyappa ಹಿರಿಯ ರಾಜಕಾರಣಿಗಳಾಗಿರುವ ರಾಜ್ಯದ ಆಹಾರ ಸಚಿವ ಮುನಿಯಪ್ಪನವರಿಗೆ ದೆಹಲಿಯ ಒಡನಾಟ ಹೊಸದೇನಲ್ಲ.
ಅನ್ನಭಾಗ್ಯದ ವಿಚಾರದಲ್ಲಿ ರಾಜಕೀಯ ಮಾಡುವುದು ಸ್ಪಷ್ಟವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಂತೂ ಶುಕ್ರವಾರ ರಾಜ್ಯದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರುಕೇಂದ್ರ ಆಹಾರ ಮಂತ್ರಿ ಪೀಯೂಷ್ ಗೋಯೆಲ್ ಅವರನ್ನ ಭೇಟಿ ಮಾಡಿದರು.
ಸುಮಾರು ಮೂವತ್ತು ನಿಮಿಷಗಳ ಕಾಲ ಅನ್ನಭಾಗ್ಯದ ಅಕ್ಕಿ ಕುರಿತು ಚರ್ಚೆ ಮಾಡಲಾಯಿತು.
ಸಚಿವ ಪೀಯೂಷ್ ಗೋಯೆಲ್ ಅಕ್ಕಿ ಸರಬರಾಜು ಮಾಡಲು ನಿರಾಕರಿಸದರು.
ಭಾರತೀಯ ಆಹಾತ ನಿಗಮದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನಿರುವ ಸಂಗತಿ
ಅವರ ಗಮನಕ್ಕೆ ತಂದೆವು. ಆಗ ಕೇಂದ್ರ ಸಚಿವರು ನಿಗಮದ ಅಕ್ಕಿ ದಾಸ್ತಾನು ಅನ್ಯ ಕಾರ್ಯಕ್ರಮಗಳಿಗೆ ಅಗತ್ಯವಿದೆ ಎಂದು ಉತ್ತರಿಸಿದರು..
ಇದರಿಂದ ಅಕ್ಕಿ ರಾಜಕೀಯ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಸಚಿವ ಮುನಿಯಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.