World Music Day 9ನೇ ಅಂತರಾಷ್ಟ್ರಿಯ ಯೋಗ ದಿನದಂದು ಶ್ರೀ ಆದಿಚುಂಚನಗಿರಿ ಶಾಲೆ ಮತ್ತು ಕಾಲೇಜು ಮತ್ತು ಅನನ್ಯ ಶಿಕ್ಷಣ ಟ್ರಸ್ಟ್, ಭದ್ರಾವತಿ ಇವರ ಸಹಯೋಗದಲ್ಲಿ ಆಚರಿಸಲಾಯಿತು.
ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆಯಲ್ಲಿ ಶಾಲಾ ಮತ್ತು ಕಾಲೇಜಿನ 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಅಂತರಾಷ್ಟ್ರಿಯ ಯೋಗ ದಿನದ ಜೊತೆಗೆ ವಿಶ್ವ ಸಂಗೀತ ದಿನದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವೈಎಸ್ ಎಲ್ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಅವರೊಂದಿಗೆ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಮತ್ತು ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾ ಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ರವರು ಉಪಸ್ಥಿತರಿದ್ದವರನ್ನು ಸಭೆಯನ್ನುದ್ದೇಶಿಸಿ ಮಾತನಾಡಿದರು.
World Music Day ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಕಾಲೇಜಿನ ವಿದ್ಯಾರ್ಥಿಗಳಾದ ಕು. ಅನನ್ಯ ಸಿಂಧ್ಯ.ಬಿ.ಎಸ್ ಮತ್ತು ಕು.ಸಹನಾ.ಆರ್ ಅವರು ವಿವಿಧ ಯೋಗಾಸನ ಭಂಗಿಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಯೋಗ ಪ್ರದರ್ಶನ ಮಾಡಲು ಮಾರ್ಗದರ್ಶನ ನೀಡಿದರು.
ವಿಶ್ವ ಸಂಗೀತ ದಿನದ ಅಂಗವಾಗಿ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆಯ ವಿದ್ಯಾರ್ಥಿಗಳು ಸುಮಧುರ ಗೀತೆಗಳ ಮೂಲಕ ಪ್ರೇಕ್ಷಕರನ್ನು ಪುಳಕಿತಗೊಳಿಸಿದರು.
ಪ್ರಾಂಶುಪಾಲರಾದ ಡಾ|| ಎಸ್. ಹರಿಣಾಕ್ಷಿ ಹಾಗೂ ಇತರೆ ಶಿಕ್ಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಕರಾದ ಡಾ|| ಲೋಹಿತ್ ಮತ್ತು ಶ್ರಿ ಜಯರಾಮ್ ರವರಿಗೆ ಕಿರುಕಾಣಿಕೆ ನೀಡಿ ಅಭಿನಂದಿಸಲಾಯಿತು.
ಕಾಲೇಜಿನ ವಿದ್ಯಾರ್ಥಿನಿ ಮತ್ತು ಯೋಗಪಟು ಕು.ಅನನ್ಯ ಸಿಂಧ್ಯ.ಬಿ.ಎಸ್ ಅವರನ್ನು ಸನ್ಮಾನಿಸಲಾಯಿತು.