Karnataka Sanga ಪ್ರತಿಷ್ಠಿತ ಕರ್ನಾಟಕ ಸಂಘ ಹತ್ತು ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದೆ.
ಇದೀಗ ಎರಡು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಾಹಿತ್ಯಾಸಕ್ತರನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದೆ.
ದಿನಾಂಕ 24.06.2023 ರಂದು ಶನಿವಾರ ಸಂಜೆ 05:30ಕ್ಕೆ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ “ಗೋಪಾಲಕೃಷ್ಣ ಅಡಿಗರ ಕಾವ್ಯ ಸಿಂಚನ” ಎಂಬ ವಿಷಯದ ಬಗ್ಗೆ ಸಾಗರದ ಖ್ಯಾತ ವಾಗ್ಮಿ ವಿ.ಗಣೇಶ್ ಅವರು ಮಾತನಾಡಲಿದ್ದಾರೆ.
ದಿನಾಂಕ 26.06..2023 ರಂದು ಕನ್ನಡದ ಪ್ರಸಿದ್ಧ ವಿಮರ್ಶಕರ ಸ್ಮರಣಾರ್ಥ ಶ್ರೀ ಜಿ.ಹೆಚ್. ನಾಯಕ್ ಮತ್ತು ಕನ್ನಡ ನವ್ಯ ವಿಮರ್ಶೆ ಕುರಿತಾದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಕುವೆಂಪುವಿವಿ ಪದವಿ ಕನ್ನಡ ಅಧ್ಯಾಪಕರ ವೇದಿಕೆ ಕೈ ಜೋಡಿಸಲಿದೆ. ಒಟ್ಟು ಎರಡು ಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ಮೊದಲ ಗೋಷ್ಠಿಯಲ್ಲಿ ಜಿ.ಹೆಚ್. ನಾಯಕರ ವ್ಯಕ್ತಿತ್ವದ ಬಗ್ಗೆ ಡಾ. ಕುಮಾರಚಲ್ಯ ಅವರು ವಿಷಯ ಮಂಡಿಸಲಿದ್ದಾರೆ.
Karnataka Sanga ಅಲ್ಲದೆ ಡಾ. ರಾಜೇಂದ್ರ ಚೆನ್ನಿಯವರು ‘ಕನ್ನಡ ನವ್ಯ ವಿಮರ್ಶೆ ಒಂದು ಮರು ಅವಲೋಕನ’ ವಿಚಾರವಾಗಿ ಪ್ರಬಂಧ ಮಂಡಿಸುವರು.
ಎರಡನೆಯ ಗೋಷ್ಠಿಯಲ್ಲಿ ‘ಆದರ್ಶ ಪ್ರಾಧ್ಯಾಪಕರಾಗಿ ಶ್ರೀ ಜಿ.ಹೆಚ್. ನಾಯಕ್’ ವಿಷಯವಾಗಿ ಡಾ. ಎಲ್.ಸಿ. ಸುಮಿತ್ರ ಪ್ರಬಂಧ ಮಂಡಿಸುವರು. ಡಾ. ಬಿಎಲ್. ರಾಜು ಅವರು ‘ಜಿ.ಹೆಚ್.ನಾಯಕರ ಪ್ರಗತಿಪರ ಚಿಂತನೆ’ ವಿಷಯವಾಗಿ ಪ್ರಬಂಧ ಮಂಡಿಸಲಿದ್ದಾರೆ.
ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘಂದ ಅಧ್ಯಕ್ಷ ಎಂ.ಎನ್ ಸುಂದರ ರಾಜ್ ವಹಿಸಲಿದ್ದು, ಡಾ. ಕೆ. ಆಂಜನಪ್ಪ, ಅಧ್ಯಕ್ಷರು, ಕುವೆಂಪು ವಿವಿ ಪದವಿ ಕನ್ನಡ ಅಧ್ಯಾಪಕರ ವೇದಿಕೆ ಇವರು ಉಪಸ್ಥಿತರಿರುವರು.
ಖ್ಯಾತ ವಿಮರ್ಶಕರಾದ ಡಾ. ಟಿ.ಪಿ. ಅಶೋಕ ಅವರು ಸಮಾರೋಪ ನುಡಿಯನ್ನು ಆಡಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರ್ನಾಟಕ ಸಂಘದ ಕಾರ್ಯದರ್ಶಿ ಪ್ರೊ. ಆಶಾಲತಾ ಎಂ. ಅವರು ವಿನಂತಿಸಿದ್ದಾರೆ.