Sahyadri College Shivamogga ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪ್ರಾರ೦ಭಗೊ೦ಡಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕ, ಆ೦ಧ್ರಪ್ರದೇಶ, ಮಧ್ಯಪ್ರದೇಶ, ತಮಿಳುನಾಡು ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ೧೬೦ ಎನ್.ಎಸ್.ಎಸ್. ಸ್ವಯ೦ಸೇವಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದಾರೆ.
ಎರಡನೇ ದಿನದಂದು ಧ್ವಜಾರೋಣಹವನ್ನು ಕೋಟೆ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಶಿವಪ್ರಸಾದ್ ರಾವ್ ರವರು ನೆರವೇರಿಸಿದರು. ಶ್ರೀ ವಿಜಯಕುಮಾರ್ ಜಿ., ಹಾಗೂ ವಿವಿಧ ಕಾಲೇಜುಗಳ ಎನ್.ಎಸ್.ಎಸ್. ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಬಿರದ ಅಂಗವಾಗಿ ಶಿಬಿರಾರ್ಥಿಗಳು ಸಕ್ರೆಬೈಲು ಆನೆಬಿಡಾರಕ್ಕೆ ಭೇಟಿ ನೀಡಿದರು. ಉಪ ಅರಣ್ಯ ಸ೦ರಕ್ಷಣಾಧಿಕಾರಿಗಳಾದ ಶ್ರೀ ಪ್ರಸನ್ನ ಕೃಷ್ಣ ಪಟಗರ ಅವರು, ಪರಿಸರ ಸಮತೋಲನದಲ್ಲಿ ಜೀವ ಸ೦ಕುಲಗಳ ಪಾತ್ರ, ಆನೆಗಳ ಮಹತ್ವ, ಜೀವನ ಶೈಲಿ ಕುರಿತಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು.
Sahyadri College Shivamogga ನಂತರ ಇತಿಹಾಸ ಪ್ರಸಿದ್ಧ ಕವಲೇದುರ್ಗ ಕೋಟೆಗೆ ಚಾರಣ ಹಮ್ಮಿಕೊಳ್ಳಲಾಗಿತ್ತು. ಚಾರಣ ಸಮಯದಲ್ಲಿ ಕವಲೇದುರ್ಗದ ಇತಿಹಾಸವನ್ನು ಶಿಬಿರಾರ್ಥಿಗಳಿಗೆ ತಿಳಿಸೊಕೊಡಲಾಯಿತು. ಅಲ್ಲಿಂದ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಶೃ೦ಗೇರಿಗೆ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದರು. ಈ ಸ೦ದರ್ಭದಲ್ಲಿ ಶ್ರೀ ಜೆ.ಸಿ.ಬಿ. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀ ಪ್ರಶಾಂತ್ ಹಾಗೂ ಶ್ರೀ ಸ೦ತೋಷ್‌ಕುಮಾರ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಒಟ್ಟಾರೆಯಾಗಿ ಈದಿನ ಪ್ರವಾಸದ ಸಮಯದಲ್ಲಿ ಶಿಬಿರಾರ್ಥಿಗಳು ಕರ್ನಾಟಕದ ಸ೦ಸ್ಕ್ರೃತಿ, ಇತಿಹಾಸ, ಜೀವವೈವಿಧ್ಯದ ಬಗ್ಗೆ ವಿಶೇಷ ಮಾಹಿತಿಯನ್ನು ಪಡೆದುಕೊಂಡರು.
ಕಾರ್ಯಕ್ರಮ ಸಂಯೋಜಾನಾಧಿಕಾರಿಗಳಾದ ಡಾ. ನಾಗರಾಜ ಪರಿಸರವರು ಪ್ರವಾಸದ ನೇತೃತ್ವವಹಿಸಿದ್ದರು. ವಿವಿಧ ರಾಜ್ಯಗಳಿಂದ ಆಗಮಿಸಿದ ಶಿಬಿರಾಧಿಕಾರಿಗಳು, ಶಿಬಿರಾರ್ಥಿಗಳು ಭಾಗವಹಿಸಿದ್ದರು.