Saturday, December 6, 2025
Saturday, December 6, 2025

International Yoga Day ಎಲ್ಲರೂ ಯೋಗದ ಮಹತ್ವ ಅರಿತು ಯೋಗಾಭ್ಯಾಸ ಮಾಡಿ- ಯೋಗ ಗುರು ರುದ್ರಾರಾಧ್ಯ

Date:

International Yoga Day ಅಂತರಾಷ್ಟೀಯ 9ನೇ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹಾಗೂ ಯೋಗ ಶಿಕ್ಷಕರಿಗೆ ನಮ್ಮ ಟಿವಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದಭ೯ದಲ್ಲಿ ಮಾತನಾಡಿದ ಸಿ.ವಿ.ರುದ್ರಾರಾಧ್ಯರವರು, ಶ್ರೇಷ್ಠ ಪರಂಪರೆಯ ಭಾರತ ದೇಶವು ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದೆ. ಎಲ್ಲ ದೇಶದ ಜನರು ಆರೋಗ್ಯ ಮತ್ತು ಯೋಗದ ಮಹತ್ವವನ್ನು ಅರಿತುಕೊಂಡು ಒಪ್ಪಿಕೊಂಡು ಯೋಗ ದಿನ ಆಚರಿಸುತ್ತಿದ್ದಾರೆ. ಸಾರ್ವಜನಿಕರು ಸಹ ದಿನ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ನಗರದ 32 ಬಡಾವಣೆಗಳಲ್ಲಿ ಯಶಸ್ವಿಯಾಗಿ ಕ್ರಮ ಬದ್ಧ ಹಾಗೂ ಶಿಸ್ತು ಬದ್ಧವಾಗಿ ಯೋಗ ತರಬೇತಿ ನಡೆಸಲಾಗುತ್ತಿದೆ ಎಂದ ಅವರು, ಆಸಕ್ತರು ಹತ್ತಿರದ ಯೋಗ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

International Yoga Day ದಿನ ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಅನೇಕ ಕಾಯಿಲೆಗಳಿಂದ ಗುಣಮುಖರಾಗಬಹುದು ಎಂದು ಉದಾಹರಣೆ ಸಹಿತ ವಿವರಿಸಿದ ಅವರು, ಯೋಗ ಮಾಡಲು ವಯಸ್ಸಿನ ಮಿತಿಯಿಲ್ಲ. ಎಲ್ಲ ವಯೋಮಾನದವರು ಸೂಕ್ತ ತರಬೇತಿ ಪಡೆದು ಯೋಗ ಅಭ್ಯಾಸ ಮಾಡಬಹುದು ಎಂದರು.

ನಮ್ಮ ಟಿವಿ ವತಿಯಿಂದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದ ಅವರು, ಇದರಿಂದ ಅನೇಕರಿಗೆ ಸ್ಫೂರ್ತಿ ನೀಡುವ ಕೆಲಸ ಆಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಲಾಗುತ್ತಿದೆ ಎಂದರು.

ಕಾಯ೯ಕ್ರಮದಲ್ಲಿ, ಯೋಗದಲ್ಲಿ ಡಿಪ್ಲೋಮಾ ಪಡೆದು, ಪ್ರತಿ ನಿತ್ಯ ಯಾವುದೇ ಫಲಾಪೇಕ್ಷೆ ಇಲ್ಲದೇ, ಕ್ರಮಬದ್ಧವಾಗಿ ಯೋಗ, ಪ್ರಾಣಾಯಾಮ, ಧ್ಯಾನ, ತರಗತಿಗಳನ್ನು ರಾಘವ ಶಾಖೆಯಲ್ಲಿ ನಡೆಸಿಕೊಡುತ್ತಿರುವ ಶಿಕ್ಷಕರಾದ ಜಿ.ಎಸ್.ಓಂಕಾರ್, ಹರೀಶ್ ಹೆಚ್.ಕೆ., ವಿಜಯಕೃಷ್ಣರವರನ್ನು ಸನ್ಮಾನಿಸಲಾಯಿತು.

ನಮ್ಮ ಟಿವಿ ನಿರೂಪಕ ಜಿ.ವಿಜಯ್‌ಕುಮಾರ್, ಹಿರಿಯ ಟೆಕ್ನಿಷಿಯನ್ ಶ್ರೀಕಾಂತ್ ಹಾಗೂ ಯೋಗ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...