Dalita Sangarsha Samiti ಬದುಕಿಗೆ ಜೀವ ತುಂಬುವ ಜನಪದ ಹಾಡುಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರು ಕೂಡಾ ಇಂತಹ ಹಾಡುಗಳ ಅಭ್ಯಾಸಿಸುವ ಮೂಲಕ ದೇಶದ ಸಾಂಸ್ಕೃತಿಕ ಗಾಯನವನ್ನು ಬಲಿಷ್ಟಗೊಳಿಸಬೇಕು ಎಂದು ಮೈಸೂರು ಜಾನಪದ ಕಲಾವಿದ ಹೆಚ್.ಜನಾರ್ಧನ್ ಹೇಳಿದರು.
ಕುವೆಂಪು ಕಲಾಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಚಾಲನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಜೀವ ಜೀವದ ಹಾಡುಗಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನೂತನ ಶಾಸಕರುಗಳಿಗೆ ಅಭಿ ನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ಪುರೋಹಿತಶಾಹಿಯ ಕುತಂತ್ರ ದೌರ್ಜನ್ಯಗಳಿಂದ ಕಮರಿಹೋಗಿದ್ದ ಈ ನೆಲದ ಶೂದ್ರರು, ದಲಿತರು, ಅಲ್ಪಸಂಖ್ಯಾತರು ಸ್ವಾತಂತ್ರ್ಯ ಸ್ವಾಭಿಮಾನಿಗಳಿಂದ ಬದುಕಲು ಸಂವಿಧಾನ ಕಾರಣವಾಗಿದೆ.
ಅಂಬೇಡ್ಕರ್‌ರವರ ಬೆಳಕು ಕಾಪಾಡುವುದೆಂದರೆ ಅದು ಸಂವಿಧಾನ ರಕ್ಷಣೆಯೇ ಆಗಿದೆ ಎಂದರು.
ಪ್ರಸ್ತುತ ದೇಶದಲ್ಲಿ ಅನ್ಯಾಯ, ದೌರ್ಜನ್ಯ ಸಾಗುತ್ತಿದೆ. ದೇಶಾಭಿಮಾನದ ಹೆಸರೇಳಿಂಡು ಕೆಲವು ದ್ರೋಹಿಗಳು ಕೆಲಸ ಮಾಡುತ್ತಿರುವುದು ಬೇಸರ ಸಂಗತಿ. ಭವ್ಯ ಭಾರತವನ್ನು ಬೆಳಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು ಎಚ್ಚರ ತಪ್ಪಿದರೆ ಅದೋಗತಿಗೆ ತಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಸಂವಿಧಾನ ದೇಶದಲ್ಲಿ ಅಪಾಯದಂಚಿನಲ್ಲಿದೆ. ಬಸವಣ್ಣ ಮತ್ತು ಕುವೆಂಪುರಂತಹ ಮಹಾನೀಯರು ಸಂದೇಶಗಳ ಮೂಲಕ ಸಂವಿಧಾನದ ಮಹತ್ವವನ್ನು ತಿಳಿಸಲಾಗಿದೆ. ದಲಿತ ಕ್ರಾಂತಿಕಾರಕ ಗೀತೆಗಳಿಂದ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲಿದೆ ಎಂದರು.
Dalita Sangarsha Samiti ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ದಲಿತ ಸಮುದಾಯಕ್ಕೆ ನಗರದಲ್ಲಿರುವ ಅಂಬೇಡ್ಕರ್ ಭವನ ಪ್ರಸ್ತುತ ಸ್ಥಳಾವಕಾಶ ಕಡಿಮೆಯಿರುವ ಇರುವ ಹಿನ್ನೆಲೆಯಲ್ಲಿ ನಗರ ಹೊರವಲಯದಲ್ಲಿ ೪-೫ ಎಕರೆ ಜಾಗ ಗುರುತಿಸಿ ಬೃಹತ್ ಅಂಬೇಡ್ಕರ್ ಭವನ ನಿರ್ಮಿಸುವ ಜೊತೆಗೆ ಭವನದಲ್ಲೇ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಅಧ್ಯಯನ ಕೇಂದ್ರ ಮಾಡಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪನಿರ್ದೇಶಕ ಹೆಚ್.ಎಂ.ರುದ್ರಸ್ವಾಮಿ ವಹಿಸಿದ್ದರು. ಗಾಯಕರಾದ ಜನಾರ್ಧನ್ ಮತ್ತು ದೇವಾನಂದ್ ಅವರು ಡಾ.ಸಿದ್ದಲಿಂಗಯ್ಯ ರಚಿತ ಜಾನಪದ ಹಾಗೂ ತತ್ವಪದಗಳ ಗೀತೆಗಳನ್ನು ಲೀಲಾಜಾಲವಾಗಿ ಹಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಮುಖಂಡರಾದ ಹೊನ್ನಪ್ಪ ಯಲಗುಡಿಗೆ, ಬೀಳೆಕಲ್ಲು ಬಾಲಕೃಷ್ಣ, ಚಂದ್ರಶೇಖರ್, ಸಂತೋಷ್, ಗುರುಶಾಂತಪ್ಪ, ರವೀಶ್ ಕ್ಯಾತನಬೀಡು, ಪಿ.ಸಿ.ರಾಜೇಗೌಡ, ಹೆಚ್.ಎಸ್.ಶಿವಕು ಮಾರ್, ಎಸ್.ವೆಂಕಟೇಶ್, ಮತ್ತಿತರರಿದ್ದರು.