Uniform Civil Code ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಮೈತ್ ಉಲೇಮಾ -ಎ-ಹಿಂದ್ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ.
1,300 ವರ್ಷಗಳಿಂದ ನಮ್ಮದೇ ಕಾನೂನು ಪಾಲಿಸುತ್ತಿದ್ದೇವೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಂತ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ , ಬೀದಿಗಿಳಿದು ಪ್ರತಿಭಟನೆ , ಹಿಂಸಾಚಾರ ಮಾಡುವುದು ಸರಿಯಲ್ಲ ಎಂದು ಜಮೈತ್ ಉಲೇಮಾ -ಎ-ಹಿಂದ್ ಸಂಸ್ಥೆ ಮುಖ್ಯಸ್ಥ ಅರ್ಷದ್ ಮದಾನಿ ಅವರು ಸಮುದಾಯಕ್ಕೆ ಸಲಹೆ ನೀಡಿದ್ದಾರೆ.
Uniform Civil Code ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ಮಾಡಕೂಡದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಯಾವ ಸರ್ಕಾರವೂ ಯುಸಿಸಿಯನ್ನು ಜಾರಿಗೆ ತಂದಿಲ್ಲ. ಆದ್ದರಿಂದ ಸದ್ಯ ಕೇಂದ್ರ ಸರ್ಕಾರ ಕೂಡ ಜಾರಿಗೆ ತರಬಾರದು ಎಂಬುದು ನಮ್ಮ ಒತ್ತಾಯವಾಗಿದೆ.ಕೋಮು ಸೌಹಾರ್ದತೆಗೆ ಧಕ್ಕೆಯಾಗಿ, ಹಿಂದುಗಳು ಮತ್ತು ಮುಸ್ಲಿಮರು ಮತ್ತಷ್ಟು ದೂರವಾಗುತ್ತಾರೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.