Tuesday, March 24, 2026
Tuesday, March 24, 2026

Hampi Development Authority ಹಂಪಿ ಹೋಂ ಸ್ಟೇ ಗಳ ಮಾಲೀಕರ ಭವಿಷ್ಯ ರಕ್ಷಣೆ ಮಾಡಿ- ಗಾಲಿ ಜನಾರ್ದನ ರೆಡ್ಡಿ

Date:

Hampi Development Authority ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಹಂಪಿ ಮತ್ತು ಆನೆಗುಂದಿ ಭಾಗದ ಹೋಂ ಸ್ಟೇಗಳಿಂದ ಸುಮಾರು 2000ಕ್ಕೂ ಹೆಚ್ಚು ಜನರು ಬದುಕನ್ನು ಕಂಡುಕೊಂಡಿದ್ದಾರೆ. ವಿಶೇಷವಾಗಿ ಆನೆಗುಂದಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರದೇ ಆದ ಸ್ವಂತ ಭೂಮಿಯಲ್ಲಿ ಹೋಂ ಸ್ಟೇ ಕಟ್ಟಡಗಳನ್ನು ಶಾಶ್ವತ ಅಲ್ಲದ ರೀತಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ದೇಶ ವಿದೇಶಗಳಿಂದ ಬರುವಂತಹ ಪ್ರವಾಸಿಗರಿಗೆ ಒಳ್ಳೆಯ ಆತಿಥ್ಯವನ್ನು ಕೊಟ್ಟು ಪ್ರವಾಸಿಗರಿಗೆ ತುಂಬಾ ಸ್ನೇಹಪೂರ್ವಕವಾಗಿ, ಪ್ರವಾಸಿಗರಲ್ಲಿ ಹಂಪಿ ಆನೆಗೊಂದಿಯ ಸುತ್ತಮುತ್ತಿನ ಭಾಗಗಳ ಬಗ್ಗೆ ಪ್ರವಾಸಿಗರು ಇದು ನಮ್ಮ ದೇಶ, ನಮ್ಮ ಮನೆ ಎನ್ನುವ ರೀತಿಯಲ್ಲಿ ಆತಿಥ್ಯವನ್ನು ನೀಡುತ್ತಿದ್ದಾರೆ.
ಅಂತಹ ಹೋಂ ಸ್ಟೇಗಳ ಮಾಲೀಕರುಗಳು ಅತಂತ್ರದ ಪರಿಸ್ಥಿತಿಯಲ್ಲಿರುವುದು ಎಲ್ಲರ ಗಮನಕ್ಕೆ ಬಂದಿದೆ.
ಅದನ್ನ ನಾನೂ ಗಮನಿಸಿದ್ದೇನೆ.
ಎಂದು ಗಂಗಾವತಿ ಶಾಸಕ ಗಲಿ ಜನಾರ್ದನ ರೆಡ್ಡಿ‌ ತಮ್ಮ ಟ್ವೀಟ್ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
Hampi Development Authority ನಾನು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ್ ರವರನ್ನು ಭೇಟಿ ಮಾಡಿ ಹೋಂ ಸ್ಟೇ ಮಾಲೀಕರಿಗೆ ಯಾವುದೇ ತೊಂದರೆ ಆಗದಂತೆ ಮನವಿ ಮಾಡಲಾಯಿತು. ಅವರಿಗೆ ಬರುವಂತಹ ದಿನಗಳಲ್ಲಿ ಯಾವ ರೀತಿ ಸಹಾಯವನ್ನು ಮಾಡಬೇಕೆಂದು ಪ್ರಸ್ತಾಪಿಸಿದೆ.

ನನ್ನ ಮನವಿಗೆ ಸ್ಪಂದಿಸಿ ಈ ಸಮಸ್ಯೆಯ ಇತ್ಯರ್ಥಕ್ಕೆ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆಯುವುದಕ್ಕೆ ದಿನಾಂಕವನ್ನು ನಿಗದಿಪಡಿಸಲು ಸೂಚಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

India Scouts and Guides ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ

India Scouts and Guides ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು...

B.Y. Raghavendra ಯೋಜನೆಗಳು-ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು : ಬಿ.ವೈ.ರಾಘವೇಂದ್ರ

B.Y. Raghavendra ಪ್ರತಿಯೊಬ್ಬ ನಾಗರೀಕರಿಗೆ ಆರ್ಥಿಕ ಸಬಲೀಕರಣ ನೀಡಬೇಕೆಂಬ ಉದ್ದೇಶದಿಂದ ಅನುಷ್ಟಾನಗೊಳಿಸಲಾಗಿರುವ...

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...