Sunday, December 14, 2025
Sunday, December 14, 2025

Christ King School ಪರಿಸರಕ್ಕೆ ಪ್ರತಿಯೊಬ್ಬರೂ ಪೂರಕವಾಗಿರಬೇಕು-ಜಿ.ರಮೇಶ್

Date:

Christ the King School ಜೀವಸಂಕುಲಕ್ಕೆ ಸ್ವಚ್ಚಂಧ ಗಾಳಿ ಅವಶ್ಯವಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರಕ್ಕೆ ಪೂರಕವಾಗಿ ನಡೆದುಕೊಂಡರೆ ಮಾತ್ರ ಆರೋಗ್ಯಯುತ ಪ್ರಕೃತಿ ಸಂಪತ್ತು ನಮ್ಮದಾಗಲು ಸಾಧ್ಯ ಎಂದು ಸಿವಿಲ್ ಇಂಜಿನಿಯರಿಂಗ್ ಉಪಾಧ್ಯಕ್ಷ ಜಿ.ರಮೇಶ್ ಹೇಳಿದರು.

ಚಿಕ್ಕಮಗಳೂರು ನಗರದ ಕೋಟೆ ಸಮೀಪದ ಕ್ರೈಸ್ಟ್ ದ ಕಿಂಗ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಗತ್ತಿನಲ್ಲಿ ಕಾಡುಗಳ ನಾಶ ಹಾಗೂ ಪರಿಸರ ಮಾಲಿನ್ಯದಿಂದ ಮುಂದಿನ ದಿನಗಳಲ್ಲಿ ಆಮ್ಲಜನಕ ಕೊರತೆ ಎದುರಾಗುವ ಸಂಭವವಿದೆ. ಅದಲ್ಲದೇ ಭೂಮಿಯ ಓಝೋನ್ ಪದರಕ್ಕೂ ಇದರಿಂದ ಸಮಸ್ಯೆಯುಂಟಾಗಿ ಸೂರ್ಯನ ಕಿರಣಗಳು ನೇರವಾಗಿ ತಲುಪಿದರೆ ಜೀವಸಂಕುಲವು ಸರ್ವನಾಶದೆಡೆಗೆ ಹೋಗುವ ಆತಂಕ ಎದು ರಾಗಲಿದೆ ಎಂದು ಹೇಳಿದರು.

ಇಷ್ಟೆಲ್ಲಾ ಪರಿಸರ ಮಾಲಿನ್ಯ ಸಮಸ್ಯೆಗಳು ಉದ್ಬವಿಸುವ ನಿಟ್ಟಿನಲ್ಲಿ 1972ರಲ್ಲೇ ಹಲವು ದೇಶಗಳು ಒಂದೆಡೆ ಸೇರಿ ಪರಿಸರ ಮಾಲಿನ್ಯ ಮುಕ್ತಗೊಳಿಸುವ ಸಲುವಾಗಿ ಜೂ.05ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಿತು.

ಅಂದಿನಿಂದ ಇಲ್ಲಿಯವರೆಗೂ ಪರಿಸರ ಉಳಿಸುವಿಕೆಗೆ ಪಣ ತೊಡಲಾಗುತ್ತಿದೆ. ಇವುಗಳನ್ನು ಅರಿತು ಪ್ರಪಂಚದ ಪ್ರತಿಯೊಬ್ಬ ನಾಗರೀಕರು ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಪೂರಕವಾಗಿರಬೇಕು ಎಂದರು.

Christ the King School ಇಂದಿನ ಆಧುನಿಕ ಭರಾಟೆಯಲ್ಲಿ ಮಾನವ ಸಮೂಹ ಕೇವಲ ಹಣದ ಮೌಲ್ಯಕಷ್ಟೇ ಹೆಚ್ಚು ಆಸಕ್ತಿ ವಹಿಸು ತ್ತಿರುವುದು ದುದೈರ್ವ. ಇದರಿಂದ ಮುಂದಿನ ಜನಾಂಗಕ್ಕೆ ಸ್ವಚ್ಚಂಧ ಹಾಗೂ ಸುಂದರ ಪರಿಸರವನ್ನು ಕೊಂಡೊಯ್ಯ ಲು ಅಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದಿನಿಂದಲೇ ಮನೆಯ ಸುತ್ತಮುತ್ತಲು ಸಸಿಗಳನ್ನು ನೆಡುವ ಮೂಲಕ ವರ್ಷವೀಡಿ ದಿನಾಚರಣೆ ಆಚರಿಸಬೇಕು ಎಂದರು.

ಕ್ರೈಸ್ಟ್ ದ ಕಿಂಗ್ ಶಾಲೆಯ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ ಮಾನವ ಜನಾಂಗಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವುದು ಉತ್ತಮ ಗಾಳಿ. ಅದಕ್ಕೆ ಪೂರಕವಾಗುವ ಅರಳಿ, ಹೊಂಗೆ ಅಥವಾ ನೇರಳೆ ಸಸಿಗಳನ್ನು ಪೋಷಿ ಸಿ ಹೆಮ್ಮರವಾಗಿ ಬೆಳೆಸಿದರೆ ಮುಂದಿನ ಯುವಪೀಳಿಗೆಗೆ ನಾವುಗಳು ಬಳುವಳಿ ಕೊಟ್ಟಂತಾಗುತ್ತದೆ ಎಂದರು.

ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಪೂರಕವಾಗಿ ಅಭ್ಯಾಸಿಸುವ ಸಲುವಾಗಿ ಶಾಲೆಯನ್ನು ಉತ್ತಮ ಜಾಗದಲ್ಲಿ ನಿರ್ಮಿಸಲಾಗಿದೆ. ಇದರಿಂದ ಮಕ್ಕಳಿಗೆ ಸ್ವಚ್ಚಂಧ ಆಮ್ಲಜನಕದೊಂದಿಗೆ ಪ್ರಕೃತಿ ಮಡಿಲಲ್ಲಿ ಓದುವ ಹವ್ಯಾಸವನ್ನು ಹಾಕಿಕೊಟ್ಟಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಚಂದ್ರಪ್ರಭ ಶ್ರೀನಿವಾಸ್ ಹಾಗೂ ಮುಖ್ಯಶಿಕ್ಷಕರಾದ ಸುಮ, ಮಧು ಹಾಗೂ ವಿದ್ಯಾಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...