Tuesday, March 24, 2026
Tuesday, March 24, 2026

Department of Youth Empowerment and Sports ದೇಶದ ಭವಿಷ್ಯ ಯುವಜನರ ಮೇಲಿದೆ-ವೈ.ಎಂ.ಉಪ್ಪಿನ್

Date:

Department of Youth Empowerment and Sports ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್ಎಸ್ಎಸ್ ಕೋಶ, ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯ ಭಾರತ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಪ್ರಾರಂಭಗೊಂಡಿತು.

ಭಾರತ ಸರಕಾರದ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯದ ಅಧಿಕಾರಿಗಳಾದ ಶ್ರೀ ವೈ ಎಂ ಉಪ್ಪಿನ್ ವರು ಸಮಾರಂಭವನ್ನು ಉದ್ಘಾಟಿಸಿದರು.

ಅವರು ತಮ್ಮ ಭಾಷಣದಲ್ಲಿ, ” ಈ ದೇಶದ ಭವಿಷ್ಯ ಮತ್ತು ಭರವಸೆ ಯುವ ಜನರ ಮೇಲಿದೆ. ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಬೇಕಾದರೆ ಯುವ ಜನರು ಶ್ರದ್ದೆ ಮತ್ತು ಸಂಯಮದಿಂದ ವರ್ತಿಸುವುದರ ಜೊತೆಗೆ ದುಡಿಮೆಯ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶ್ರಮ ಗೌರವ ಮತ್ತು ಜೀವನ ಮೌಲ್ಯಗಳನ್ನು ತಿಳಿಸುವ ಅತ್ಯುತ್ತಮ ವೇದಿಕೆ ಎಸ್ ಎಸ್ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಸಾಮಾನ್ಯ ಜನರೊಂದಿಗೆ ಬೆರೆಯುವ ಅತ್ಯುತ್ತಮ ಅವಕಾಶ ಇಲ್ಲಿ ನಮಗೆ ದೊರೆಯುತ್ತದೆ. ಗ್ರಾಮೀಣ ಪ್ರದೇಶದ ಜನರ ನೋವು ನಲಿವುಗಳನ್ನು ಬಹಳ ಹತ್ತಿರದಿಂದ ಗಮನಿಸುವ ಅವಕಾಶವನ್ನು ವಿದ್ಯಾರ್ಥಿಗಳು ಇಲ್ಲಿ ಪಡೆಯುತ್ತಾರೆ.

Department of Youth Empowerment and Sports ಪಠ್ಯ,ಸಂಶೋಧನೆಗಳ ಮೂಲಕ ಪಡೆಯುವ ಅರಿವು ಒಂದು ಬಗೆಯಾದರೆ ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಯ ಬೇಕಾಗಿರುವ ವಿಷಯಗಳು ಹಲವು. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಪಿ.ವೀರಭದ್ರಪ್ಪನವರು ಮಾತನಾಡಿ, ” ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ವಿವಿಧ ವೇಷ, ಭಾಷೆ, ಸಂಸ್ಕೃತಿ,ಪ್ರದೇಶಗಳು ನಮ್ಮದಾದರೂ ನಮ್ಮ ಆಲೋಚನೆ, ಗುರಿ ವಿಶ್ವಮಾನವರಾಗುವುದು. ಸಹಜ ಸಂಸ್ಕೃತಿ ಸಂವಹನ, ಸಹನೀಯತೆಯನ್ನು ರೂಡಿಸಿಕೊಳ್ಳುವುದು, ಪರರ ಬಗೆಗಿನ ಅರಿವು ಗೌರವಗಳ ಮೂಲಕ ವಿಶ್ವಬಂಧುತ್ವವನ್ನು ನಾವು ರೂಪಿಸಿಕೊಂಡಾಗಲೇ ಬದುಕಿಗೊಂದು ಘನತೆ ಲಭ್ಯವಾಗುತ್ತದೆ.

ಈ ದೆಸೆಯಲ್ಲಿ ನಮ್ಮ ಯುವ ಜನರು ಯೋಚಿಸಬೇಕು” ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಸಿಂಡಿಕೇಟ್ ಸದಸ್ಯರೂ, ಪ್ರಾಂಶುಪಾಲರು ಆದ ಡಾ. ಸಂಧ್ಯಾ ಕಾವೇರಿ ಯವರು ” ಜಾತಿ ಧರ್ಮಗಳನ್ನು ಮೀರಿದ ಮನುಷ್ಯತ್ವ ನಮಗಿಂದು ಬೇಕಾಗಿದೆ.

ಸಹ ಬಾಳ್ವೆ, ಸಹಕಾರದ ಮೂಲಕ ಈ ಸಮಾಜವನ್ನು ಪರಿವರ್ತಿಸುವುದು ಸಾಧ್ಯ” ಎಂದರು. ಇನ್ನೊರ್ವ ಮುಖ್ಯ ಅತಿಥಿಗಳಾದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ ಕೆ ವೀಣಾ ಅವರು, “ಪರಿಸರದ ಪರವಾದ ಕಾಳಜಿ ನಮಗೆಲ್ಲರಿಗೂ ಇರಬೇಕಾಗಿರುವುದು ಅತ್ಯಗತ್ಯ. ಎನ್ ಎಸ್ ಎಸ್ ಅದನ್ನು ಮುಖ್ಯ ಧ್ಯೇಯವಾಗಿ ಸ್ವೀಕರಿಸಿರುವುದು ಸಂತೋಷದ ವಿಚಾರ.

ವೈಯಕ್ತಿಕ ಬದುಕಿನ ಸ್ವಚ್ಛತೆಯೊಂದಿಗೆ ಪರಿಸರದ ಸ್ವಚ್ಛತೆಯು ನಮ್ಮದಾದಲ್ಲಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ” ಎಂದರು.

ರಾಷ್ಟ್ರ ಮಟ್ಟದ ಈ ಶಿಬಿರದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ 160 ಸ್ವಯಂಸೇವಕರು ಹಾಗೂ ಅಧಿಕಾರಿಗಳು, ಸಹ್ಯಾದ್ರಿ ಕಾಲೇಜಿನ ಸುತ್ತ ಮುತ್ತ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.

ಏಳು ದಿನಗಳವರೆಗೆ ನಡೆಯುವ ಈ ಶಿಬಿರದಲ್ಲಿ ವಿವಿಧ ಉಪನ್ಯಾಸ ಕಾರ್ಯಕ್ರಮಗಳು, ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಶ್ವ ವಿದ್ಯಾಲಯದ ಸಂಯೋಜನಾಧಿಕಾರಿಗಳಾದ ಡಾ ನಾಗರಾಜ ಪರಿಸರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹೇಂದ್ರ ಶೆಟ್ಟಿ ಪ್ರಾರ್ಥಿನಾ ಗೀತೆ ಹಾಡಿದರು. ಡಾ ಶುಭಾ ಮರವಂತೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ತ್ರಿಶೂಲ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...