Tuesday, October 1, 2024
Tuesday, October 1, 2024

Chamber Of Commerce Shivamogga ತೆರಿಗೆ ನಿರ್ವಹಣೆ ಸಂಗಡ ಉಳಿತಾಯದ ತಿಳುವಳಿಕೆ ಅವಶ್ಯ- ರಘುರಾಮ್ ಭಟ್

Date:

Chamber Of Commerce Shivamogga ಏಕಸ್ವಾಮ್ಯ, ಪಾಲುದಾರಿಕೆ ವ್ಯವಹಾರದಲ್ಲಿ ತೆರಿಗೆ ನಿರ್ವಹಣೆಯ ಜತೆಯಲ್ಲಿ ಉಳಿತಾಯ ಮಾಡುವ ಕುರಿತು ತಿಳವಳಿಕೆ ಅತ್ಯಂತ ಅವಶ್ಯಕ. ತೆರಿಗೆ ಇಲಾಖೆಯಲ್ಲಿ ಆಗಿರುವ ಕಾಯ್ದೆಗಳಲ್ಲಿನ ಬದಲಾವಣೆಗಳನ್ನು ಅರಿತುಕೊಳ್ಳಬೇಕು ಎಂದು ತೆರಿಗೆ ಸಲಹೆಗಾರ ಎಚ್.ಎಸ್.ರಘುರಾಮ್ ಭಟ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ “ಏಕಸ್ವಾಮ್ಯ ಹಾಗೂ ಪಾಲುದಾರಿಗೆ ವ್ಯವಹಾರದಲ್ಲಿ ಆದಾಯ ತೆರಿಗೆಯನ್ನು ಹೇಗೆ ಉಳಿಸುವುದು” ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯವಹಾರದ ಸಂದರ್ಭದಲ್ಲಿ ಸ್ವಂತ ನಡೆಸುವುದಾದರೂ ಅಥವಾ ಪಾಲುದಾರಿಕೆಯಲ್ಲಿ ಉದ್ಯಮ ಮಾಡುವುದಾದರೂ ದಾಖಲೆಗಳ ನಿರ್ವಹಣೆ ಅತ್ಯಂತ ಮುಖ್ಯವಾಗುತ್ತದೆ. ಆದಾಯ ತೆರಿಗೆ ಸರಿಯಾದ ಕ್ರಮದಲ್ಲಿ ಪಾವತಿಸುತ್ತಿರಬೇಕು. ಸರಿಯಾದ ನಿರ್ವಹಣೆ ಮಾಡುವ ಜತೆಯಲ್ಲಿ ಆದಾಯ ತೆರಿಗೆ ಉಳಿಸುವ ಅವಕಾಶಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

Chamber Of Commerce Shivamogga ಉದ್ಯಮದಲ್ಲಿ ಎದುರಾಗುವ ಎಲ್ಲ ತೊಡಕುಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕು. ಎಲ್ಲ ದಾಖಲೆಗಳ ನಿರ್ವಹಣೆ ಸರಿಯಾಗಿದ್ದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ನಗದು ವ್ಯವಹಾರದ ದಾಖಲೆ ಸರಿಯಾಗಿಟ್ಟುಕೊಳ್ಳುವುದು. ಸರಿಯಾದ ಸಮಯದಲ್ಲಿ ರಿಟರ್ನ್ಸ್ ಸಲ್ಲಿಸುವುದು. ವಿವಿಧ ರೀತಿಯಲ್ಲಿ ತೆರಿಗೆ ಉಳಿಸಲು ಇರುವ ಕಾನೂನು ನಿಯಮಗಳನ್ನು ಅನುಸರಿಸಬೇಕು ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಉದ್ಯಮಿಗಳು ಹಾಗೂ ವ್ಯವಹಾರ ನಡೆಸುವವರು ತೆರಿಗೆ ವ್ಯವಸ್ಥೆಯ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಬೇಕು. ಕಾಲ ಕಾಲಕ್ಕೆ ಆಗುವ ಬದಲಾವಣೆಗಳ ಬಗ್ಗೆ ತಿಳಿದುಕೊಂಡಲ್ಲಿ ಅನೇಕ ಉಪಯೋಗ ಆಗುತ್ತವೆ. ತೆರಿಗೆ ಕಾಯ್ದೆಗಳಲ್ಲಿನ ಹೊಸ ನಿಯಮಗಳ ಬಗ್ಗೆ ಜಾಗೃತಿ ಹೊಂದುವುದು ಅವಶ್ಯಕ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಇ.ಪರಮೇಶ್ವರ್ ಮಾತನಾಡಿ, ವಾಣಿಜ್ಯ ಸಂಘವು ಉದ್ಯಮಿದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ತೆರಿಗೆ ವ್ಯವಸ್ಥೆ ಕುರಿತಾಗಿ, ಆದಾಯ ತೆರಿಗೆ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕ ಬಿ.ಆರ್.ಸಂತೋಷ್, ಪ್ರದೀಪ್ ಎಲಿ, ರಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...