World Anti-Child Labor Day ಜೂ.15 ರಂದು ಶಿವಮೊಗ್ಗ ನಗರದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ” ಪ್ರಯುಕ್ತ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣ ಇವರ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿಕಾಯ್ದೆ 2016ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮ ಮತ್ತು ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ.
World Anti-Child Labor Day ತಪಾಸಣೆಯಲ್ಲಿ ಒರ್ವ ಬಾಲಕಾರ್ಮಿಕ ಮೇಲಿನ ತುಂಗಾನಗರದ ಗುಜರಿ ಅಂಗಡಿಯಲ್ಲಿ *ಪತ್ತೆಯಾಗಿರುತ್ತಾನೆ.
ಈ ಬಾಲಕನನ್ನು ಕೆಲಸದ ಸ್ಥಳದಿಂದ ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗಿದ್ದು, ನಂತರ ಮಾಲೀಕರ ಮೇಲೆ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ 2016ರಡಿ ಪ್ರಕರಣ ದಾಖಲಿಸಲಾಯಿತು.
ಈ ತಂಡದಲ್ಲಿ ಕಾರ್ಮಿಕ ನಿರೀಕ್ಷಕಿ ಸುಖೀತ ಕೆ.ಸಿ., ಯೋಜನಾ ನಿರ್ದೇಶಕ ರಘುನಾಥ ಎ,ಎಸ್., ಮಕ್ಕಳ ಸಹಾಯವಾಣ ಯ ಪ್ರಮೋದ್ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.