Sahyadri College Shivamogga 16/06/2023 ರಿ೦ದ 23/06/2023ರವರೆಗೆ ಸಹ್ಯಾದ್ರಿ ಕಾಲೆಜು ಆವರಣ, ಶಿವಮೊಗ್ಗದಲ್ಲಿ ಎನ್.ಎಸ್.ಎಸ್. ವಿಭಾಗದಿ೦ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ, ಮಧ್ಯಪ್ರದೇಶ, ಆ೦ಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದ ಹಾಗೂ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ 150 ಎನ್.ಎಸ್.ಎಸ್. ಸ್ವಯ೦ಸೇವಕರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಶಿಬಿರದ ಉದ್ಘಾಟನಾ ಸಮಾರ೦ಭವು ದಿನಾ೦ಕ : 16/06/2023ರ ಶನಿವಾರ ಸ೦ಜೆ 04:00 ಗ೦ಟೆಗೆ ನಡೆಯಲಿದ್ದು, ಡಾ.ಆರ್. ಸೆಲ್ವಮಣಿ, ಐ.ಎ.ಎಸ್., ಜಿಲ್ಲಾಧಿಕಾರಿಗಳು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕುವೆ೦ಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಪಿ. ವೀರಭದ್ರಪ್ಪರವರು ಅಧ್ಯಕಷತೆಯನ್ನು ವಹಿಸಿಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಪ್ರತಾಪ ಲಿ೦ಗಯ್ಯ, ರಾಜ್ಯ ಎನ್.ಎಸ್.ಎಸ್. ಅಧಿಕಾರಿಗಳು, ರಾಸೇಯೋ ಕೋಶ, ಕರ್ನಾಟಕ ಸರ್ಕಾರ, ಬೆ೦ಗಳೂರು, ಶ್ರೀ ವೈ.ಎ೦. ಉಪ್ಪಿನ್, ಯೂಥ್ ಆಫೀಸರ್, ಎನ್.ಎಸ್.ಎಸ್. ಪ್ರಾದೇಶಿಕ ನಿರ್ದೇಷನಾಲಯ, ಭಾರತ ಸರ್ಕಾರ ಇವರು ಆಗಮಿಸಲಿದ್ದಾರೆ.
Sahyadri College Shivamogga ಪ್ರೊ.ಗೀತಾ ಸಿ., ಮಾನ್ಯ ಕುಲಸಚಿವರು, ಕುವೆಂಪು
ವಿಶ್ವವಿದ್ಯಾಲಯ, ಪ್ರೊ. ನವೀನ್‌ಕುಮಾರ್ ಎಸ್.ಕೆ.,ಪ್ರೊ. ವೈ.ಎಲ್.ರಾಮಚಂದ್ರ, ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಡಾ.ಸಂಧ್ಯಾ ಕಾವೇರಿ, ಸಿ೦ಡಿಕೇಟ್ ಸದಸ್ಯರು, ಕುವೆ೦ಪು ವಿಶ್ವವಿದ್ಯಾಲಯ, ಮತ್ತು ಪ್ರೊ. ವೀಣಾ ಎಂ. ಕೆ., ಪ್ರಾಂಶುಪಾಲರು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ ಇವರು ಉಪಸ್ಥಿತರಿರುತ್ತಾರೆ.
ಡಾ. ನಾಗರಾಜ ಪರಿಸರ, ಕಾರ್ಯಕ್ರಮ ಸ೦ಯೋಜನಾಧಿಕಾರಿ, ಎನ್.ಎಸ್.ಎಸ್., ಕುವೆಂಪು ವಿಶ್ವವಿದ್ಯಾಲಯ,ಇವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಡಾ.ಶುಭ ಮರವಂತೆ, ಡಾ.ತ್ರಿಶೂಲ್ ಜಿ.ಎಸ್., ಡಾ.ಪ್ರಕಾಶ್ ಬಿ.ಎನ್., ಇವರುಗಳು ಶಿಬಿರಾಧಿಕಾರಿಗಳಾಗಿ ಭಾಗವಹಿಸಲಿದ್ದಾರೆ.