Saturday, November 23, 2024
Saturday, November 23, 2024

Sagara Press Trust ಕಾಂತರಾಜ ಆಯೋಗದ ವರದಿ ಶೀಘ್ರ ಜಾರಿಗೆ ತರಲು ಒತ್ತಾಯ

Date:

Sagara Press Trust ಹಿಂದುಳಿದ ವರ್ಗದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಸಿದ್ದರಾಮಯ್ಯನವರು ಎಚ್.ಕಾಂತರಾಜ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಪರವಾಗಿ ಹಿಂದುಳಿದ ಜನ ಜಾಗೃತಿ ವೇದಿಕೆ ಮೂಲಕ ಆಗ್ರಹಿಸುತ್ತೇವೆ ಎಂದು ವೇದಿಕೆ ಗೌರವಾಧ್ಯಕ್ಷ ರಾಚಪ್ಪ ಹೇಳಿದರು.

ಸಾಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ವೇದಿಕೆಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಆಯೋಗದ ವರದಿ ಜಾರಿಯಿಂದ ಎಲ್ಲ ವರ್ಗದವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಹಿಂದುಳಿದ ಜಾತಿಗಳ ಸ್ಥಿತಿಗತಿ ಬದಲಾಗಿಲ್ಲ. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣ ಕವಾಗಿ ಯಾವುದೇ ಅಭಿವೃದ್ಧಿಯಾಗಿಲ್ಲ. ಉದ್ಯೋಗಕ್ಕೆ ಸಂಬಂಧಿಸಿ 25 ವರ್ಷದ ಹಿಂದಿನ ಸ್ಥಿತಿಯೇ ಇದೆ. ಭಾರತದ ಜನಸಂಖ್ಯೆಯಲ್ಲಿ ಶೇ, 70 ಕ್ಕೂ ಹೆಚ್ಚು ಜನರು ಈ ಜಾತಿಗೆ ಸೇರಿದವರಾಗಿದ್ದಾರೆ.

Sagara Press Trust ಸ್ವಾತಂತ್ಯ ಪೂರ್ವದಲ್ಲೂ ಬ್ರಿಟಿಷ್ ಆಡಳಿತದ ಮುಂದೆ ಮೀಸಲಾತಿ ಕುರಿತು ಬೇಡಿಕೆ ಮಂಡಿಸಲಾಗಿತ್ತು ಎಂದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಹಿಂದುಳಿದವರಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಕುರಿತು ಹೇಳಿದ್ದಾರೆ. ಸಾಮಾಜಿಕ ಸ್ಥಿತಿಗತಿ ಅಧ್ಯಯನ ನಡೆಸಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗ, ಜಾತಿಗಳ ಮೀಸಲಾತಿ ಸಂಬಂಧ ಹಲವು ಆಯೋಗಗಳು ರಚನೆಯಾಗಿವೆ. 1953ರಲ್ಲಿ ಕೇಂದ್ರ ಸರ್ಕಾರ ‘ಕಾಕ ಸಾಹೇಬ್ ಕಾಲೇಲ್ಕರ್’ ಆಯೋಗ ರಚಿಸಿತ್ತು. ಈ ಆಯೋಗ ಅಧ್ಯಯನ ನಡೆಸಿ 1955ರಲ್ಲಿ ವರದಿ ಸಲ್ಲಿಸಿತ್ತು. ನಂತರ ಕೇಂದ್ರ ಸರ್ಕಾರವು ಶೈಕ್ಷಣ ಕ ಮತ್ತು ಉದ್ಯೋಗದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು. ಆದರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅದು ಜಾರಿಯಾಗಲಿಲ್ಲ ಎಂದರು.

ಕೇಂದ್ರ ಸರ್ಕಾರವು ಪುನಾ 1979ರಲ್ಲಿ ಮಂಡಲ್ ಅವರ ನೇತೃತ್ವದಲ್ಲಿ ಮಂಡಲ್ ಆಯೋಗ ರಚಿಸಿ 1980 ರಲ್ಲಿ ವರದಿ ನೀಡಿತು. ಹಿಂದುಳಿದ ಜಾತಿಗಳಿಗೆ ಶೈಕ್ಷಣ ಕ ಸಂಸ್ಥೆಗಳಲ್ಲಿ ಮತ್ತು ಸರ್ಕಾರದ ಹುದ್ದೆಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಶಿಫಾರಸು ಮಾಡಿತು. ಆದರೆ ಅದು ಕೂಡ ಜಾರಿಯಾಗಲಿಲ್ಲ. ನಂತರ 1989ರಲ್ಲಿ ಪ್ರಧಾನಿ ವಿ.ಪಿ.ಸಿಂಗ್ ಅವರು ಮಂಡಲ್ ಆಯೋಗದ ವರದಿಯನ್ನು ಆಧರಿಸಿ ಹಿಂದುಳಿದ ಜಾರಿಗಳಿಗೆ ಮೀಸಲಾತಿ ನೀಡಿತು. ಆದರೆ ಮೀಸಲಾತಿಯನ್ನು ಪ್ರಶ್ನಿಸಿ ಇಂದ್ರಸಹಾ ಮತ್ತು ಇತರರು ಸುಪ್ರಿಂ ಕೋರ್ಟ್ ನಲ್ಲಿ ದಾವೆ ಹೂಡಿದರು.

ನಂತರದ ದಿನಗಳಲ್ಲಿ ಇದು ನೆನೆಗುದಿಗೆ ಬಿತ್ತು.
ಕರ್ನಾಟಕದಲ್ಲೂ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರು ನಾಗನ ಗೌಡ ಸಮಿತಿ, ದೇವರಾಜ ಅರಸು ಅವರು ಎಲ್.ಜಿ.ಹಾವನೂರ್ ಆಯೋಗ, ರಾಮಕೃಷ್ಣ ಹೆಗಡೆಯವರು ವೆಂಕಟಸ್ವಾಮಿ ಆಯೋಗ ರಚಿಸಿ ಹಿಂದುಳಿದ ವರ್ಗದ ಅಧ್ಯಯನ ನಡೆಸಿವೆ.

1994 ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕರ್ನಾಟಕ ಸರ್ಕಾರವು ಸದ್ಯದ ಪರಿಸ್ಥಿತಿಯಲ್ಲಿ ಮುಂದುವರೆಸಿಕೊಂಡು ಬಂದಿದೆ. ಶೇ. 50ಕ್ಕಿಂತ ಹೆಚ್ಚು ಮೀಸಲಾತಿಯನ್ನು ನೀಡಬಾರದೆಂದು ಆದೇಶಿಸಿದೆ.

2014 ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಎಚ್.ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ಕಾಂತರಾಜ ಆಯೋಗ ರಚನೆಯಾಯಿತು. 2019ರಲ್ಲಿ ಈ ಆಯೋಗವು ತನ್ನ ವರದಿ ಸಲ್ಲಿಸಿತು.

ಈ ಆಯೋಗವು ತನ್ನ ಸಮೀಕ್ಷೆಯಲ್ಲಿ ಇಡೀ ರಾಜ್ಯದಲ್ಲಿ ಕುಟುಂಬಗಳ ನಿಖರವಾದ ಸಾಮಾಜಿಕ, ಶೈಕ್ಷಣ ಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ, ಸಾಕಷ್ಟು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕಿ ವರದಿ ನೀಡಿತ್ತು. ಸಮಾಜದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಆಧಾರದ ಮೇಲೆ ಸಮಾನತೆಯನ್ನು ಸಾಧಿಸಲು, ಜನಪರ ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ ಸಮೀಕ್ಷೆ ಅಗತ್ಯ ಎಂದಿದ್ದಾರೆ.

ಆದರೆ ನಂತರ ಬಂದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ ಶೆಟ್ಟರ್, ಬೊಮ್ಮಾಯಿಯವರು ಹಿಂದುಳಿದ ವರ್ಗಕ್ಕೆ ದ್ರೋಹವೆಸಗಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸೇರಿದಂತೆ ಅನೇಕ ಮಂಡಳಿ ನೇಮಿಸಿ ಬೇಕಾಬಿಟ್ಟಿ ಅನುದಾನ ನೀಡಿದರು.

ತಳಸಮುದಾಯದ ಅಭಿವೃದ್ಧಿಗೆ ಪೂರಕವಾದ ಕಾಂತರಾಜ ಆಯೋಗದ ವರದಿಯನ್ನು ಯಾರೂ ಗಂಭೀರವಾಗಿ ಪರಿಗಣ ಸಿಲ್ಲ ಎಂದವರು ಆರೋಪಿಸಿದರು.

ಇದೀಗ ಪುನಾ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಹಿಂದುಳಿದ ವರ್ಗ, ಜಾತಿಗಳ ಕುರಿತು ಅವರಿಗೆ ಅಪಾರ ಕಾಳಜಿಯಿದೆ. ಈ ಸಂದರ್ಭದಲ್ಲಿ ಅವರು ಕಾಂತರಾಜ ಆಯೋಗ ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಹೋರಾಟಗಾರ ತೀ.ನ.ಶ್ರೀನಿವಾಸ್ ಮಾತನಾಡಿ, ಕಾಂತರಾಜ ಆಯೋಗ ಶಾಸನಬದ್ಧವಾಗಿ ರಚನೆಗೊಂಡು 165 ಕೋಟಿ ರೂ. ವೆಚ್ಚ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಸಮಾಜದ ಪ್ರತಿ ಮನೆಯನ್ನೂ ಭೇಟಿ ಮಾಡಿ ಅಂಕಿ ಅಂಶಗಳನ್ನು ಕಲೆಹಾಕಿ ವರದಿ ಸಿದ್ಧಪಡಿಸಲಾಗಿದೆ.

ಇದೊಂದು ವೈಜ್ಞಾನಿಕ ವರದಿ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಚನೆಯಾದ ಆಯೋಗದ ವರದಿಯನ್ನು ಈಗ ಮುಖ್ಯಮಂತ್ರಿಯಾದಾಗಿ ಜಾರಿಗೊಳಿಸಬೇಕು. ಸಂವಿಧಾನದ ಆಶಯದ ಆಯೋಗದ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು. ಈಗ ಹಲವಾರು ಉಚಿತ ಭಾಗ್ಯಗಳನ್ನು ನೀಡಿದ್ದಾರೆ. ಅದಕ್ಕಿಂತ ಹಳೆ ಬಾಕಿ ಕಾಂತರಾಜ ವರದಿ ಶಿಫಾರಸನ್ನು ಜಾರಿಗೊಳಿಸುವುದು ಎಂದರು.

ವೇದಿಕೆಯ ಪ್ರಮುಖರಾದ ನಟರಾಜ್, ಮಹಾಬಲೇಶ್, ಶಾಂತಮೂರ್ತಿ, ಜನಮೇಜಿರಾವ್, ರಾಮಕೃಷ್ಣ ವಾರಣಕರ್, ರಾಮದಾಸ್ ಹಾಜರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...