Friday, November 22, 2024
Friday, November 22, 2024

Sagar Press Trust ಉಚಿತ ಪ್ರಯಾಣ ಅಬಲೆಯರಿಗೆ ಶಕ್ತಿ- ಪ್ರಫುಲ್ಲಾ ಮಧುಕರ್

Date:

Sagar Press Trust ಮಹಿಳೆಯರ ದು:ಖದ, ಸಂತಾಪದ ಧ್ವನಿಯಾಗಿ ಕಾಂಗ್ರೆಸ್ ಸರ್ಕಾರ ರಾಜ್ಯ ಸಾರಿಗೆ ಬಸ್ ನಲ್ಲಿ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಹೇಳಿದರು.
ಸಾಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಿಂದ ಅಬಲೆಯರಿಗೆ ಶಕ್ತಿ ತುಂಬಿದಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು ಎಂದರು.
ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯೂ ಮಹಿಳೆಯರು ಚುನಾವಣೆ ಪ್ರಣಾಳಿಕೆಗೆ ಸಂಬಂಧಿಸಿ ಅನೇಕ ಬೇಡಿಕೆ ಇಡುತ್ತಿದ್ದೆವು. ಈ ಬಾರಿಯೂ ‘ನಾ ನಾಯಕಿ’ ಸಮಿತಿ ರಚಿಸಿ ಮಹಿಳೆಯರಿಗೆ ಏನಾಗಬೇಕು ಎಂಬುದರ ಕುರಿತು ಚರ್ಚೆ ನಡೆಯಿತು. ಅನೇಕ ಮಹಿಳಾಪರ ಯೋಜನೆಗಳನ್ನು ಪರಿಚಯಿಸಲಾಯಿತು.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ನಿಜಕ್ಕೂ ಖುಷಿಯಾಗಿದೆ. ದೂರದ ಆಸ್ಪತ್ರೆಗೆ ಬಂದ ಮಹಿಳೆಯರಿಗೆ ಆಗಾಗ ತಮ್ಮ ಊರಿಗೆ ಹೋಗಿ ಬರಲು ಚಡಪಡಿಸುತ್ತಿದ್ದರು. ಬಡತನದಲ್ಲಿರುವ ಮಹಿಳೆಯರು ತಮ್ಮ ದು:ಖ ಅಸಯಾಯಕತೆಯನ್ನು ಹೇಳಿಕೊಳ್ಳುತ್ತಿದ್ದರು.

Sagar Press Trust ಅವರಿಗೆ ಹಣಕಾಸು ಪರಿಸ್ಥಿತಿ ಕಷ್ಟವಾಗಿತ್ತು. ಈಗ ಅವರಿಗೆ ತಮ್ಮ ಊರಿಗೆ, ತವರು ಮನೆಗೆ ಹಾಗೂ ಬಯಸಿದಲ್ಲಿ ಉಚಿತವಾಗಿ ಹೋಗಿ ಬರುವ ಸೌಲಭ್ಯ ನೀಡಲಾಗಿದೆ ಎಂದರು.

ಈ ಯೋಜನೆಯಿಂದ ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಶಕ್ತಿ ಬಂದಿದೆ. ಅವರು ಬಸ್ ನಲ್ಲಿ ಪ್ರಯಾಣ ಸಲು ಪೋಷಕರು ಹಣ ಹೊಂದಿಸಲು ಪರದಾಡಬೇಕಿತ್ತು. ಈಗ ಅವರು ನಿರಾಳರಾಗಿದ್ದಾರೆ. ಈ ಯೋಜನೆಯಿಂದ ತೆರಿಗೆ ಕಟ್ಟುವವರಿಗೆ ಹೆಚ್ಚು ಹೊರೆಯಾಗುತ್ತದೆ ಎಂದು ಆರೋಪಿಸಲಾಗುತ್ತಿದೆ. ವಾಸ್ತವವಾಗಿ ಬಡವರೂ ಜಿಎಸ್‌ಟಿ ಮೂಲಕ ತೆರಿಗೆ ಪಾವತಿಸುತ್ತಿದ್ದಾರೆ. ಎಲ್ಲರೂ ಸುಖ ಪಡಬೇಕೆಂಬುದೇ ಸಂವಿಧಾನದ ಆಶಯ. ಉಚಿತ ಪ್ರಯಾಣದ ಮೂಲಕ ಮಹಿಳೆಯರು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಒಳ್ಳೆಯದನ್ನು ಹರಸಿದ್ದಾರೆ.

ಇಂಥ ಯೋಜನೆಯನ್ನು ಜಾರಿಗೊಳಿಸಿದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ರಾಮಕೃಷ್ಣ ವಿದ್ಯಾಲಯದ ಆವರಣದ ಮೇಲೆ ಡ್ರೋಣ್ ಕ್ಯಾಮೆರಾ ಬಿಟ್ಟು ಚಿತ್ರೀಕರಿಸಿರುವ ಕುರಿತು ಪರಿಶೀಲಿಸಲು ಶಿಕ್ಷಣ ಸಚಿವರಿಗೆ ತಿಳಿಸುತ್ತೇನೆ ಎಂದ ಅವರು ಸ್ಥಳೀಯ ವಸತಿ ಶಾಲೆ ವನಶ್ರೀಗೆ ಸಂಬಂಧಿಸಿ ಕೇಳಿ ಬಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಜಿಲ್ಲೆಯವರೇ ಶಿಕ್ಷಣ ಸಚಿವರಿದ್ದಾರೆ. ಅವರು ಗಮನಿಸುತ್ತಾರೆ. ಆದರೆ ವಸತಿ ಶಾಲೆಯಲ್ಲಿ ನಿಯಮಬಾಹಿರವಾಗಿ ಆಡಳಿತ ನಡೆಸಲಾಗಿದೆ.

ಮಹಿಳಾ ವಸತಿ ಶಾಲೆಯಲ್ಲಿ ಕಡ್ಡಾಯವಾಗಿ ಒಬ್ಬ ಮಹಿಳಾ ವಾರ್ಡನ್ ಇರಬೇಕು. ಒಬ್ಬರು ಮಹಿಳಾ ವೈದ್ಯರು ಇರಬೇಕು ಎಂದರು.

ಸ್ಥಳಿಯವಾಗಿ ಬಾಲಕಿಯರ ಪರವಾಗಿ ಪ್ರತಿಭಾ ರಾಘವೇಂದ್ರ ಅವರು ಅತ್ಯಂತ ಪರಿಣಾಮಕಾರಿಯಾಗಿ ಸ್ಪಂದಿಸಿದ್ದಾರೆ.ನನ್ನ ಗಮನಕ್ಕೂ ತಂದಿದ್ದರು.ನಾವು ಗೃಹಸಚಿವರು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಗಮನಸೆಳೆಯುವ ಕೆಲಸ ಮಾಡಿದ್ದೇವೆ ಎಂದರು.

ವನವಾಸಿಗಳ ಶಾಲೆಗಳನ್ನು ನಡೆಸುವ ಕರ್ನಾಟಕದ 4-5 ಶಾಲೆಗಳಿಗೆ ಕೇಂದ್ರ ಸರ್ಕಾರ ಕಳೆದ 03 ವರ್ಷಗಳಿಂದ ನಯಾಪೈಸೆ ಅನುದಾನ ನೀಡಿಲ್ಲ.ಅನುದಾನ ನಿಲ್ಲಿಸಿರುವ ಕೇಂದ್ರ ಸರ್ಕಾರದ ನಿರ್ಣಯದಿಂದ ವನವಾಸಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದು ನಿಂತಿರುವುದು ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದವರ ಶಾಲೆಗಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಹೇಳುವ ಪ್ರಧಾನಿ ಮೋದಿಯವರು ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ಕಿರುಕುಳದ ಕುರಿತು ಅವರಿಗೆ ನ್ಯಾಯ ಒದಗಿಸಿಲ್ಲ. ಆರೋಪಿಯನ್ನು ಫೋಕ್ಸೊ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿರುವುದರಿಂದ ಖಾಸಗಿ ಬಸ್ ನ್ನು ನಂಬಿಕೊಂಡ ಕುಟುಂಬಗಳು ಆತಂಕ ಎದುರಿಸುತ್ತಿವೆ ಎಂಬ ಪ್ರಶ್ನೆಗೆ, ಈ ಬಗ್ಗೆ ಖಾಸಗಿ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಸಾಧ್ಯವಾ ಎಂಬ ಕುರಿತು ಸಾರಿಗೆ ಸಚಿವರಲ್ಲಿ ಚರ್ಚಿಸುವೆ ಎಂದರು.

ಸಾಗರದಿಂದ ಮಣಿಪಾಲಕ್ಕೆ ರಾಜ್ಯ ಸಾರಿಗೆ ಬಸ್ ಬಿಡುವ ಕುರಿತು ಸಚಿವರನ್ನು ಒತ್ತಾಯಿಸಲಾಗುವುದು. ಬಹಳಷ್ಟು ಮಹಿಳೆಯರಿಗೆ ಅನಾರೋಗ್ಯದ ನಿಮಿತ್ತ ಮಣ ಪಾಲಕ್ಕೆ ಹೋಗಬೇಕಾಗುವುದು ಅನಿವಾರ್ಯವಾಗಿದೆ ಎಂದವರು ಹೇಳಿದರು.

ನಗರಸಭೆ ಮಾಜಿ ಸದಸ್ಯೆ ಎನ್.ಉಷಾ ಮಾತನಾಡಿ, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮೊದಲ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ. ಯಾರೂ ಅನಗತ್ಯವಾಗಿ ತಿರುಗಾಡುವುದಿಲ್ಲ. ಆಗಸ್ಟ್ ೧೫ ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರುತ್ತದೆ. ಯುವನಿಧಿ ಯೋಜನೆಯಡಿ ಉದ್ಯೋಗಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಸಿಗಲಿದೆ. ಈ ಹಿಂದೆಯೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸ್ತ್ರೀ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸ್ವಾವಲಂಬನೆ ಮಾರ್ಗ ತೋರಿದ್ದರು ಎಂದರು. ಪ್ರಮುಖರಾದ ಸಿರಿಜಾನ್, ನಾಗರತ್ನ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...