Ministry of Agriculture ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಖಾರಿಫ್
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲು ಅನುಮತಿ ನೀಡಿದೆ.
ದ್ವಿದಳ ಧಾನ್ಯಗಳಾದ ತೊಗರಿಗೆ ಕನಿಷ್ಠ ಬೆಂಬಲ ಬೆಲೆಯನ್ನು 6,600 ರೂ.ನಿಂದ 7,000 ರೂ.ಗೆ ಹೆಚ್ಚಿಸಲಾಗಿದೆ. , ಹೆಸರು ಕಾಳು ಬೆಳೆಗೆ 7,755 ರಿಂದ 8,558 ರೂ.ಗೆ ಮತ್ತು ಉದ್ದಿನ ಕಾಳು ಬೆಳೆಗೆ 6,600 ರೂ.ನಿಂದ 6,950 ರೂ.ಗೆ ಹೆಚ್ಚಿಸಲಾಗಿದೆ.
Ministry of Agriculture ಭಾರತವು ಬೇಸಿಗೆ, ಖಾರಿಫ್ ಮತ್ತು ರಬಿ ಎಂಬ ಮೂರು ಬೆಳೆ ಋತುಗಳನ್ನು ಹೊಂದಿದೆ. ಇನ್ನೂ ಮಳೆಗಾಲ ಆರಂಭವಾಗಬೇಕಿದೆ. ಭತ್ತಕ್ಕೆ (ಸಾಮಾನ್ಯ ತಳಿ) ಎಂಎಸ್ಪಿ ದರವನ್ನು ಕ್ವಿಂಟಾಲ್ಗೆ 2,040 ರೂ.ನಿಂದ 2,183 ರೂ.ಗೆ ಹೆಚ್ಚಿಸಲಾಗಿದೆ. ಗ್ರೇಡ್ ಎ ತಳಿಗೆ 2,060 ರೂ.ನಿಂದ 2,203 ರೂ.ಗೆ ಏರಿಕೆ ಮಾಡಲಾಗಿದೆ.
ಬಾಜ್ರಾಗೆ ಎಂಎಸ್ಪಿಯನ್ನು 2,350 ರೂ.ನಿಂದ 2,500 ರೂ.ಗೆ ಹೆಚ್ಚಿಸಲಾಗಿದ್ದರೆ, ರಾಗಿಗೆ 3,578 ರಿಂದ 3,846 ರೂ.ಗೆ ಏರಿಕೆ ಮಾಡಲಾಗಿದೆ.