ICAR Agricultural Science Centre Shivamogga ಹಲಸಿನ ಹಣ್ಣು ಋತುಕಾಲದಲ್ಲಿ ಎಲ್ಲಾ ವರ್ಗದ ಜನರಿಗೆ
ಕಡಿಮೆ ಬೆಲೆಗೆ ಹೇರಳವಾಗಿ ದೊರೆಯುವ ಹಣ್ಣಾಗಿದೆ. ಈ
ಹಣ್ಣಿನಲ್ಲಿರುವ ತೊಳೆ, ಬೀಜ ಮತ್ತು ಸಿಪ್ಪೆಯನ್ನು ಸಂಸ್ಕರಿಸಿ ವಿವಿಧ
ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ
ಅಧಿಕ ಲಾಭ ಪಡೆಯಬಹುದಾಗಿದೆ ಎಂದು ಇರುವಕ್ಕಿ
ಕೆ.ಶಿ.ನಾ.ಕೃ.ತೋವಿ.ವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ.
ಹನುಮಂತಸ್ವಾಮಿ ಹೇಳಿದರು.
ICAR Agricultural Science Centre Shivamogga ಅವರು ತಮ್ಮಡಿಹಳ್ಳಿ ಗ್ರಾಮದಲ್ಲಿ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ
ಶಿವಮೊಗ್ಗ ಹಾಗೂ ಜನ ಶಿಕ್ಷಣ ಸಂಸ್ಥೆ ಶಿವಮೊಗ್ಗ ಇವರ
ಸಹಯೋಗದೊಂದಿಗೆ “ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ
ಕುರಿತು ಸಾವiರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮ” ದಲ್ಲಿ
ಭಾಗವಹಿಸಿ ಮಾತನಾಡಿದರು.
ಕೆ.ವಿ.ಕೆ ಶಿವಮೊಗ್ಗದ ಗೃಹ ವಿಜ್ಞಾನಿ ಡಾ.ಜ್ಯೋತಿ ಎಂ ರಾಠೋಡ್
ಮಾತನಾಡಿ, ಹಲಸಿನ ಹಣ್ಣು ಸುವಾಸನೆ ಹಾಗೂ ರುಚಿ ಎರಡನ್ನೂ
ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ
ಖಾದ್ಯಗಳನ್ನು ತಯಾರಿಸಬಹುದು. ಹಲಸಿನ ಹಣ್ಣಿನಲ್ಲಿ ವಿಟಾಮಿನ್,
ಖನಿಜಾಂಶ, ಕಾರ್ಬೋಹೈಡ್ರೇಟ್, ಎಲೆಕ್ಟ್ರೊಲೈಟ್‌ಗಳು,
ಪೊಟ್ಯಾಷಿಯಂ ಹಾಗೂ ನಾರಿನಾಂಶಗಳು ಯೆಥೇಚ್ಚವಾಗಿ
ಸಿಗುವುದರಿಂದ ಇದೊಂದು ಆರೋಗ್ಯಕಾರಿ ಹಣ್ಣು
ಎಂದರು.
ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಗ್ರಾಮ
ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್, ಜನ ಶಿಕ್ಷಣ ಸಂಸ್ಥೆಯ
ಶೋಭಾ ಹಾಗೂ ಶಿಕ್ಷಕಿ ಅಶ್ವಿನಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು.