ಲೇ: ಜಯಭೀಮ ಜೊಯಿಸ್.
ಶಿವಮೊಗ್ಗ
ನಮಃ ಶ್ರೀಪಾದರಾಜಾಯ/ನಮಸ್ತೆ ವ್ಯಾಸಯೋಗಿನೇ/
ನಮಃಪುರಂದರಾರ್ಯಾಯ/
ವಿಜಯರಾಜಾಯ ನಮಃ//
Sripadarajaru “ನನ್ನನ್ನು ನೋಡಿ,ಈ ದನಕರುಗಳನ್ನು ನೋಡಿ,ಆಕಾಶದಲ್ಲಿರುವ ಸೂರ್ಯನನ್ನು ನೋಡಿ” ನಿಮಗೆ ಅಬ್ಬೂರು ಎಷ್ಟು ದೂರವಿದೆಯೆಂಬುದು ತಿಳಿಯುತ್ತೆ.
ಈ ಮಾತನ್ನು ಲಕ್ಷ್ಮೀನಾರಾಯಣನೆಂಬ ಬಾಲಕ ಶ್ರೀರಂಗಂನಿಂದ ಅಬ್ಬೂರಿಗೆ ಬರುತ್ತಿದ್ದ ಶ್ರೀಸ್ವರ್ಣವರ್ಣತೀರ್ಥರಿಗೆ ಕೊಟ್ಟ ಉತ್ತರ.
ಈ ಬಾಲಕನೇ ಇಂದು ಎಲ್ಲರಿಂದ ವಂದ್ಯರಾಗಿರುವ ಶ್ರೀಪಾದರಾಜರೆಂಬ ಮಹಾನುಭಾವರು.
ಪ್ರಾತಃಕಾಲದಲ್ಲಿ ಇವರ ಸ್ಮರಣೆ ಬಂದರೆ
ಸಾಕು ಸೊಗಸಾದ ಊಟದ ಅನುಗ್ರಹ ಅಂದು.
ಇದು ಭಕ್ತರ ಅನುಭವದ ಮಾತು.
ಕರ್ನಾಟಕದ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಎಂಬ ಪುಟ್ಟ ಗ್ರಾಮದಲ್ಲಿ ಅರಳಿದ
ಬಂಗಾರದ ಹೂವು “ಶ್ರೀಪಾದರಾಜರು”
ಇವರು ದೇಶದಲ್ಲೆಲ್ಲಾ ದ್ವೈತ ಸಿದ್ಧಾಂತದ ಪರಿಮಳವನ್ನು ಬೀರಿದ ಮಹಾನುಭಾವರು.
ಇವರ ಜನ್ಮನಾಮ ಲಕ್ಷ್ಮೀನಾರಾಯಣನೆಂದು.
ಮುಳಬಾಗಿಲು ಮಠದ ಪರಂಪರೆಯಲ್ಲಿ ಬರುವ ಶ್ರೀಸ್ವರ್ಣವರ್ಣತೀರ್ಥ ರೆಂಬ ಯತಿಗಳಿಂದ ಸನ್ಯಾಶ್ರಮದೀಕ್ಷೆಪಡೆದು”ಲಕ್ಷ್ಮೀನಾರಾಯಣತೀರ್ಥ”ರೆಂದು ನಾಮಕರಣ ಹೊಂದುತ್ತಾರೆ.
ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರಲ್ಲಿ
ಹೆಚ್ಚಿನ ವೇದಾಂತ ಶಾಸ್ತ್ರಗಳಅಭ್ಯಾಸಮಾಡುತ್ತಾರೆ.
Sripadarajaru ಅಂದಿನ ಶ್ರೀ ಉತ್ತರಾಧಿಮಠದ ಪೀಠಾಧಿಪತಿಗಳಾಗಿದ್ದ ಶ್ರೀರಘುನಾಥತೀರ್ಥರು ಇವರ ಮೇಧಾಶಕ್ತಿ ಮತ್ತು ಪ್ರಕಾಂಡ ವಿದ್ಯಾಪ್ರೌಢಿಮೆಯನ್ನುಮೆಚ್ಚಿ”ಶ್ರೀಪಾದರಾಜ”ರೆಂದು ಹೆಸರು ಕೊಟ್ಟು ಆಶೀರ್ವಾದ ಮಾಡುತ್ತಾರೆ.
ಮುಂದೆ ಸಕಲ ವಿದ್ಯಾಶಾಸ್ತ್ರ ಪಾರಂಗತರಾಗಿ
ಶ್ರೀರಂಗಂಗೆಅವರಗುರುಗಳಾದಶ್ರೀಸ್ವರ್ಣವರ್ಣ
ತೀರ್ಥರ ಬಳಿ ಹಿಂದಿರುಗುತ್ತಾರೆ. ಶ್ರೀಸ್ವರ್ಣವರ್ಣತೀರ್ಥರುಶ್ರೀಪಾದರಾಜರಿಗೆ ತಮ್ಮ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕಮಾಡುತ್ತಾರೆ.
ದೇಶ ಸಂಚಾರ ಮಾಡುತ್ತಾ ಶ್ರೀಪದ್ಮನಾಭತೀರ್ಥರು ಸ್ಥಾಪನೆ ಮಾಡಿರುವ ಮುಳಬಾಗಿಲು ಮಠಕ್ಕೆ ಬರುತ್ತಾರೆ.
ಇಲ್ಲಿ ಒಂದುವಿದ್ಯಾಪೀಠವನ್ನು ಸ್ಥಾಪನೆ ಮಾಡುತ್ತಾರೆ.ಈ ವಿದ್ಯಾಪೀಠದಲ್ಲಿ ಬಹಳ ಜನ ವಿದ್ಯಾರ್ಥಿಗಳು ಅಭ್ಯಾಸಮಾಡುತ್ತಾರೆ.ಇವರಲ್ಲಿ ಪ್ರಮುಖರಾದವರು ಶ್ರೀವ್ಯಾಸತೀರ್ಥರು.ಇವರು ಸುಮಾರು 12ವರ್ಷಗಳ ಕಾಲ ಶ್ರೀಪಾದರಾಜರಲ್ಲಿ ಅಭ್ಯಾಸ ಮಾಡುತ್ತಾರೆ.
ಒಂದು ದಿನ ವ್ಯಾಸತೀರ್ಥರು ಅಂದಿನ ಪಾಠಗಳನ್ನು ಮನನ ಮಾಡಿ ನಿದ್ರೆಗೆ ಜಾರಿದಾಗ ದೊಡ್ಡ ಸರ್ಪವೊಂದು ಅವರನ್ನು ನುಂಗಲುಬಂದಿತ್ತು.ಇದು ತಿಳಿದ ಶ್ರೀಪಾದರಾಜರು ಸರ್ಪದ ಭಾಷೆಯಲ್ಲಿ ಮಾತನಾಡಿ ಸರ್ಪವು ಹಿಂದೆ ಸರಿದು ಹೋಗುವಂತೆ ಮಾಡುತ್ತಾರೆ.
ಶ್ರೀಪಾದರಾಜರು ಮತ್ತು ಶ್ರೀವ್ಯಾಸತೀರ್ಥರು
ಒಟ್ಟಿಗೇ ಸಂಚಾರಮಾಡುತ್ತಾ ಭೀಮಾ ನದಿ
ಯಲ್ಲಿ ಸ್ನಾನಕ್ಕೆ ಹೋದಾಗ “ರಂಗವಿಠಲ”ಮತ್ತು
“ವೇಣುಗೋಪಾಲ”ದೇವರ ವಿಗ್ರಹಗಳು
ದೊರಕುತ್ತವೆ.ರಂಗವಿಠಲ ವಿಗ್ರಹವಿದ್ದ ಪೆಟ್ಟಿಗೆಯನ್ನು ಸುಲಭವಾಗಿ ತೆಗೆಯಲಿಕ್ಕೆ ಬರುತ್ತದೆ.
ಆದರೆ ಆದೇ ವೇಣುಗೋಪಾಲದೇವರ ವಿಗ್ರಹವಿದ್ದ ಪೆಟ್ಟಿಗೆಯನ್ನು ತೆರೆಯಲಿಕ್ಕೇ ಬರುವುದಿಲ್ಲ.ಶ್ರೀಪಾದರಾಜರು ನಿತ್ಯವೂ ತಾವು ಮಾಡುತ್ತಿದ್ದ ಸಂಸ್ಥಾನ ಪೂಜೆಯೊಂದಿಗೆ ಈ ಪೆಟ್ಟಿಗೆಯನ್ನೂ ಇಟ್ಟು ಪೂಜಿಸುತ್ತಿದ್ದರು.ಒಂದು ದಿನ ಶ್ರೀಪಾದರಾಜರಿಗೆ ಅನಾರೋಗ್ಯದ ನಿಮಿತ್ತ ಪೂಜೆ ಮಾಡಲು ಆಗದೇ ಇದ್ದಾಗ,ಶ್ರೀವ್ಯಾಸರಾಯರು ಸಂಸ್ಥಾನ ದೇವರ ಪೂಜೆಯನ್ನು ಮಾಡುತ್ತಾರೆ.
ಇವರು ಅಭಿಷೇಕ ಮಾಡಲು ಎಲ್ಲಾದೇವರ ವಿಗ್ರಹಗಳನ್ನು ತೆಗೆದಿಟ್ಟು,ಈ ಪೆಟ್ಟಿಗೆಯಲ್ಲಿರುವ ದೇವರನ್ನು ಅಭಿಷೇಕ ಮಾಡಲು ಪೆಟ್ಟಿಗೆಗೆ ಕೈಹಾಕಿದಾಗ ಪೆಟ್ಟಿಗೆ
ಸಲೀಸಾಗಿ ತೆಗೆಯಲು ಬಂತು.ನೋಡಿದರೆ ಮುದ್ದಾದ”ವೇಣುಗೋಪಾಲದೇವರ”ವಿಗ್ರಹ.ಶ್ರೀವ್ಯಾಸರಾಯರಆರಾಧ್ಯದೇವರುಶ್ರೀಕೃಷ್ಣದೇವರು. ಊರುಪೂಜೆ ಮಾಡುತ್ತಾ ಶ್ರೀವ್ಯಾಸರಾಯರು ನರ್ತನ ಮಾಡಲಿಕ್ಕೆ ಪ್ರಾಂಭಿಸುತ್ತಾರೆ.
ಅಲ್ಲಿದ್ದ ಶಿಷ್ಯರಿಗೆ ವ್ಯಾಸರಾಯರ ನರ್ತನ ನೋಡಿ ತಾವೂ
ಆನಂದ ಭರಿತರಾಗಿ ತಾಳ ಹಾಕಲಿಕ್ಕೆ ಪ್ರಾರಂಭಿಸುತ್ತಾರೆ.ಶಿಷ್ಯರಿಂದ ಈ ವಿಷಯ ತಿಳಿದ
ಶ್ರೀಪಾದರಾಜರು ಬಂದು ನೋಡಿ ಬಹಳ ಸಂತೋಷ ಪಡುತ್ತಾರೆ.ವ್ಯಾಸರಾಯರಿಗೆ ನೀವು
ಶ್ರೀಕೃಷ್ಣನ ದರ್ಶನ ಪಡೆದ ಪುಣ್ಯವಂತರು ಎಂದು ಹೇಳಿ ವೇಣುಗೋಪಾಲದೇವರ ವಿಗ್ರಹವನ್ನು ಅವರಿಗೇ ಪೂಜೆ ಮಾಡಲಿಕ್ಕೆ ಕೊಡುತ್ತಾರೆ.
ಹೀಗೆ
ವ್ಯಾಸರಾಯರಿಗೆ ಶ್ರೀವೇಣುಗೋಪಾಲಸ್ವಾಮಿಯ
ಅನುಗ್ರಹವಾಗುತ್ತದೆ.
ಶ್ರೀಪಾದರಾಜರು “ರಂಗವಿಠಲ”ಎಂಬ ಅಂಕಿತ
ನಾಮದೊಂದಿಗೆ ಕೀರ್ತನೆಗಳನ್ನು ರಚಿಸಿದ್ದಾರೆ.
ವಾಯುದೇವರ ಮೂರವತಾರ ವರ್ಣಿಸುವ
ಕೀರ್ತನೆಯಾದ “ಮಧ್ವನಾಮ”ವನ್ನು ರಚಿಸಿದ
ಮಹಾನುಭಾವರು.
ಇವರ ಮಧ್ಯಾರಾಧನೆಯು ಜ್ಯೇಷ್ಠ ಶುದ್ಧ ಚತುರ್ದಶಿ ಅವರ ಮೂಲಬೃಂದಾವನವಿರುವ
ಮುಳಬಾಗಿಲಿನಲ್ಲಿ ಬಹಳ ವಿಜ್ರಂಭಣೆಯಿಂದ
ನೆರವೇರಿಸಲಾಗುತ್ತದೆ.
ಶ್ರೀಗಳವರ ಆರಾಧನಾ ದಿನದಂದು ಅವರ
ಸ್ಮರಣೆಮಾಡಿ ನಮ್ಮ ಭಕ್ತಿಯ ನಮನಗಳನ್ನು
ಅರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
ಎನ್.ಜಯಭೀಮ್ ಜೊಯ್ಸ್