Open Water Swimming ಈಜು ಎಲ್ಲಾ ವಯಸ್ಕರಿಗೂ ಅತಿ ಅಗತ್ಯವಾಗಿ
ಕಲಿಯುವಂತಹ ವಿದ್ಯೆಯಾಗಿದೆ.ಪೃಕೃತಿಯಲ್ಲಿನ ಜಲಸಂಪತ್ತಿನಲ್ಲಿ ಓಪನ್ ವಾಟರ್
ಸ್ವಿಮ್ಮಿಂಗ್ ನಮ್ಮ ರಾಷ್ಟ್ರದಲ್ಲಿ ಅಭಿಯಾನದ ಮಾದರಿಯಲ್ಲಿ ಆರಂಭವಾಗಬೇಕು
ಎಂದು ಜಲಯೋಗ ತಜ್ಞ ಹರೀಶ್ ದಾಮೋದರ ನವಾತೆ ಹೇಳಿದರು.
ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ನಂದಿಗೋಡಿನ ಖಾಸಗಿ
ನಿರ್ಮಿತ ಕೆರೆಯೊಂದರಲ್ಲಿ ಗೋವಾ ಮತ್ತು ಕರ್ನಾಟಕದ ಈಜು ತಂಡಗಳಿಂದ
ಈಜು ಹಾಗೂ ಜಲಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ 2010ರಿಂದ 2023 ರವರೆಗೆ 1500 ಜನರಿಗೆ ಈಜು ಮತ್ತು
ಜಲಯೋಗವನ್ನು ತರಬೇತು ನೀಡಿದ್ದೇವೆ. ಜಲಯೋಗ
ತರಬೇತುದಾರರನ್ನು ತೆಯಾರಿಸಿದ್ದೇವೆ.ಸಾಗರ ತಾಲ್ಲೂಕಿನ ಆವಿನಹಳ್ಳಿ ಹೋಬಳಿ
ಕಿಪ್ಪಡಿ ಗಿರೀಶ್ ದಂಪತಿಗಳ ಪುತ್ರ 3 ವರ್ಷ 9 ತಿಂಗಳಿರುವಾಗಲೇ ಲಿಂಗಿನಮಕ್ಕಿ
ಹಿನ್ನೀರಿನಲ್ಲಿ 2.5 ಕಿ.ಮೀ ದೂರ ಈಜುವ ಮೂಲಕ ಅತಿ ಚಿಕ್ಕ ವಯಸ್ಸಿನ ಮಿಥಿಲಾ ಹಿರಿಯ
ಸಾಧನೆ ಮಾಡಿರುವುದು ನಮ್ಮ ಅತಿ ಕಿರಿಯ ಶಿಷ್ಯೆ ಎಂದು ಹೆಮ್ಮೆಯಿಂದ
ಹೇಳಿದರು.
ಸಾಗರ ತಾಲ್ಲೂಕಿನಲ್ಲಿ 25 ಕ್ಕೂ ಹೆಚ್ಚು ಬ್ಯಾಚ್‌ಗಳಿಗೆ ಪ್ರಕೃತಿಯಲ್ಲಿನ ಸಹಜ
ನೀರಿನ ಕೆರೆಯಲ್ಲಿ ಮತ್ತು ಶರಾವತಿ ಹಿನ್ನೀರಿನ ಜಲದಲ್ಲಿ ಈಜು,ಜಲಯೋಗಗಳ
ತರಬೇತು ನೀಡಿದ್ದೇವೆ.ಜಲ ಸಂರಕ್ಷಣೆಯ ಅರಿವು ಜಾಗೃತಿ
ಮೂಡಿಸುತ್ತಿದ್ದೇವೆ.ಕೆರೆ ಸಂರಕ್ಷಣೆ ಮತ್ತು ಹೂಳು ತೆಗೆಯುವ
ಕಾಯಕವನ್ನು ಮಾಡುತ್ತಿರುವ ಸಂಸ್ಥೆಗಳೊಂದಿಗೆ ಜಲತಜ್ಞರು ತಮ್ಮ
ಶಿಷ್ಯರ ಸಮೂಹದೊಂದಿಗೆ ಕೈಜೋಡಿಸುವ ಮೂಲಕ ಜಲ ಮೂಲಗಳ
ಶುದ್ದೀಕರಣಕ್ಕೆ ನಮ್ಮದೇ ಕೊಡುಗೆ ನೀಡುತ್ತಿದ್ದೇವೆ ಎಂದರು.
ಪತಂಜಲಿ ಯೋಗ ಸಮಿತಿ ಜೊತೆಗೆ ಗೋವಾ ರಾಜ್ಯದಲ್ಲಿ ಕಳೆದ 3 ತಿಂಗಳಿಂದ
ಕರ್ನಾಟಕದ ಜಲಯೋಗ ತಜ್ಞರುಗಳು ಜಲಯೋಗ ತರಬೇತಿ,
ನೀಡುತ್ತಿರುವ ಕಾರಣ ಗೋವಾದ ಜಲಯೋಗ ತರಬೇತು ಪಡೆದವರು
ತರಬೇತಿದಾರ ತುಳಸಿದಾಸ್ ಮತ್ತು ಪೂಜಾಮಂಗೇಶ್ಕರ್ ನೇತೃತ್ವದಲ್ಲಿ
ಹೆಗ್ಗೋಡಿನ ನಂದಿಗೋಡಿಗೆ ಆಗಮಿಸಿ ಕರ್ನಾಟಕದ ಜಲ ಯೋಗದ
ತಂಡದೊಂದಿಗೆ ಜಲಯೋಗ ಪ್ರದರ್ಶನ ನಡೆಸಿದ್ದಾರೆ ಎಂದರು.
Open Water Swimming ಈಜು ಕೇವಲ ಈಜಲ್ಲ ,ಬದಲಾಗಿ ನೀರಿನಲ್ಲಿ
ಯೋಗ,ಪ್ರಾಣಯಾಮ,ದ್ಯಾನ,ಹಾಡು,ಸಂಗೀತ,ಆಕೃತಿ ರಚನೆ ಒಳಗೊಂಡಿರುವ
ಅತ್ಯಂತ ಪರಿಣಾಮಕಾರಿ ಯೋಗಾಶನಗಳು ಆರೋಗ್ಯವಂತ ಸಮಾಜದ
ನಿರ್ಮಾಣಕ್ಕೆ ಜನರ ಮಾನಸಿಕ ಮತ್ತು ದೈಹಿಕ ಸದೃಡತೆಗೆ ಪೂರಕ
ಪ್ರೇರಕವಾಗಿವೆ ಎಂದರು.
ಹೊರ ದೇಶಗಳಲ್ಲಿ ಈಜು ವಿದ್ಯೆಗೆ ವಿಶೇಷ ಮಾನ್ಯತೆಯಿದೆ.ಭಾರತದಲ್ಲಿಯೂ
ಈಜು ಮತ್ತು ಜಲಯೋಗಗಳಿಗೆ ವಿಶೇಷ ಹಾಗೂ ಸರ್ಕಾರದ ಮಾನ್ಯತೆ
ದೊರೆತರೆ ಹೆಚ್ಚು ಉಪಯೋಗವಾಗುವ ಜೊತೆಗೆ ರಾಷ್ಟ್ರಾದ್ಯಂತ ಈಜು
ಕಲಿಯುವವರ ಸಂಖ್ಯೆ ವಿಸ್ತಾರವಾಗಲಿದೆ ಎಂದರು.
ಗೋವಾದ ಪತಂಜಲಿ ಯೋಗ ತಂಡದ ಪೂಜಾಮಂಗೇಶ್ಕರ್ ಮಾತನಾಡಿ,
ಕರ್ನಾಟಕದ ಜಲಯೋಗ ತಜ್ಞರಾದ ಹರೀಶ್ ದಾಮೋದರ ನವಾತೆ ಅವರು
ಅತ್ಯುತ್ತಮ ಈಜು ತರಬೇತುದಾರರು.ಅವರ ತಂಡದಲ್ಲಿ 3 ವರ್ಷದ ಅತ್ಯಂತ
ಕಿರಿಯ ಶಿಷ್ಯರಿಂದ ಹಿಡಿದು 81 ವರ್ಷದ ಹಿರಿವ ಈಜು ಕಲಿಯುತ್ತಿರುವ ಶಿಷ್ಯರನ್ನು
ಹೊಂದಿರುವ ಇವರು ಗೋವಾದಲ್ಲಿಯೂ ಈಜು ತರಬೇತು ನೀಡುತ್ತಿರುವುದು
ನಮ್ಮ ಸೌಭಾಗ್ಯ ಎಂದರು.
ಗೋವಾದ ಈಜು ತರಬೇತುದಾರ ತುಳಸಿದಾಸ್ ಪ್ರತಿಕ್ರಿಯಿಸಿ ಜಲಯೋಗದ
ತರಬೇತಿಯನ್ನು ಕರ್ನಾಟಕದ ಹರೀಶ್ ದಾಮೋದರ ನವಾತೆಯವರು ನಮಗೆ
ಕಲಿಸಿದ್ದಾರೆ.ಇದೊಂದು ಸಾಂಸ್ಕೃತಿಕ ಕೊಡುಕೊಳ್ಳುವಿಕೆಗೆ
ಪೂರಕವಾಗಿದೆ.ಆದ್ಯಾತ್ಮಿಕ ಮತ್ತು ಆರೋಗ್ಯಕಾರಕ ಈ ಯೋಗವನ್ನು
ಕರ್ನಾಟಕ ಗೋವಾ ರಾಜ್ಯಗಳ ಜೊತೆಗೆ ವಿವಿಧ ರಾಜ್ಯಗಳಿಗೂ ವಿಸ್ತರಿಸುವ
ಕನಸನ್ನು ಹೊಂದಿದ್ದೇವೆ ಎಂದರು.
ಈಜು ತರಬೇತುದಾರ ಮತ್ತು ಹಕ್ಕಲಹಳ್ಳಿ ಹೆರಿಟೇಜ್ ಹೋಮ್ಸ್ ಮಾಲೀಕ
ಗಂಗಾಧರ ಎನ್.ಸಿ ಮಾತನಾಡಿ ಎಲ್ಲಾ ಯೋಗಗಳ ತಾಯಿ ಜಲಯೋಗ,ಈಜಲು
ಆರಂಬಿಸಿದರೇ ಎಲ್ಲಾ ಯೋಗಗಳ ಪ್ರಯೋಜನಾವಾಗುತ್ತದೆ.ಈಜಿನ ಕುರಿತು
ಪ್ರತಿಯೊಬ್ಬರು ಆಸಕ್ತಿವಹಿಸಬೇಕು.ಚಳುವಳಿ ಮಾದರಿಯಲ್ಲಿ ಈಜು ಕಲಿಯುವ
ಅಭಿಯಾನ ಆರಂಭವಾದಲ್ಲಿ ಜಲ ಜಾಗೃತಿ,ಆರೋಗ್ಯ ಜಾಗೃತಿಯೊಂದಿಗೆ ಜೀವ
ರಕ್ಷಣೆಯೂ ಆಗುತ್ತದೆ ಎಂದರು.
ಸುಂದರ ಪ್ರಕೃತಿಯ ಮಡಿಲಲ್ಲಿ ತಿಳಿ ನೀರಿನ ಕೆರೆಯಲ್ಲಿ ಜಲಯೋಗದ
ಗೋವಾ ಮತ್ತು ಕರ್ನಾಟಕದ ತಂಡದ ಸದಸ್ಯರು ಪ್ರಕೃತಿಗೆ ಜಲ ಮಾತೆಗೆ
ನಮಸ್ಕರಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೆರೆಯ ನೀರನ್ನು
ತೀರ್ಥರೂಪದಲ್ಲಿ ಪ್ರೋಕ್ಷಣೆಯೊಂದಿಗೆ ನೀರಿಗಿಳಿಯುವ ಪದ್ದತಿಯನ್ನು
ಅನುಸರಿಸಿದರು.
ಜಲಯೋಗ ಪ್ರದರ್ಶನದಲ್ಲಿ ವಿಶೇಷವಾಗಿ ಪದ್ಮಾಸಾನ,ಕೇರಳ ಬೋಟ್
ಮಾದರಿ,ರೈಲ್ವೇ ಗಾಡಿಯ ಸಾಲು ,ಸೂರ್ಯನಮಸ್ಕಾರ ಸೇರಿದಂತೆ ಹಲವು
ಯೋಗಗಳ ಮಾದರಿಗಳನ್ನು ಸುಮಾರು ಒಂದವರೆ ಗಂಟೆಗೂ ಹೆಚ್ಚು ಕಾಲ ನಡೆಯಿತು.