Saturday, December 6, 2025
Saturday, December 6, 2025

Akashavani Bhadravathi ಆಕಾಶವಾಣಿ ಭದ್ರಾವತಿ ಎಫ್‍ಎಂನಲ್ಲಿ ಹೊಸ ಕಾರ್ಯಕ್ರಮಗಳ ಪ್ರಸಾರ

Date:

Akashavani Bhadravathi ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿ ಹೊಂದಿರುವ ಆಕಾಶವಾಣಿ ಭದ್ರಾವತಿ ಎಫ್.ಎಂ 103.5 MW 675 KHz ನಲ್ಲಿ ಜೂನ್ 01 ರಿಂದ ಹಲವಾರು ಹೊಸ ಕಾರ್ಯಕ್ರಮಗಳು ಪ್ರಸಾರವಾಗಲಿದೆ.

ಪ್ರತಿ ದಿನ ಬೆಳಿಗ್ಗೆ 6.15 ರಿಂದ 6.30 ರವರೆಗೆ ಭಕ್ತಿ ಸಂಗೀತ ಒಳಗೊಂಡ ಗೀರಾರಾಧನ, 6.35 ರಿಂದ 6.40 ರವರೆಗೆ ಡಾ.ಗುರುರಾಜ ಕರ್ಜಗಿ ಅವರ ‘ಕರುಣಾಳು ಬಾ ಬೆಳಕೆ’ ಸರಣಿಯಲ್ಲಿ ವಿವಿಧ ಕಥನಗಳು(ವಾರದ ಎಲ್ಲಾ ದಿನಗಳು), ಬೆಳಿಗ್ಗೆ 6.45 ಕ್ಕೆ ಆರೋಗ್ಯ ವೃದ್ದಿಗೆ ಹೆಲ್ತ್ ಟಿಪ್ಸ್ ಪ್ರಸಾರವಾಗಲಿದೆ.

ಬೆಳಿಗ್ಗೆ 9 ಗಂಟೆ 5 ನಿಮಿಷದಿಂದ 9.35 ರವರೆಗೆ ಕೇಳುಗರ ಆಯ್ಕೆಯ ಕನ್ನಡ ಚಿತ್ರಗೀತೆಗಳು ಪ್ರಸಾರವಾಗಲಿವೆ. ಬೆಳಿಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ಪದಬಂಧ, ಒಗಟು ಹಾಗೂ ನಮ್ಮ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಪರಿಚಯ, ರಸಪ್ರಶ್ನೆ ಹಾಗೂ ಸಾಧಕರ ಪರಿಚಯಗಳನ್ನೊಳಗೊಂಡ ಕೇಳುಗರ ಭಾಗವಹಿಸುವಿಕೆಯ ವಿನೂತನ ಚಿತ್ರಗೀತೆಗಳ ಕಾರ್ಯಕ್ರಮ, ಇದರಲ್ಲಿ ಕೇಳುಗರು ವಾಟ್ಸಾಪ್ ಸಂಖ್ಯೆ: 9481572600 ಮುಖಾಂತರ ಅವರ ಇಷ್ಟದ ಚಿತ್ರಗೀತೆಯೊಟ್ಟಿಗೆ ನೇರವಾಗಿ ಭಾಗವಹಿಸಲು ಅವಕಾಶವಿರುತ್ತದೆ.

ಹಿಂದಿ ಚಿತ್ರಗೀತೆ ಪ್ರಿಯರಿಗೆ ಸಂಜೆ 7.45 ರಿಂದ 8 ಗಂಟೆವರೆಗೆ ವಿಶೇಷ ಕಾರ್ಯಕ್ರಮ. ಪ್ರತಿ ಮಂಗಳವಾರ ರಾತ್ರಿ 9.30 ಕ್ಕೆ ಯಕ್ಷಗಾನ ಪ್ರಿಯರಿಗೆ ತಾಳಮದ್ದಲೆ, ನಾಟಕ ಪ್ರಿಯರಿಗೆ ಶುಕ್ರವಾರ ರಾತ್ರಿ 9.30 ಕ್ಕೆ ನಾಟಕಗಳ ಪ್ರಸಾರ ಆಗಲಿದೆ.

ಚಿಂತನ, ಆರೋಗ್ಯ, ಸಾಹಿತ್ಯ, ಯುವ ಪ್ರತಿಭೆಗಳಿಗೆ ಅವಕಾಶ, ಶಿಕ್ಷಣ, ಸಾಹಿತ್ಯ, ಕೃಷಿ ಕಾರ್ಯಕ್ರಮ, ಸಂಗೀತ, 4 ಭಾಷೆಯ ಸುದ್ದಿ ಸಮಾಚಾರದೊಂದಿಗೆ ಈ ಎಲ್ಲ ಹೊಸ ಕಾರ್ಯಕ್ರಮಗಳ ಪರಿಚಯ, ನಿಮ್ಮ ಮೆಚ್ಚಿನ ಆಕಾಶವಾಣಿ ಭದ್ರಾವತಿ ಎಫ್‍ಎಂ 103.5 ಹಾಗೂ ಮೀಡಿಯಂ ವೇವ್ಸ್ 675 ಕಿಲೋ ಹಟ್ರ್ಸ್ ತರಂಗಾಂತರದಲ್ಲಿ ಕೇಳಬಹುದು.

Akashavani Bhadravathi ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ : 9481572600 ಮುಖಾಂತರ ಹಂಚಿಕೊಳ್ಳಬಹುದೆಂದು ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...