Breaking News ಶಿವಮೊಗ್ಗ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಅಚ್ಚರಿ ಉಂಟು ಮಾಡುವಂತಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಮೃತಪಟ್ಟಿದ್ದಾನೆ.
ಆಸ್ಪತ್ರೆ ಒಳಗೆ ಮೃತಪಟ್ಟಿದ್ದರೆ ಯಾರಿಗೂ ಅಚ್ಚರಿ ಆಗುತ್ತಿರಲಿಲ್ಲ. ಆದರೆ, ರೋಗಿಯು ಒಳ ರೋಗಿಯಾಗಿ ವಾರ್ಡ್ ಗೆ ಪ್ರವೇಶ ಪಡೆದಿದ್ದರು. ರೋಗಿಯು ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿರುವುದು ಎಲ್ಲರಿಗೂ ಅಚ್ಚರಿಯಾಗಿ.
ಮೃತಪಟ್ಟಿರುವ ವ್ಯಕ್ತಿಯ ಹೆಸರು ಮಂಜುನಾಥ್(32). ದಾವಣಗೆರೆ ಜಿಲ್ಲೆಯ ಚನ್ನಗರಿ ಪಟ್ಟಣದ ನಿವಾಸಿ. ಮೇ. 19 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಇತನನ್ನು ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ಒಳ ರೋಗಿ ಯಾವಾಗ ಆಸ್ಪತ್ರೆಯಿಂದ ಹೊರಗೆ ಹೋದನೋ ತಿಳಿದಿಲ್ಲ.
ಮತ್ತೊಂದು ಅಚ್ಚರಿ ಎಂದರೆ ಯಾವುದೇ ಡಿಸ್ಜಾರ್ಚ್ ಪ್ರಕ್ರಿಯೆ ನಡೆಯದೆ, ಇನ್ನೂ ಚೇತರಿಸಿಕೊಳ್ಳದ ರೋಗಿಯು ಒಳರೋಗಿ ವಿಭಾಗದಿಂದ ಹೊರಗೆ ಬಂದಿದ್ದಾನೆ.
ಆಸ್ಪತ್ರೆಯ ಸಿಬ್ಬಂದಿ ಈತನನ್ನು ಗಮನಿಸಿಲ್ಲ. ಇದರ ಪರಿಣಾಮ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಆತನ ಚೀಲದಲ್ಲಿ ಜಿಲ್ಲಾಸ್ಪತ್ರೆಗೆ ಸೇರ್ಪಡೆಯಾಗಿರುವ ದಾಖಲೆ ಸೇರಿದಂತೆ ಇನ್ನಿತರ ದಾಖಲೆಗಳು ಪತ್ತೆಯಾಗಿದೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು, ಆಸ್ಪತ್ರೆಯ ಆವರಣದಲ್ಲಿ ಸಾವನ್ನಪ್ಪಿದ್ದಾನೆ.
ಈ ಘಟನೆಯಿಂದ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಭಯ ಭೀತರಾಗಿದ್ದಾರೆ. ಹೀಗೆ ಒಳರೋಗಿ ಆಗಿದ್ದ ಆತ ಹೊರಗೆ ಬಂದು ಮೃತನಾದದ್ದು ಹೇಗೆ? ಬಂದ ನಂತರ ಆತನ ಬಗ್ಗೆ ಯಾರು ಕೂಡಾ ನಿಗಾವಹಿಸಿಲ್ಲವೇಕೆ!? ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯು ಸೂಕ್ತ ಚಿಕಿತ್ಸೆ ಸಿಗದೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಾಣ ಬಿಟ್ಟಿದ್ದಾನೆ.
Breaking News ಮೃತನ ಸಂಬಂಧಿಕರು ಘಟನೆ ಕುರಿತು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ಮತ್ತು ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ