Friday, March 20, 2026
Friday, March 20, 2026

Awareness Regarding Menstrual ಋತುಚಕ್ರದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲು ಜೆಸಿಐ ಜಾಥಾ

Date:

Awareness Regarding Menstrual ಋತುಚಕ್ರ ಮತ್ತು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ಜೆಸಿಐ ಸಂಸ್ಥೆಗಳಿಂದ ಪ್ರಯಾಸ ಎಂಬ ವಿಶೇಷ ಜಾಗೃತಿ ಅಭಿಯಾನ ನಡೆಸಲಾಯಿತು.

ವಾಕಾಥಾನ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಋತುಚಕ್ರದ ಜಾಗೃತಿ ಜಾಥಾವು ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಿಂದ ಬಸ್ ನಿಲ್ದಾಣದವರೆಗೂ ಆಯೋಜಿಸಿದ್ದ ಅಭಿಯಾನದಲ್ಲಿ ಎಲ್ಲ ಜೆಸಿಐ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ಜಾಗೃತಿ ನಡೆಸಲಾಯಿತು.

ಡಾ. ಶೀಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಬಲೂನ್ ಹಾರಿಸುವುದರ ಮುಖಾಂತರ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಋತುಚಕ್ರದ ಬಗ್ಗೆ ಮಹಿಳೆಯರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು.

Awareness Regarding Menstrual ಜೆಸಿಐ ಸಂಸ್ಥೆಯ ಪೂರ್ಣಿಮಾ ಸುನಿಲ್, ಸುಷ್ಮಾ, ಕಿರಣ್, ಶ್ರೀಧರ್ ಹೆಗಡೆ, ಶೋಭಾ ಸತೀಶ್, ಅಶ್ವಿನಿ, ಕಾರ್ಯಕ್ರಮ ಸಂಯೋಜಕಿ ದಿವ್ಯ, ವಲಯ ಅಧ್ಯಕ್ಷ ಅನುಷ್ ಗೌಡ, ವಲಯ ಉಪಾಧ್ಯಕ್ಷ ಸತೀಶ್ ಚಂದ್ರ, ವೀರೇಶ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿವಿಜಯಕುಮಾರ್, ಪ್ರತಿಮಾ ಡಾಕಪ್ಪ ಗೌಡ, ನರಸಿಂಹ ಶೆಟ್ಟಿ ಶಾರದಾ ಶೇಷಗಿರಿ, ಡಾ. ಅಖಿಲ, ಡಾ. ಲಲಿತಾ ಭರತ್, ಗೌರೀಶ್, ಭಾರ್ಗವ್, ಪ್ರಮೋದ್, ಸಂತೋಷ್, ವಾಣಿ ಜಗದೀಶ್ ಉಪಸ್ಥಿತರಿದ್ದರು.
ಜಾಗೃತಿ ಜಾಥಾದಲ್ಲಿ 10 ಜೆಸಿಐ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಕರಪತ್ರ ಹಾಗೂ ಪ್ಲೇ ಕಾರ್ಡುಗಳನ್ನು ಹಿಡಿದುಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಶಿವಮೊಗ್ಗದಿಂದ ದಂಪತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆಮ

Shivamogga News ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 2ನೇ...

Shivamogga News ಪಂಚಾಂಗ ಶ್ರವಣವು ಪುಣ್ಯಪ್ರದ. ಕೆಟ್ಟಸ್ವಪ್ನವನ್ನು ದೂರಮಾಡುತ್ತದೆ- “ಕಗ್ಗ” ಜಿ.ಎಸ್.ನಟೇಶ್.

Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ...

Rangayana, Shivamogga ಚಿಣ್ಣರ ಸಿಹಿಮೊಗೆ ಬೇಸಿಗೆ ಶಿಬಿರದಲ್ಲಿ ನಾಟಕ ನಿರ್ದೇಶಕ ಮತ್ತು ಜನಸಹಾಯಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳ ಆಹ್ವಾನ.

Rangayana ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ...