Gopala Krishna Beluru ಅಭಿವೃದ್ಧಿಗೆ ಪೂರಕವಾಗಿ ಮರಳು ಮುಕ್ತವಾಗಿ ಸಿಗುವಂತೆ ಮಾಡಬೇಕಿದೆ.ಅತಿ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮರಳು ನೀತಿ ಸರಳೀಕರಣ ಮಾಡಲು ಸರ್ಕಾರದ ಗಮನಸೆಳೆಯಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಪತ್ರಿಕಾಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ತಾಲ್ಲೂಕು ಕರ್ಯನಿರತ ಪತ್ರಕರ್ತರ ಸಂಘ ಸಂಯುಕ್ತಾಶ್ರಯದಲ್ಲಿ ಶಾಸಕ ಗೋಪಾಲಕರಷ್ಣ ಬೇಳೂರು ಅವರೊಂದಿಗಿನ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಣಿ ಮತ್ತು ವಿಜ್ಞಾನ ಇಲಾಖೆಯ ಅದಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.ಸರ್ಕಾರಿ ಕಾಮಗಾರಿಗಳು ಮತ್ತು ಖಾಸಗಿ ಕಟ್ಟಡಗಳ ನಿರ್ಮಾಣದಿಂದ ತಾಲ್ಲೂಕು,ಜಿಲ್ಲೆ ಮತ್ತು ರಾಜ್ಯದ ಅಬಿವೃದ್ಧಿಯ ವೇಗ ಹೆಚ್ಚುತ್ತದೆ.ಆದ್ದರಿಂದ, ಸರ್ಕಾರ ಅಭಿವೃದ್ಧಿಗೆ ಪೂರಕವಾಗಿ ಮರಳು-ಜೆಲ್ಲಿ ಮುಕ್ತವಾಗಿ ದೊರೆಯುವಂತೆ ನಿಯಮಗಳ ಸರಳೀಕರಣ ಮಾಡಲು ಆಸಕ್ತಿವಹಿಸುತ್ತೇನೆ ಎಂದರು.
ಸಾಗರ ಪಟ್ಟಣದಲ್ಲಿ ಆಶ್ರಯ ನಿವೇಶನ ಹಂಚಿಕೆ ವಿಚಾರದಲ್ಲಿನ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಸಕ ಬೇಳೂರು ಈಗಾಗಲೆ 4000 ಅರ್ಜಿಗಳು ನಿವೇಶನ ರಹಿತರಿಂದ ನಗರಸಭೆಗೆ ಸಲ್ಲಿಕೆಯಾಗಿವೆ.ಆದರೆ, ಅಷ್ಟೊಂದು ನಿವೇಶನಗಳೇ ಇಲ್ಲವಾಗಿದೆ.ಆದ್ದರಿಂದ ಕನಿಷ್ಟ 2000 ಫಲಾನುಭವಿಗಳಿಗಾದರಾರೂ ನಿವೇಶನ ನೀಡಲು ಹೊಸದಾಗಿ ಆಶ್ರಯ ಲೇಔಟ್‌ಗಳ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು.
ವಸತಿ ಸಮುಚ್ಚಯ ನಿರ್ಮಿಸುವ ಮೂಲಕ ಆಶ್ರಯ ಫಲಾನುಭವಿಗಳಿಗೆ ಸೂರು ಕಲ್ಪಿಸುವ ದಿಕ್ಕಿನಲ್ಲಿಯೂ ಚಿಂತನೆ ನಡೆಸುತ್ತೇವೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯ ವಸತಿ ಸಮುಚ್ಚಯ ನಿರ್ಮಿಸಿರುವ ಮಾದರಿಯಲ್ಲಿ ಆಶ್ರಯ ಯೋಜನೆ ಸಮುಚ್ಚಯಗಲ ನಿರ್ಮಿಸಿ ವಿತರಿಸುವ ಯೋಜನೆಯಿದೆ ಎಂದರು.
ಸಾಗರ ಮತ್ತು ಹೊಸನಗರದಲ್ಲಿ ಯುವಕರುಗಳಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವಂತಹ ಶಾಹಿಗಾರ್ಮೇಂಟ್ಸ್ ಮಾದರಿ ಕಾರ್ಖಾನೆ ಅಥವಾ ಕಂಪನಿಗಳ ಆಹ್ವಾನಿಸುವ ಯೋಜನೆಯಿದೆ.
ಹೊಸನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರಿನ ಯೋಜನೆಯಾದ ನಂತರ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಾಗುತ್ತದೆ ಎಂದರು.
ಸಾಗರದ ಸಮಗ್ರ ಅಭಿವೃದ್ಧಿಗೆ ರಸ್ತೆ,ಮೂಲಭೂತ ಸೌಕರ್ಯಗಳು ಹಾಗೂ ಉದ್ಯಾನವನಗಳ ನಿರ್ಮಿಸುವ ಜೊತೆಗೆ ಸಾಗರಕ್ಕೆ ಸುಸಜ್ಜಿತ ರಂಗಮಂದಿರ ನಿರ್ಮಿಸುವ ಯೋಜನೆಯಿದೆ ಎಂದರು.
ಒಳಚರಂಡಿ ಯೋಜನೆ ನೆನೆಗುದಿಗೆ ಬಿದ್ದು 15 ವರ್ಷವಾದರೂ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ತಮ್ಮ ಅವಧಿಯಲ್ಲಿಯೇ 70ಕೋಟಿ ರೂಗಳ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಲಾಗಿತ್ತು.ಕೋರ್ಟ್ ಆದೇಸ ಮಾಡಿ ಒಳಚರಂಡಿ ಯೋಜನೆಗೆ ತಾಕೀತು ಮಾಡಿತ್ತು ಎಂದ ಅವರು ಕಳೆದ 5 ವರ್ಷಗಳಲ್ಲಿ ಒಳಚರಂಡಿ ಯೋಜನೆ ನಿರ್ಲಕ್ಷಿಸಲಾಗಿತ್ತು.ಈಗ ಪುನಾರಂಭಿಸುವೆಗೊಳಿಸುತ್ತೇನೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನವಾಗಲಿದೆಯಾ? ಅಥವಾ ಜಾರಿಯಾಗುವುದೇ ಅನುಮಾನನಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು ದೊಡ್ಡ ಯೋಜನೆಯಾಗಿದೆ. 50 ಸಾವಿರ ಕೋಟಿ ರೂಗಳ ಬಜೆಟ್ ಬೇಕಾಗುತ್ತದೆ. ನಮ್ಮ ಸರ್ಕಾರ ವಿಧಾನಸಭೆಯಲ್ಲಿ ಚರ್ಚಿಸಿ ನಮ್ಮದೇ ಬಜೆಟ್ ಮಂಡಿಸುವ ಮೂಲಕ ಗ್ಯಾರಂಟಿ ಯೋಜನೆಯನ್ನು ಗ್ಯಾರಂಟಿ ಜಾರಿಗೆ ತರುತ್ತೇವೆ ಎಂದರು.
3ನೇ ಭಾರಿ ಶಾಸಕರಾಗಿರುವ ನಿಮಗೆ ಸಚಿವ ಸ್ಥಾನ ಸಿಗದಿರುವ ಕುರಿತು ಅಸಮಾಧಾನವಿದೆಯೇ…? ಮುಂದೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ದೊರೆಯುವ ಭರವಸೆ ಇದೆಯಾ?ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಬೇಳೂರು ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಹೆಚ್ಚಿನ ಬಹುಮತದಿಂದ 135 ಶಾಸಕರು ಚುನಾಯಿತರಾಗಿರುವಾಗ ಸಹಜವಾಗಿಯೇ ಅಧಿಕಾರ ಹಂಚಿಕೆಗೆ ಪೈಪೋಟಿ ಇರುತ್ತದೆ. ಒಂದು ಮಾನದಂಡದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಹಂಚಿಕೆಯಾಗಿದೆ. 5 ಭಾರಿ ಗೆದ್ದವರಿಗೂ ಸಚಿವ ಸ್ಥಾನ ನೀಡಲಿಲ್ಲ.ಬೇರೆ ಅಧಿಕಾರ ಹೊಣೆಗಾರಿಕೆ ನೀಡುವ ಚಿಂತನೆಯಿರಬಹುದು ಎಂದರು.
ನಮ್ಮ ಜಿಲ್ಲೆಯ ಸಚಿವ ಮಧುಬಂಗಾರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ನಾನೂ ಯಾವುದೇ ನಿಗಮ ಮಂಡಳಿಗಳ ಅಧಿಕಾರವನ್ನು ಕೇಲಲಿಲ್ಲ.ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ನಾನು ಶಾಸಕನಾಗಿರುವುದು ಅಭಿವೃದ್ಧಿ ಮಾಡುವ ಉದ್ದೇಶದಿಂದ,ಆದ್ದರಿಂದ ಅಬಿವೃದ್ಧಿಯಲ್ಲಿ ಆಸಕ್ತಿವಹಿಸುತ್ತೇವೆ.ಜನಸೇವೆಯ ಗುರಿ ಸಾಧಿಸುತ್ತೇವೆ ಎಂದರು.
ಸಾಗರ ಪಟ್ಟಣದ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಕೇವಲ ಮೂರು ಮಹಡಿಗಳಿಗೆ ಸೀಮಿತಗೊಳಿಸಲಾಗಿದೆ.ಆದರೇ 5 ಮಹಡಿಯವರೆಗೂ ಕಟ್ಟಡ ನಿರ್ಮಿಸಲು ಪರವಾನಿಗೆ ನೀಡಿದರೇ, ನೆಲದ ಬೇಡಿಕೆ ತಗ್ಗುತ್ತದೆ ಎಂಬ ಅಬಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಶಾಸಕ ಬೇಳೂರು ಅಧಿಕಾರಿಗಳೊಂದಿಗೆ ಸಮಾಲೋಚಿಸುತ್ತೇನೆ.ಇಲ್ಲಿನ ಮಣ್ಣಿನ ಸಾಮರ್ಥ್ಯದ ಆಧಾರದಲ್ಲಿ ಮಹಡಿಗಳ ನಿರ್ಮಾಣಕ್ಕೆ ಅನುಮತಿ ದೊರೆಯುತ್ತದೆ.ಅವಕಾಶವನ್ನು ಬಳಸಿ ವೈಜ್ಞಾನಿಕವಾಗಿ ಸಾಧ್ಯವಿದ್ದರೇ ಅಂತಹ ಪರವಾನಿಗೆಗೆ ಸೂಚಿಸುತ್ತೇನೆ ಎಂದರು.
Gopala Krishna Beluru ಗಣಪತಿ ಕರೆ ಅಭಿವೃದ್ಧಿ ಹೆಸರಿನ ವಿವಾದಿತ ವಿಷಯ ಚುನಾವಣಾ ಪ್ರಚಾರದಲ್ಲಿಯೂ ಬಳಸಿಕೊಂಡಿದ್ದೀರಿ.ಕೆರೆ ಒತ್ತುವರಿ ತೆರವು ಕುರಿತು ನಿಮ್ಮ ಅಬಿಪ್ರಾಯವೇನು?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಗಣಪತಿ ಕೆರೆ ಒತ್ತುವರಿ ಕುರಿತು ಸಮಗ್ರ ಸರ್ವೆ ಮಾಡಿಸಿ ಯಾವುದೇ ಮುಲಾಜಿಲ್ಲದೆ ಗಡಿ ಗುರುತು ಮಾಡಿಸುತ್ತೇನೆ.ಕೆರೆ ಏರಿ ಮೇಲೆ ಕೆರೆಯ ವ್ಯಾಪ್ತಿಯನ್ನು ತೆರವುಗೊಳಿಸಿ ಉದ್ಯಾನವನ ನಿರ್ಮಿಸುವ ಮೂಲಕ ಸಾರ್ವಜನಿಕರ ವಾಯು ವಿಹಾರಕ್ಕೆ ಅವಕಾಶ ಕಲ್ಪಿಸುತ್ತೇನೆ ಎಂದರು.