Saturday, December 6, 2025
Saturday, December 6, 2025

NSS Camp At Kuvempu University ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ಶಿಬಿರ ಸಹಕಾರಿ-ಪ್ರೊ.ವೈ.ಎಲ್.ರಾಮಚಂದ್ರ

Date:

NSS Camp At Kuvempu University 2023ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅ೦ತರ್ ಕಾಲೇಜು ಎನ್.ಎಸ್.ಎಸ್. ಶಿಬಿರವನ್ನು ವಿಶ್ವವಿದ್ಯಾಲಯ ಆವರಣ, ಜ್ಞಾನ ಸಹ್ಯಾದ್ರಿ, ಶ೦ಕರಘಟ್ಟ ಇಲ್ಲಿ ದಿನಾ೦ಕ: 25-05-2823 ರಿ೦ದ 31-05-2023 ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಉದ್ಘಾಟಿಸಿದ ಪ್ರೊ. ವೈ. ಎಲ್ ರಾಮಚ೦ದ್ರ, ಹಣಕಾಸು ಅಧಿಕಾರಿಗಳು, ಕುವೆ೦ಪು ವಿಶ್ವವಿದ್ಯಾಲಯ, ಇವರು ಮಾತನಾಡುತ್ತಾ ತಾವೂ ವಿದ್ಯಾರ್ಥಿಯಾಗಿದ್ದಾಗ ಎನ್.ಎಸ್.ಎಸ್. ಸ್ವಯ೦ಸೇವಕನಾಗಿದ್ದೆ. ನಾವು ಎನ್.ಎಸ್.ಎಸ್. ಕಾರ್ಯಕ್ರಮಗಳಲ್ಲಿ ಶಿಬಿರಗಳಲ್ಲಿ ಭಾಗವಹಿಸುವಾಗ ಯಾವುದೇ ಜ್ಯಾತಿ ಧರ್ಮ, ಮತ, ಬಡವ ಶ್ರೀಮಂತ, ಬೇಧ ಭಾವಗಳು ನನ್ನನ್ನು ಭಾಧಿಸಲಿಲ್ಲ ಎಂದರು.

ಈ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಬಾಳ್ವೆ, ತಾಳ್ಮೆ ಮು೦ತಾದ ಸದ್ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಶಿಬಿರದ ಪ್ರಸ್ತಾವನೆ ಮಾತನ್ನಾಡಿದ ಡಾ. ನಾಗರಾಜ ಪರಿಸರ, ಕಾರ್ಯಕ್ರಮ ಸ೦ಯೋಜನಾಧಿಕಾರಿ, ಎನ್.ಎಸ್.ಎಸ್. ಮಾತನಾಡಿ ಎನ್.ಎಸ್.ಎಸ್. ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವ, ಸ್ವಚ್ಛತೆ ಬಗ್ಗೆ ಅರಿವು, ಪರಿಸರ ಜಾಗೃತಿ ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಸ್ವಯಂ ಸೇವಕರು ತಾವು ಜಾಗೃತರಾಗುವುದರ ಜೊತೆಗೆ ತಮ್ಮ ಅಕ್ಕಪಕ್ಕದ ಸಮುದಾಯದ ಜನರಲ್ಲಿಯೂ ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ. ಗಿಡ ನೆಡುವುದು, ರಕ್ತದಾನ ಮು೦ತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಂ.ಆರ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಧರ್ಮೇಗೌಡ ಇವರು ಮಾತನಾಡಿ, ಎನ್.ಎಸ್.ಎಸ್. ಶಿಬಿರಗಲ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿಯುತ್ತಾರೆ ಮತ್ತು ಸಾಮಾಜಿಕ ಪಿಡುಗಗಳನ್ನು ತೊಡೆದುಹಾಕಲು ಶ್ರಮಿಸುತ್ತಾರೆ ಎಂದರು.

NSS Camp At Kuvempu University ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀ ಶರತ್, ಶ್ರೀ ಲಕ್ಷ್ಮಣ್ ಉಪಸ್ಥಿತರಿದ್ದರು.

ಶಿಬಿರದ ಅಂಗವಾಗಿ ವ್ಯಕ್ತಿತ್ವ ವಿಕಸನ, ರಕ್ತದಾನದ ಮಹತ್ವ, ಆರೋಗ್ಯ ಮತ್ತು ಆನ೦ದ, ಪರಿಸರದ ಸ೦ರಕ್ಷಣೆಯ ಮಹತ್ವ ಮುಂತಾದ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಪ್ರತಿದಿನ ಶ್ರಮದಾನದ ಅಂಗವಾಗಿ, ವಿಶ್ವವಿದ್ಯಾಲಯ ಆವರಣ, ಶ೦ಕರಘಟ್ಟ ಗ್ರಾಮದ ಮುಖ್ಯ ಬೀದಿಗಳು ಮತು ಭದ್ರಾ ಜಲಾಶಯದ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದ್ದು, ಪ್ಲಾಸ್ಟಿಕ್ ಆಯುವ ಮೂಲಕ ಅಂದಾಜು 60 ಬ್ಯಾಗುಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಗ್ರಾಮ ಪ೦ಚಾಯತಿಗೆ ನೀಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...