Thursday, March 19, 2026
Thursday, March 19, 2026

Skill Development ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಮೇಕಪ್ ತರಬೇತಿ

Date:

Skill Development ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಮೇಕಪ್ ತರಬೇತಿ ಮೇಕಪ್ ಕಲಿಕೆಯಿಂದ ಮಹಿಳೆಯರು ಮತ್ತು ಯುವತಿಯರು ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿಕೊಳ್ಳುವ ಜೊತೆಗೆ ಉತ್ತಮ ಸ್ವ-ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ “ಅಶ್ವಿನಿ ಎಸ್. ಎಂ” ಅವರು ಹೇಳಿದರು.

ಶಿವಮೊಗ್ಗದ ಲಕ್ಷ್ಮೀಗೆಲಾಕ್ಸಿಯಲ್ಲಿ 7ನೇ ಬ್ಯಾಚಿನ ಸಮಾರೋಪ ಕಾರ್ಯಕ್ರಮದಲ್ಲಿ ಮೇಕಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆಕರ್ಷಕ ಟ್ರೋಫಿ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಶಿವಮೊಗ್ಗ ನಗರದಲ್ಲಿ ಅಶ್ವಿನೀಸ್ ಮೇಕೋವರ್ ಸ್ಟುಡಿಯೋ ಸಂಸ್ಥೆಯು ವಿಶೇಷವಾಗಿ ಮಹಿಳೆಯರಿಗೆ, ಯುವತಿಯರಿಗೆ ಪ್ರತಿಬಾರಿಯೂ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಿ ಸಂಸ್ಥೆ ವತಿಯಿಂದ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
03 ಜೂನ್ 2023 ಶನಿವಾರ ಒಳಗೆ ಮೇಕಪ್ ಕೋರ್ಸ್ ಗೆ ನೋಂದಣಿಯಾದ ವಿದ್ಯಾರ್ಥಿಗಳಿಗೆ ಈ ಬಾರಿಯೂ ತರಬೇತಿ ಶುಲ್ಕದಲ್ಲಿ 60% ವಿಶೇಷ ರಿಯಾಯಿತಿಯನ್ನ ಆಫರ್ ನೀಡಲಾಗುತ್ತಿದೆ.

Skill Development ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಮೇಕಪ್ ತರಬೇತಿ ಈ ಬಾರಿಯ ಬ್ಯಾಚಿನಲ್ಲಿ 10 ಜನರಿಗೆ ಮಾತ್ರ ಅವಕಾಶವಿದ್ದು,ಈಗಾಗಲೇ 06 ಜನ ಸೇರಾಗಿದ್ದು, ಇನ್ನೂ ಕೇವಲ 04 ಸೀಟುಗಳು ಮಾತ್ರ ಉಳಿದಿದೆ ಆದ್ದರಿಂದ ಮೊದಲು ನೊಂದಣಿಯಾದವರಿಗೆ ಮಾತ್ರ ಈ ಅವಕಾಶ ಮತ್ತು ಮೊದಲ ಆದ್ಯತೆ ನೀಡಲಾಗಿದ್ದು ಈ ಕೂಡಲೇ ಸಂಸ್ಥೆಗೆ ಕರೆ ಮಾಡಿ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಿ, ಈ ತರಬೇತಿ ಪಡೆದವರಿಗೆ ಬೃಹತ್ ವೇದಿಕೆಯಲ್ಲಿ ಆಕರ್ಷಕ ಸರ್ಟಿಫಿಕೇಟ್ ಸಹ ನೀಡಿ ಗೌರವಿಸಲಾಗುವುದು ಮತ್ತು ಆಕರ್ಷಕ ಮೇಕಪ್ ಉಡುಗೊರೆಗಳನ್ನು ಸಹ ಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಶಿವಲೀಲಾ ಮಾತನಾಡುತ್ತಾ, ಹೊಸ ಬ್ಯಾಚ್ ಜೂನ್ 06 ರಿಂದ ಆರಂಭಗೊಳ್ಳುತ್ತಿದ್ದು, ಮೇಕಪ್ ಕೊರ್ಸ್ ಗೆ ಸೇರಬಯಸುವ ಗ್ರಾಮೀಣ ಅಥವಾ ಸಿಟಿ ಭಾಗದ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವಮೊಗ್ಗ ಸಿಟಿಯಲ್ಲೆ ಹೇಳಿಕೊಡಲಾಗುವುದು. ಈ ತರಬೇತಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ, ವಿದ್ಯಾರ್ಹತೆ ಬೇಕಿಲ್ಲ, ನಿಮಗೆ ಅನುಕೂಲವಾಗುವ ಭಾಷೆಯಲ್ಲೆ ತರಗತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9901216093 ಗೆ ಸಂಪರ್ಕಿಸಿ ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು.ಮಾಡೇಲ್ ಎಲ್ಲರೂ ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...