Shivamogga Airport ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟನೆಗೊಂಡು ಅನೇಕ ತಿಂಗಳುಗಳೇ ಕಳೆದಿದೆ.ಆದರೆ, ವಿಮಾನ ಸೇವೆ ಇನ್ನೂ ಸಾರ್ವಜನಿಕರಿಗೆ ದೊರೆತಿಲ್ಲ. ಈ ಕುರಿತು
ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟರ್ ಅಭಿಯಾನ ಆರಂಭಗೊಂಡಿದೆ.
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಹಲವಾರು ಜನರು ಸಾಲು ಸಾಲಾಗಿ ಪ್ರಶ್ನೆ ಕೇಳುತ್ತಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಈ ಕುರಿತು ಮೊದಲು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದಾರೆ.
ರೂಪೇಶ್ ರಾಜಣ್ಣ ಪ್ರಶ್ನೆ ಬೆನ್ನಲೇ ಹಲವಾರು ಜನರು ಟ್ವಿಟರ್ ನಲ್ಲಿ ಪ್ರಧಾನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ.
ರೂಪೇಶ್ ರಾಜಣ್ಣ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹೀಗೆ ಬರೆದಿದ್ದಾರೆ. ಪ್ರಧಾನಿಗಳು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿ ಇಂದಿಗೆ 90 ದಿನ ಆಯ್ತು. ಈ ಮೂರು ತಿಂಗಳಲ್ಲಿ ಅಲ್ಲಿಂದ ಒಂದು ವಿಮಾನವು ಹಾರಿಲ್ಲ, ಇಳಿದಿಲ್ಲ. ಪ್ರಧಾನಿಗಳಿಂದ ನಡೆದ ಈ ಉದ್ಘಾಟನೆಗೆ ಕರ್ನಾಟಕ ಸರ್ಕಾರ ಖಜಾನೆಯಿಂದ ವ್ಯಯವಾದ ಮೊತ್ತ 21.06 ರೂಪಾಯಿ…
Shivamogga Airport ಇನ್ನೂ ಅನೇಕರು ವಿಮಾನ ನಿಲ್ದಾಣಕ್ಕೆ 450 ಕೋಟಿ ರೂಪಾಯಿ, ಉದ್ಘಾಟನೆಗೆ 21 ಕೋಟಿ, ಪ್ರತಿ ತಿಂಗಳು ನಿರ್ವಹಣೆಗೆ 25 ಲಕ್ಷ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆದಷ್ಟು ಬೇಗ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉಕ್ಕಿನ ಹಕ್ಕಿಗಳ ಹಾರಾಟ ಆರಂಭವಾಗಲಿ ಎಂಬುವುದು ಎಲ್ಲರ ಆಶಯ.