Araga Jnanendra ಉಚಿತ ಕಾರ್ಯಕ್ರಮಗಳ ಜಾರಿಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ 20,000 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಕ್ರಮವನ್ನು ತಡೆಹಿಡಿಯಲಾಗಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 100 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಯನ್ನು ಕಾಂಗ್ರೆಸ್ ಸ್ಥಗಿತಗೊಳಿಸಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಆರೋಪಿಸಿದ್ದಾರೆ.
ತೀರ್ಥಹಳ್ಳಿಯ ಟಿ ಎ ಪಿ ಸಿ ಎಂ ಎಸ್ ಸಭಾಂಗಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಉಚಿತ ಕಾರ್ಯಕ್ರಮಗಳನ್ನು ಘೋಷಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅದೃಷ್ಟ ಬಲದಿಂದ ಗೆಲುವು ಸಾಧಿಸಿದೆ. ಗ್ಯಾರೆಂಟಿ ಕಾರ್ಡ್ ಕೊಟ್ಟ ಕಾಂಗ್ರೆಸ್ ಜನರಿಗೆ ಸೌಕರ್ಯ ತಲುಪಿಸಲು ಒದ್ದಾಡುತ್ತಿದೆ. ಕಾಂಗ್ರೆಸ್ ಗೆಲುವು ತಾತ್ಕಾಲಿಕವಾಗಿದೆ. ಬಿಜೆಪಿ ಜನಮಾನಿಸದಲ್ಲಿದೆ ಎಂದು ಹೇಳಿದ್ದಾರೆ.
Araga Jnanendra ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲಿ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಪ್ರತಿ ವಾರದಲ್ಲೂ ಕ್ಷೇತ್ರದ ಹಳ್ಳಿಗೆ ಭೇಟಿ ನೀಡಿ ಜನರ ಕಷ್ಟ ಸುಖ ಆಲಿಸುತ್ತಿದ್ದೆ. ಗೃಹ ಸಚಿವನಾಗಿ ಕ್ಷೇತ್ರದಲ್ಲಿ ಇರಬಾರದು, ರಾಜ್ಯ ಸುತ್ತಾಡಬೇಕು ಎಂದು ಮಾಜಿ ಸಚಿವರು ಸಲಹೆ ನೀಡುತ್ತಿದ್ದರು. ರಾಜ್ಯದಲ್ಲಿ ಓಡಾಟ ನಡೆಸಿ ಕ್ಷೇತ್ರದ ಜನರ ವಿಶ್ವಾಸ ಪಡೆದಿದ್ದೇನೆ ಎಂಬುದಕ್ಕೆ ಚುನಾವಣೆ ಗೆಲುವೇ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.