District Level Youth Festival ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ ಹಾಗೂ ಆಚಾರ್ಯ ತುಳಸಿ ರಾಷ್ಟೀಯ ವಾಣಿಜ್ಯ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 8 ರಂದು ಕುವೆಂಪು ರಂಗಮಂದಿರ,ಶಿವಮೊಗ್ಗದಲ್ಲಿ ಅಮೃತ ಕಾಲದ ಪಂಚಪ್ರಾಣ-ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ ಎಂಬ ವಿಷಯದಡಿ ಜಿಲ್ಲಾ ಮಟ್ಟದಲ್ಲಿ ಯುವ ಉತ್ಸವ-2023 ಎಂಬ ವಿನೂತನ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 15 ರಿಂದ 29ವರ್ಷ ವಯೋಮಿತಿವುಳ್ಳವರಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ವಾಸವಿರುವ ಯುವಕ, ಯುವತಿಯರು ಮಾತ್ರ ಭಾಗವಹಿಸಬಹುದಾಗಿದೆ.
ಯುವ ಜನತೆಗೆ ವಿವಿಧ ಪ್ರತಿಭೆಗಳ ಅನಾವರಣ ಹಾಗೂ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇದರಲ್ಲಿ ವಿಜೇತರಾದ ತಂಡ/ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ/ಪ್ರಶಸ್ತಿ ಪತ್ರ ನೀಡಲಾಗುವುದು.
ಇದರಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟç ಮಟ್ಟದಲ್ಲಿ ಭಾಗವಹಿಸಬಹುದಾಗಿದೆ. ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಹಾಗೂ ಮನೋರಂಜನೆ ಅಲ್ಲದೇ ಸಾಮಾಜಿಕ ಸಂದೇಶವನ್ನು ಯುವ ಜನರಿಗೆ ಮುಟ್ಟಿಸುವ ಕೆಲಸವು ಈ ಸ್ಪರ್ಧಾ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಗಳ ವಿವರ ಮತ್ತು ನಿಯಮಗಳು:
ಯುವ ಕಲಾವಿದರ ಚಿತ್ರಾಕಲಾ ಸ್ಪರ್ಧೆ:
ಸಮಯ ಅವಕಾಶ 1 ಗಂಟೆ, ಚಿತ್ರಬಿಡಿಸುವ ಪರಿಕರಗಳನ್ನು ಸ್ಪರ್ಧಿಗಳೆ ತರತಕ್ಕದ್ದು. ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುತ್ತದೆ.
ಪ್ರಥಮ-1ಸಾವಿರ, ದ್ವಿತೀಯ-750ರೂ. ತೃತೀಯ-500/- ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ವಿಷಯ: ಪಂಚಪ್ರಾಣ-ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ
ಮೊಬೈಲ್ ಛಾಯಾಗ್ರಹಣ ಸ್ಪರ್ಧೆ : ಸಮಯ ಅವಕಾಶ 2 ಗಂಟೆ.
ಯುವಬರಹಗಾರರ ಸ್ಪರ್ಧೆ : ಸಮಯ ಅವಕಾಶ 45 ನಿಮಿಷ, ಕನ್ನಡ, ಹಿಂದಿ, ಇಂಗ್ಲೀಷ್‌ನಲ್ಲಿ ಬರೆಯಬಹುದು.
ಪ್ರಥಮ-1ಸಾವಿರ ದ್ವಿತೀಯ-750,ತೃತೀಯ 500ರೂ. ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ವಿಷಯ: ಪಂಚಪ್ರಾಣ -ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ
ಭಾಷಣ ಸ್ಪರ್ಧೆ: ಸಮಯ ಅವಕಾಶ 7ನಿಮಿಷ, ಕನ್ನಡ/ಹಿಂದಿ, ಇಂಗ್ಲೀಷ್, ಭಾಷೆಯಲ್ಲಿ ಮಾತನಾಡಲು ಅವಕಾಶವಿರುತ್ತದೆ.
ಪ್ರಥಮ-5000/-ದ್ವಿತೀಯ-2000/-ತೃತೀಯ-1000/-ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ವಿಷಯ: ಪಂಚಪ್ರಾಣ -ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ಪರಂಪರೆ
ಸಾಂಸ್ಕೃತಿಕ ಉತ್ಸವ -ಜಾನಪದ ನೃತ್ಯ :-
ಇದು ಗುಂಪು ಸ್ಪರ್ಧೆಯಾಗಿದ್ದು ತಂಡದಲ್ಲಿ ಕನಿಷ್ಠ 8, ಗರಿಷ್ಠ 10 ಜನ ಇರಬೇಕು. ಸಮಯ ಅವಕಾಶ 10 ನಿಮಿಷ ಆಗಿರುತ್ತದೆ.
ಪ್ರಥಮ-5000/-ದ್ವಿತೀಯ-2.500/-ತೃತೀಯ-1250/- ಬಹುಮಾನ ನೀಡಲಾಗುವುದು.
ಜಾನಪದ ನೃತ್ಯವು ಜಾನಪದ ಪ್ರಕಾರ ಮತ್ತು ಕರ್ನಾಟಕ/ಭಾರತೀಯ ಶೈಲಿಯದ್ದಾಗಿರಬೇಕು. ನಿಮ್ಮ ತಂಡದ ಹೆಸರನ್ನು ನಮೂದಿಸಿನೊಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಲು ಕೊನೆಯ ದಿನಾಂಕ:5-6-2023, ಮೊದಲು ನೋಂದಣಿ ಮಾಡಿ ಕೊಂಡವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಸೂಚನೆ: ಈ ಎಲ್ಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. (ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ) ಸ್ಪರ್ಧಾ ಕಾರ್ಯಕ್ರಮದಲ್ಲಿ ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾಗವಹಿಸುವ ತಂಡಗಳಿಗೆ ಯಾವುದೇ, ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಭಾಗವಹಿಸುವ ಸ್ಪರ್ಧಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
District Level Youth Festival ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08182-220883, 7975443499, ಇ-ಮೇಲ್ ಐಡಿ:- nykshimogaprogrammes@gmail.com.