Check Before Sharing News on Social Media ಜೆ ಸಿ ಐ ಶಿವಮೊಗ್ಗ ಸ್ಟಾರ್ ಸಂಸ್ಥೆಯಿಂದ ನಗರದ ಸರ್ವೋದಯ ವ್ಯಸನ ಮುಕ್ತ ಕೇಂದ್ರದಲ್ಲಿ ಸೈಬರ್ ಕ್ರೈಂ ಬಗ್ಗೆ ಹಾಗೂ ಋತುಚಕ್ರದ ಸಮಯದಲ್ಲಿ ಗಂಡು ಮಕ್ಕಳು ಹೆಣ್ಣು ಮಕ್ಕಳ ಹಾರೈಕೆ ಮಾಡುವ ಬಗ್ಗೆ ಉಪನ್ಯಾಸ ನೀಡಲಾಯಿತು.
ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಅವರು ಅಂತರ್ಜಾಲದ ಕಳ್ಳತನದ ಬಗ್ಗೆ, ಸಾಮಾಜಿಕ ಜಾಲಗಳಲ್ಲಿ ತಮಗೆ ಅರಿವಿಲ್ಲದೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಳ್ಳುವುದರ ಬಗ್ಗೆ, ಸೈಬರ್ ವಂಚನೆಗೆ ಒಳಗಾದಾಗ ಎಲ್ಲಿ ದೂರು ನೀಡಬೇಕು ಯಾರನ್ನು ಸಂಪರ್ಕಿಸಬೇಕು ಮೊದಲ ಅಂತದ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಫೇಕ್ ನ್ಯೂಸ್ ಪರಿಶೀಲನೆ ಮಾಡದೆ ಎಲ್ಲಾ ಗ್ರೂಪುಗಳಿಗೆ ಸಾಮಾಜಿಕ ಜಾಲಗಳಿಗೆ ಹಂಚುವುದನ್ನು ಬಿಟ್ಟು ಮೊದಲು ಸತ್ಯವನ್ನು ತಿಳಿದು ಮುನ್ನಡೆಯಬೇಕೆಂದು ಮಾಹಿತಿ ನೀಡಿದರು.
ಜೆ ಸಿ ಐ ಶಿವಮೊಗ್ಗ ಸ್ಟಾರ್ಸ್ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಅವರು ಗಂಡು ಮಕ್ಕಳು ಸಾಮಾನ್ಯವಾಗಿ ಮಹಿಳೆಯರ ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಆರೈಕೆಗಳ ಬಗ್ಗೆ, ಹೆಣ್ಣು ಮಕ್ಕಳ ದೇಹದಲಾಗುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.
ಸುಮಾರು 50ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡರು, ಸರ್ವೋದಯ ವ್ಯಸನಮುಕ್ತ ಕೇಂದ್ರ ಅಧಿಕಾರಿ ಸಿಬ್ಬಂದಿಗಳಿಗೆ ಅಧ್ಯಕ್ಷರು ಧನ್ಯವಾದಗಳು ತಿಳಿಸಿದರು.
Check Before Sharing News on Social Media ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್, ಕಾರ್ಯದರ್ಶಿಗಳಾದ ಪ್ರಿಯಾಂಕ, ದೀಪ ಕಿಶನ್ ನವೀನ್ ತಲಾರಿ ಇತರ ಸದಸ್ಯರು ಉಪಸ್ಥಿತರಿದ್ದರು.