Madhu Bangarappa Wins In Soraba Constituency ಸೊರಬ ಕ್ಷೇತ್ರದ ಶಾಸಕರಾಗಿ ಮಧು ಬಂಗಾರಪ್ಪ ಅವರು ಆಯ್ಕೆಯಾಗಲಿ ಎಂದು ಅಭಿಮಾನಿಗಳು ಹರಕೆ ಹೊತ್ತಿದ್ದರು. ಈಗ ಆ ಹರಕೆ ಫಲಿಸಿದ ಹಿನ್ನಲೆಯಲ್ಲಿ ಸೊರಬ ತಾಲೂಕಿನ ಬಾಡದಬೈಲು ಗ್ರಾಮದ ಶ್ರೀ ಸಿದ್ಧಿವಿನಾಯಕ ಹಾಗೂ ಶ್ರೀ ಶಾರದಾಂಬ ದೇವಿಯ ಸನ್ನಿಧಿಯಲ್ಲಿ 101 ತೆಂಗಿನ ಕಾಯಿ ಒಡೆಯುವ ಮೂಲಕ ಹರಕೆ ಸಲ್ಲಿಸಿದ್ದಾರೆ. ನಂತರ ವಿಶೇಷ ಪೂಜೆ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರದೀಪ್ ಬಿ.ಸಿ. ಬಾಡದಬೈಲು ಮಾತನಾಡಿ, ಗ್ರಾಮದ ದೇವರುಗಳ ಬಳಿ ಮಧು ಬಂಗಾರಪ್ಪ ಅವರು ಶಾಸಕರಾಗಿ ಆಯ್ಕೆಯಾಗಲಿ ಎಂದು ಗ್ರಾಮಸ್ಥರು ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳು ಹರಕೆ ಹೊತ್ತಿದ್ದೆವು. ಇದೀಗ ಹರಕೆ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದೆವು ಹಾಗೂ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆಯಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿತ್ತಿರುವುದಾಗಿ ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಜನಪರ ನಾಯಕತ್ವ ಗುಣ ಹೊಂದಿರುವ ಮಧು ಬಂಗಾರಪ್ಪ ಅವರನ್ನು ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಜನತೆ ಗೆಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕ್ಷೇತ್ರದ ಜನತೆಯ ನಿರೀಕ್ಷೆಯಾಗಿದೆ ಎಂದರು.
ಕರವೇ ಗಜಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಂತೆ ಮಧು ಬಂಗಾರಪ್ಪ ಅವರು ರೈತಪರ ಕಾಳಜಿಯುಳ್ಳ ನಾಯಕರಾಗಿದ್ದಾರೆ. ಅವರ ವರ್ಚಸ್ಸಿನಿಂದ ನೆರೆಯ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿದೆ. ಹೋರಾಟಗಳ ಮೂಲಕವೇ ಮಧು ಬಂಗಾರಪ್ಪ ಅವರು ನಾಯಕರಾಗಿದ್ದಾರೆ. ಅವರ ಅವಧಿಯಲ್ಲಿ ಕ್ಷೇತ್ರವು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭಹಾರೈಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ಮಧು ಬಂಗಾರಪ್ಪ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ, ಅಭಿಮಾನಿಗಳಿಗೆ ತೀರ್ಥ ಪ್ರಸಾದ ಹಾಗೂ ಸಿಹಿ ವಿತರಿಸಲಾಯಿತು.
Madhu Bangarappa Wins In Soraba Constituency ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಎನ್.ಜಿ. ನಾಗರಾಜ ಚಂದ್ರಗುತ್ತಿ, ಗ್ರಾಮಸ್ಥರಾದ ರಾಜಪ್ಪ, ದಾನಶೇಖರಗೌಡ, ಚಂದ್ರಶೇಖರ ಗೌಡ, ಕೆ.ಆರ್. ಸತ್ಯನಾರಾಯಣ, ಅರುಣ್ ಗೌಡ, ದ್ಯಾವಪ್ಪ, ಮೋಹನ್, ಕುಮಾರ್, ಪರಶುರಾಮ, ಮಾರುತ್ತಿ, ಹರ್ಷವರ್ಧನ ಸೇರಿದಂತೆ ಮಧು ಬಂಗಾರಪ್ಪ ಅಭಿಮಾನಿಗಳು ಉಪಸ್ಥಿತರರಿದ್ದರು.