Madhu Bangarappa ಸಾಮಾಜಿಕ ಚಳುವಳಿಗಳನ್ನು ಹುಟ್ಟು ಹಾಕಿದ ನೆಲೆಯಲ್ಲಿ ಸಮಾಜವಾದಿಯ ಹೋರಾಟಗಾರರ ಬದ್ದತೆಗಳಿಂದ ಶಿವಮೊಗ್ಗ ಜಿಲ್ಲೆಯ ಅಲ್ಪಸಂಖ್ಯಾತ ವರ್ಗದವರಿಗೆ ಬದುಕಿನ ಭರವಸೆಯನ್ನು ಹೆಚ್ಚಿಸಿದೆ.
ಈ ನಿಟ್ಟಿನಲ್ಲಿ ಮಾಜೀ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ನಾಯಕತ್ವ ನಾವೆಂದಿಗೂ ಸ್ಮರಿಸುವಂತಹದ್ದಾಗಿದ್ದು, ಇವರಂತೆ ಶಾಸಕ ಮಧು ಬಂಗಾರಪ್ಪನವರ ನಡೆಗಳು ಜಾತ್ಯತೀತವಾದದ ಸಾಮಾಜಿಕ ನ್ಯಾಯದ ನಿಲುವುಗಳು ಆಗಿರುವುದರಿಂದ ಇವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ಕ್ರೈಸ್ತ ಮುಖಂಡರಾದ ಜ್ಯೋತಿ ಅರಳಪ್ಪನವರು ತಿಳಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರುಗಳು ಶಾಸಕ ಮಧು ಬಂಗಾರಪ್ಪನವರ ಹೆಸರನ್ನು ಸೂಚಿಸಿದ್ದು ನಾಳೆಯ ಸಂಪುಟ ವಿಸ್ತರಣೆಯಲ್ಲಿ ಸಚಿವರನ್ನಾಗಿ ಅಧಿಕೃತವಾಗಿ ಘೋಷಿಸುವುದಾಗಿ ಕೇಳಿ ಬಂದಿದ್ದು ಇದಕ್ಕೆ ರಾಜ್ಯ ಕಾಂಗ್ರೆಸ್ ಕೋರ್ ಕಮಿಟಿಗೆ ಅಭಿನಂದನೆಗಳನ್ನು ಕ್ರೈಸ್ತ ಸಮುದಾಯದ ಪರವಾಗಿ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Madhu Bangarappa ಕ್ರೈಸ್ತ ಸಮುದಾಯದ ಬದುಕುಗಳಿಗೆ ಇಂತಹ ನಾಯಕರು ಆಶಾದಾಯಕವಾಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಶಕ್ತಿ ತುಂಬುತ್ತಾರೆ ಎನ್ನುವ ಭರಸವೆಯು ಇದೆ, ಅಪ್ಪನಂತೆ ಮಗ ಕಟ್ಟಕಡೆಯ ಶ್ರೀ-ಸಾಮಾನ್ಯರಿಗೆ ಅಲ್ಪಸಂಖ್ಯಾತ ವರ್ಗದ ದುರ್ಬಲ ಸೂರುಗಳಿಗೆ ನ್ಯಾಯ ಒದಗಿಸುವುದಕ್ಕೆ ಸದಾ ದನಿಯಾಗುವುದರಲ್ಲಿ ಯಾವುದೇ ನಿಸ್ಸಂದೇಹವಿಲ್ಲವಾಗಿದೆ. ಹೀಗಾಗಿ ಶಾಸಕ ಮಧು ಬಂಗಾರಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಕ್ರೈಸ್ತ ಸಮುದಾಯದ ಪರವಾಗಿ
ಮುಖಂಡರಾದ ಜ್ಯೋತಿ ಅರಳಪ್ಪನವರು ಸೇರಿದಂತೆ ಪ್ರಕಟಣೆಯಲ್ಲಿ ಮುಖಂಡರಾದ ಚಿನ್ನಪ್ಪ. ಮರಿಯಪ್ಪ, ಕಿರಣ್ ಫರ್ನಾಂಡಿಸ್, ಜ್ಞಾನ ಪ್ರಕಾಶ್ ಅವರು ತಿಳಿಸಿದ್ದಾರೆ.