Hondisi Bareyiri Movie ಹೊಂದಿಸಿ ಬರೆಯಿರಿ ಸಿನಿಮಾವು ಹೆಸರಲ್ಲೇ ವಿಭಿನ್ನವಾದ ಭಾವನೆಯನ್ನು ಮೂಡಿಸುತ್ತದೆ. ವಿಭಿನ್ನ ವ್ಯಕ್ತಿಯ ಬದುಕಿನ ಪುಟವನ್ನು ತೆರೆದಿಡುವ ಒಂದು ಪ್ರಯತ್ನ ಈ ಸಿನಿಮಾದಲ್ಲಿ ಎದ್ದು ಕಾಣುತ್ತದೆ.
ಬದುಕು ಬಂದಂತೆ ಸ್ವೀಕರಿಸು, ಸಂಬಂಧಗಳಲ್ಲಿ ಹೊಂದಿಕೊಂಡು ಹೋಗುವುದೇ ಸಹಬಾಳ್ವೆಯ ಸಂಕೇತ. ಈ ವಿಷಯಗಳನ್ನು ಹೊಂದಿಸಿ ಬರೆಯಿರಿ ಸಿನಿಮಾವು ಹೇಳ ಹೊರಟಿದೆ.
ಇಡೀ ಸಿನಿಮಾವು ಭಾವನೆಗಳ ಮೇಲೆ ನಿಂತಿರುವ ಸಿನಿಮಾವಾಗಿದೆ. ಜೀವನದಲ್ಲಿ ಆಗುವ ಏರಿಳಿತದ ಜೊತೆಗೆ ಬದುಕಿನ ಭಾವನೆಗಳ ತೆರೆದಿಡುವ ಕಥೆಯಾಗಿದೆ.
ಸಿನಿಮಾದಲ್ಲಿ ಕಾಲೇಜಿನ ಜೀವನದಲಾಗುವ ಪ್ರೀತಿ ಪ್ರೇಮ, ಸಣ್ಣ ಪುಟ್ಟ ಜಗಳಗಳ ಜೊತೆ ಕಥೆ ಸಾಗುತ್ತದೆ. ಇನ್ನು ಸಿನಿಮಾದ ಎರಡನೇ ಭಾಗದಲ್ಲಿ ಗಂಭೀರವಾಗಿ ಸಾಗುವ ಬೇರೆ ಬೇರೆ ಸನ್ನಿವೇಶಗಳನ್ನು ತೆರೆದಿಡಲಾಗಿದೆ.
ನಿರ್ದೇಶನವನ್ನು ರಾಮೇ ನಹಳ್ಳಿ ಜಗನ್ನಾಥ, ತಾರಾ ಗಣದಲ್ಲಿ ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಅರ್ಚನಾ ಕೊಟ್ಟಿಗೆ, ಅನಿರುದ್ಧ ಆಚಾರ್ಯ. ಛಾಯಾಗ್ರಹಣ: ಶಾಂತಿ ಸಾಗರ್ ಹೆಚ್.ಜೆ.
Hondisi Bareyiri Movie ಹೊಂದಿಸಿ ಬರೆಯಿರಿ ಈ ಚಲನಚಿತ್ರದಲ್ಲಿ ನಾಲ್ಕು ಜನರ ಒಂದು ಗುಂಪಿನ ಸ್ನೇಹ ಹಾಗೂ ಪ್ರೇಮದ ಕಥೆಯನ್ನು ಒಳಗೊಂಡ ಸಿನಿಮಾವಾಗಿದೆ. ಸಿನಿಮಾದಲ್ಲಿ ನವೀನ್ ಶಂಕರ್ ಅವರ ನಟನೆ ಅತ್ಯಂತ ಮನಮೋಹಕವಾಗಿದೆ. ಇವರ ನಟನೆ ಅಂತರ್ಮುಖಿ ಯುವಕನ ಪಾತ್ರ, ಎಲ್ಲಾ ಪಾತ್ರಗಳನ್ನು ಮೀರಿಸುವಂತಿದೆ.
ಬದುಕಿನ ಹುಡುಕಾಟದ ಕಥೆಯನ್ನು ಅದ್ಭುತವಾಗಿ ಪುಟಪುಟಗಳಾಗಿ ತೆರೆದಿಡಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಹೊಂದಿಸಿ ಬರೆಯಿರಿ ಸಿನಿಮಾವನ್ನು ಮನೆ ಮಂದಿ ಎಲ್ಲರೂ ಕುಳಿತು ನೋಡಬಹುದಾದಂತಹ ಸಿನಿಮವಾಗಿದೆ ಎಂದರೆ ತಪ್ಪಾಗಲಾರದು…