Update Your Aadhaar ಜೂನ್ 14ರವರೆಗೆ ಆಧಾರ್ ಕಾರ್ಡನ್ನು ಆನ್ಲೈನ್ ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಅವಕಾಶ ನೀಡಿದೆ.
ಯು ಐ ಡಿ ಎ ಐ- ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ.
10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡಿನಲ್ಲಿ ತಮ್ಮ ಫೋಟೋ ಮತ್ತು ಇತರ ಮಾಹಿತಿಯನ್ನು ಅಪ್ಡೇಟ್ ಮಾಡಲು ಯುಐಡಿಎಐ ಈ ಸೌಲಭ್ಯವನ್ನು ನೀಡಿದೆ. ಜೂನ್ 14ರ ತನಕ ಯಾವುದೇ ಶುಲ್ಕವಿಲ್ಲದೆ ಸಾರ್ವಜನಿಕರು ತಮ್ಮ ಆಧಾರ್ ನಲ್ಲಿ ತಮ್ಮ ಹೆಸರು, ಲಿಂಗ, ಫೋಟೋ, ಮೊಬೈಲ್ ಸಂಖ್ಯೆ ಅಂತಹ ಯಾವುದೇ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.
ಹಾಗಾದ್ರೆ ಆಧಾರ್ ನನ್ನು ಉಚಿತವಾಗಿ ಅಪ್ಡೇಟ್ ಮಾಡಲು https://myaadhaar.uidai.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡಬೇಕು.
Update Your Aadhaar ಒಂದು ವೇಳೆ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಮಾಹಿತಿಯನ್ನು ಅಪ್ಡೇಟ್ ಮಾಡಲು ಬಯಸಿದರೆ, ಮೊದಲಿನ ತರಹ 50 ರೂಪಾಯಿ ಶುಲ್ಕ ಪಾವತಿಸಿ, ಸರಿ ಪಡಿಸಿಕೊಳ್ಳಬೇಕು.