JCI Shivamogga Institute ಜೆಸಿಐ ಸಂಸ್ಥೆಯ ಟ್ರೈ ಯೋ ಬಿಸ್ನೆಸ್ ಕಾರ್ಯಕ್ರಮದ ಅಂಗವಾಗಿ ನಗರದ ಜೆಪಿ ಅಸ್ಪತ್ರೆಯಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆ ಬಿಸ್ನೆಸ್ ಸೆಮಿನಾರ್ ಕಾರ್ಯಕ್ರಮವನ್ನು ಆಯೋಜಿಸಿ ಜೆಸಿ ಸದಸ್ಯರು , ಸಾರ್ವಜನಿಕರಿಗೆ ಹಾಗೂ ಅಸ್ಪತ್ರೆಯ ಸಿಬ್ಬಂದಿಗಳಿಗೆ ಉಪನ್ಯಾಸ ನೀಡಿದೆ.
3 ದಿನಗಳ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಬಿಸ್ನೆಸ್ ಸೆಮಿನಾರ್, 2ನೇ ದಿನ ಬಿಸ್ನೆಸ್ ತರಬೇತಿ, GST ಬಗ್ಗೆ ಮಾಹಿತಿ. 3ನೇ ದಿನ ಸೈಬರ್ ಕ್ರೈಂ ಬಗ್ಗೆ ನಗರದ ವಿವಿಧ ಸಂಸ್ಥೆ ಗಳ ಜೊತೆ ಸೇರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೇ 28 ಮೆನ್ ಸ್ಟ್ರಲ್ ಹೈಜೀನ್ ದಿನವಾಗಿದೆ ಪ್ರಯಾಸ್ ಡೇ ಹೆಸರಿನಲ್ಲಿ ಆಚರಿಸಲಾಗುತ್ತದೆ, ಈ 4 ದಿನಗಳು ಪ್ರತಿದಿನ ವಿಶೇಷ ಕಾರ್ಯಕ್ರಮ ನಡೆಯಲಿದೆ.
JCI Shivamogga Institute ಮಹಿಳೆಯರಿಗಾಗಿ ಈ ಕಾರ್ಯಕ್ರಮ ಇದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಕೇಳಿಕೊಂಡರು. ಪ್ರಯಾಸ್ ಡೇ ಅಂಗವಾಗಿ ಇದೇ ಸಂದರ್ಭದಲ್ಲಿ ಯುವತಿಯರಿಗೆ ಹೈಜಿನ್ ಬಗ್ಗೆ “ಟಾಕ್ ವಿತ್ ಟೀನ್ಸ್” ಡಾಕ್ಟರ್ ಶೋಭಾ ಅವರಿಂದ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಕರ್, ಜೆಸಿ ಡಾ. ಶೋಭಾ, ಜೆಸಿ ಅನಿತಾ, ಜೆಸಿ ವಿದ್ಯಾಶ್ರೀ, ಜೆಸಿ ಕಿಶನ್, ಜೆಸಿ ವಿಜಯ, ಜೆಸಿ ನವೀನ ತಲಾರಿ, ಪದಾಧಿಕಾರಿಗಳು ಅಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.