Office of the Deputy Conservator of Forests, Koppa ಮನೆಯ ಸಮೀಪ ಒಣಗಿ ನಿಂತಿರುವ ಬೃಹದಾಕಾರದ ಮರವನ್ನು ಆ ಸ್ಥಳ ದಿಂದ ತೆರವುಗೊಳಿಸುವ ಮೂಲಕ ನೆಮ್ಮದಿಯಿಂದ ಜೀವನ ನಡೆಸಲು ಅಧಿಕಾರಿಗಳು ಅನುವು ಮಾಡಿಕೊಡ ಬೇಕು ಎಂದು ಚಿಕ್ಕಮಗಳೂರಿನ ಶೆಟ್ಟಿಹಿತ್ಲು ಗ್ರಾಮದ ಬಿ.ಎಸ್.ಗೋಪಾಲ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ತಮ್ಮ ಪತ್ರಿಕಾ ಹೇಳಿಕೆ ನೀಡಿರುವ ಅವರು ಎನ್.ಆರ್.ಪುರ ಚಿಕ್ಕಮಗಳೂರು ತಾಲ್ಲೂಕಿನ ಬನ್ನೂರು ಸಮೀಪದ ಶೆಟ್ಟಿಹಿತ್ಲು ಗ್ರಾಮದಲ್ಲಿ ನಮ್ಮ ಕುಟುಂಬವು ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ವಾಸಿಸು ತ್ತಿದ್ದೇವೆ. ಆದರೆ ಮನೆಯ ಪಕ್ಕದಲ್ಲೇ ಒಣಗಿ ನಿಂತಿರುವ ಬೃಹದಾಕಾರದ ಮರ ಬೆಳೆದು ನಿಂತು ಇದೀಗ ಬೀಳುವ ಸ್ಥಿತಿಯ ಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಣಗಿ ನಿಂತಿರುವ ಮರವನ್ನು ತೆರವುಗೊಳಿಸುವ ವಿಷಯವಾಗಿ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಜಾಗದ ಮಾಲೀಕರಿಗೆ ಹಲವಾರು ಮನವಿ ಮಾಡಲಾಗಿತ್ತು. ಈ ವಿಚಾರವಾಗಿ ಸ್ಥಳ ಪರಿಶೀಲನೆ ನಡೆಸಲಾ ಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಕೆಲವು ತಿಂಗಳ ಹಿಂದೆ ಮರ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮನವಿಗೆ ಸ್ಪಂದಿಸಿ ಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಹಾಗೂ ಬಾಳೆಹೊನ್ನೂರಿನ ವಲಯ ಅರಣ್ಯಾಧಿಕಾರಿ ಸೂಕ್ತ ನಿರ್ದೇಶನ ನೀಡಿದ್ದರೂ ಸಹ ಮರವನ್ನು ತೆರವುಗೊಳಿಸಲು ಮುಂದಾಗದಿರುವ ಪರಿಣಾಮ ನಮ್ಮ ಕುಟುಂಬವು ಪ್ರತಿನಿತ್ಯ ಭಯದ ವಾತಾವರಣದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆಗಾಲವು ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಮರ ಬೀಳುವ ಸಂಭವ ಹೆಚ್ಚಿದೆ. ಇದರಿಂದ ಕುಟುಂಬವು ಪ್ರತಿನಿತ್ಯ ಭಯದಿಂದ ಬದುಕುವಂತಾಗಿದೆ. ಈ ಬಗ್ಗೆ ಜಾಗದ ಮಾಲೀಕರಿಗೆ ತಿಳಿಸಿದರೆ ಇಲಾಖೆಗೆ ತಿಳಿಸಿದರೆನ್ನಲಾಗಿದೆ ಎಂದು ಸಬೂಬು ಹೇಳಲಾಗುತ್ತಿರುವ ಪರಿಣಾಮ ಕುಟುಂಬವು ತೀವ್ರ ಸಂಕಷ್ಟ ಎದುರಿಸುತ್ತಿದೆ ಎಂದಿದ್ದಾರೆ.
Office of the Deputy Conservator of Forests, Koppa ಮರ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ತೆರವು ಕಾರ್ಯಾಚರಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸಿದ್ದಲ್ಲಿ ನೇರ ಹೊಣೆಯನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಅಧಿಕಾರಿಗಳು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.