Indian Medical Association Shivamogga Branch ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ . ಮನುಷ್ಯನ ಹೃದಯ ಬಡಿತ ನಿಲ್ಲುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗ್ತಾರೆ. ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಆ ಸಮಯದಲ್ಲಿ , ತಕ್ಷಣ ಸಿಪಿಆರ್ ಮಾಡಿದರೆ ,ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಅವರು ಹೇಳಿದರು.
ಐಎಂಎ ಶಿವಮೊಗ್ಗದಿಂದ ಸಾರ್ವಜನಿಕರಿಗೆ ಹ್ಯಾಂಡ್ಸ್ ಓನ್ಲಿ ಸಿಪಿಆರ್ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ, 21.5.2023 ರಂದು ಸಂಜೆ 6.30 ಗಂಟೆಗೆ ಅಭಿರುಚಿ ಯೋಗ ಸಭಾಂಗಣದಲ್ಲಿ, ಅಭಿರುಚಿ ವೇದಿಕೆಯ ಸದಸ್ಯರಿಗಾಗಿ ಆಯೋಜಿಸಿದ ಸಿಪಿಆರ್ ತರಬೇತಿಯನ್ನು ಐಎಂಎ ಸಹ ಕಾರ್ಯದರ್ಶಿ ಹಾಗು ಸಿಪಿಆರ್ ಪ್ರಮಾಣೀಕೃತ ತರಬೇತುದಾರರಾದ ಡಾ. ಅನುಪ್ ರಾವ್ ಅವರು ಅತ್ಯುತ್ತಮ ಪಿಪಿಟಿ ಪ್ರಸ್ತುತಿ ಮೂಲಕ ಮತ್ತು ಐಎಂಎ ಖಜಾಂಚಿ ಡಾ. ಶಶಿಧರ್ ಅವರೊಂದಿಗೆ ಲೈವ್ ಡೆಮೊ ಮತ್ತು ಸಂವಾದದ ಮೂಲಕ ನಡೆಸಿಕೊಟ್ಟರು.
ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (Cardiopulmonary Resuscitation )ನನ್ನು ಸಿಪಿಆರ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು ನೆರವಾಗುತ್ತದೆ. ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ 2-3 ಪಟ್ಟು ಹೆಚ್ಚಿರುತ್ತದೆ.ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.
Indian Medical Association Shivamogga Branch ಅಕ್ಕಪಕ್ಕದವರಿಗೆ ಕಾರ್ಡಿಯೋ ಅರೆಸ್ಟ್ ಆದಾಗ ಭಯಪಡಬಾರದು. ಧೈರ್ಯ ತೆಗೆದುಕೊಂಡು ಸಿಪಿಆರ್ ಹಂತವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ವಿವರಿಸಿದರು. ಸುಮಾರು 50 ಕ್ಕೂ ಹೆಚ್ಚು ಪ್ರೇಕ್ಷಕರು ಈ ಕಾರ್ಯಾಗಾರದ ಉಪಯೋಗ ಪಡೆದರು . ಐಎಂಎ ಹಿರಿಯ ಸದಸ್ಯರಾದ ಡಾ ಶ್ರೀನಿವಾಸ್ ಎಚ್.ಡಿ
, ಡಾ ಚಿತ್ರಾ ಶ್ರೀನಿವಾಸ್ , ಡಾ. ವಿಮಲಾಬಾಯಿ,
ಡಾ ಎಚ್ ನಾಗರಾಜ್. ಹಾಗು ಅಭಿರುಚಿ ಸದಸ್ಯರಾದ ಶ್ರೀಯುತ ಭಾಪಟ್ ಮತ್ತು ಶ್ರೀ . ಮುರಳಿ ಹಾಗು ಇನ್ನಿತರು ಉಪಸ್ಥಿತರಿದ್ದರು.