Literary Field ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನದೊಂದಿಗೆ ಕಾಲಿಡುವ ಯುವಮನಸ್ಸು ಗಳು ವೈಯಕ್ತಿಕ ಅಥವಾ ಆರ್ಥಿಕ ಲಾಭ ದೃಷ್ಟಿಯಿಂದ ಯೋಚಿಸಿ ಪಾದಾರ್ಪಣೆ ಮಾಡಿದ್ದಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಗೆ ಧಕ್ಕೆಯಾದಂತೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಎಚ್ಚರಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಸಮೀಪದ ಶ್ರೀ ಮಾರ್ಖಾಂಡೇಶ್ವರ ದೇವಾಲಯದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯಕಮ್ಮಟ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹಾಸ್ಯ ಹಾಗೂ ಚುಟುಕು ಸಾಹಿತ್ಯದ ಸೊಬಗನ್ನು ಮನಮುಟ್ಟುವಂತೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕವನ, ಹನಿಗವನ ಹಾಗೂ ಚುಟುಕುಗಳಲ್ಲಿ ಕನ್ನಡ ಪದಗಳ ಪ್ರಯೋಗವನ್ನು ಅತ್ಯಂತ ಸೂಕ್ಷö್ಮವಾಗಿ ಬಳಸುವ ನಿಪುತೆಯನ್ನು ಪಡೆದುಕೊಳ್ಳಬೇಕು. ಸಾಹಿತ್ಯವನ್ನು ಬದುಕಿನಲ್ಲಿ ಯುವಮನಸ್ಸುಗಳು ಅಳವಡಿಸಿಕೊಂಡಲ್ಲಿ ಎಲ್ಲರಿಗೂ ಪ್ರಿಯರಾಗುತ್ತಿರಿ. ಆ ನಿಟ್ಟಿನಲ್ಲಿ ಕನ್ನಡದ ಪದಗಳನ್ನು ಕ್ರಿಯಾಶೀಲರಾಗಿ ಬಳಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಸಾಹಿತ್ಯಾಸಕ್ತರು ಕವನಗಳ ರಚನೆ ವೇಳೆಯಲ್ಲಿ ಕೇವಲ ಕಂಠಸ್ಥವಾಗಿ ಅಭ್ಯಾಸಿಸಿದರೆ ಸಾಲದು, ಹೃದಯಸ್ಥ ಮಾಡಿಕೊಳ್ಳಬೇಕು. ಆ ಸಾಲಿನಲ್ಲಿ ನಾಡಿನ ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯರ್ ಹಾಗೂ ನಿಸಾರ್ ಅಹ್ಮದ್‌ರವರ ಸಾಧನೆ ಅಭೂತಪೂರ್ವವಾದುದು. ಅವರ ಪ್ರತಿಯೊಂದು ಪುಸ್ತಕಗಳು ಯುವ ಪ್ರತಿಭೆಗಳಿಗೆ ಸಂಜೀವಿನಿಯಿದ್ದಂತೆ ಎಂದು ಕಿವಿಮಾತು ಹೇಳಿದರು.
ಡಿವಿಜಿ ಕುರಿತು ಕೆಲವು ಸನ್ನಿವೇಶಗಳನ್ನು ಬಿಡಿಸಿಟ್ಟ ಕಣ್ಣನ್, 80ರ ಆಸುಪಾಸಿನ ಸಾಹಿತಿಯು ಜೀವನದಲ್ಲಿ ನೆಮ್ಮದಿ ಹಾಗೂ ಕುಟುಂಬವನ್ನು ಕಳೆದುಕೊಂಡು ಮುಂದಿನ ಜೀವನ ಎಷ್ಟಿದೆ ಎಂಬುದನ್ನು ಅರಿಯದೇ ಕೊರಗುತ್ತಿರುವಾಗ ಡಿವಿಜಿ ಪತ್ರದ ಮೂಲಕ ಬರೆದು ಕನ್ನಡ ತಾಯಿಗೆ ನಿಮ್ಮ ಸೇವೆ ಅಗತ್ಯವಿದೆ ಎಂದಾಕ್ಷಣ ಆ ವ್ಯಕ್ತಿ ಬದುಕುವ ಆಶಾಭಾವನೆ ಹೊಂದುತ್ತಾನೆ ಅದುವೇ ಸಾಹಿತ್ಯಕ್ಕೀರುವ ಅದ್ಬುತ ಶಕ್ತಿ ಎಂದು ವಿವರಿಸಿದರು.
ಹೊಸತನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಯುವಕ, ಯುವತಿಯರು ವಿಚಾರ ವಿನಿಮಯ ಮಾಡಿಕೊಂಡು ಮುಂದುವರೆಯಬೇಕು. ನಮ್ಮ ಸುತ್ತಮುತ್ತಲಿನ ಜನಸಾಮಾನ್ಯರಲ್ಲಿ ನಡೆಯುವ ವಿವಿಧ ಹಾಸ್ಯ ಚುಟುಕು, ಸಂಭಾಷಣೆಗಳು ಹರಿದಾಡುತ್ತಿರುತ್ತೇವೆ. ಅವುಗಳಿಂದ ಸ್ಪೂರ್ತಿ ಪಡೆದು ಯುವಪ್ರತಿಭೆ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ತಿಳಿಸಿದರು.
Literary Field ಪ್ರಶಸ್ತಿ ವಿತರಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಡಾ. ಜೆ.ಪಿ.ಕೃಷ್ಣೇಗೌಡ ಮನುಷ್ಯ ಹುಟ್ಟುವಾಗ ಹೆಸರಿರು ವುದಿಲ್ಲ ಉಸಿರಿರುವುದು, ಸಾವಿನ ನಂತರ ಉಸಿರಿರುವುದಿಲ್ಲ, ಹೆಸರು ಉಳಿಯಲಿದೆ. ಆ ಹೆಸರನ್ನು ಗಗನಕ್ಕೇತ್ತರ ಬೆಳೆಸಲು ಪ್ರತಿಯೊಬ್ಬರು ಆಯಾ ಕ್ಷೇತ್ರಗಳಲ್ಲಿ ಶ್ರಮವಿಟ್ಟು ಕಾರ್ಯನಿರ್ವಹಿಸಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.
ಇಂದಿನ ರಾಜ್ಯಮಟ್ಟದ ಕಾವ್ಯ ಕಮ್ಮಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಯುವಮನಸ್ಸುಗಳು, ಸಾಹಿತ್ಯಾಭಿ ಮಾನಿಗಳು ಧಾವಿಸಿ ಎರಡು ದಿನದ ಕಮ್ಮಟ ಕಾರ್ಯಾಗಾರವನ್ನು ಅತಿಹೆಚ್ಚು ಯಶಸ್ಸಿನಿಂದ ಪೂರೈಸಿರುವು ದು ವೈಯಕ್ತಿಕವಾಗಿ ಅತ್ಯಂತ ಖುಷಿ ತಂದಿದೆ ಎಂದ ಅವರು ರಾಜ್ಯಾದ್ಯಂತ ಅತಿಹೆಚ್ಚು ಕನ್ನಡ ಸಾಹಿತ್ಯ ಕಾರ್ಯ ಕ್ರಮಗಳನ್ನು ಚಿಕ್ಕಮಗಳೂರು ಬಿಟ್ಟರೇ ಬರ‍್ಯಾವ ಜಿಲ್ಲೆಯಲ್ಲೂ ಕಂಡಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾgಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕಾವ್ಯ ಕಮ್ಮಟ ಯಶಸ್ವಿಯಾಗಿ ಪೂರೈಸಲು ಕಸಾಪದ ಮೂರು ಮಂದಿ ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸಿರುವ ಪರಿಣಾಮ ಯಾವುದೇ ಒಂದು ನೂನ್ಯತೆಗಳಿಲ್ಲದೇ ಸಂಪೂರ್ಣವಾಗಿ ಯಶಸ್ಸು ಕಂಡಿದೆ. ಸದ್ಯದಲ್ಲೇ ಶೃಂಗೇರಿಯಲ್ಲಿ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡುವ ಗುರಿ ಹೊಂದಲಾಗಿದ್ದು ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಕಾವ್ಯಕಮ್ಮಟ ಶಿಬಿರದಲ್ಲಿ ಗುಲ್ಬರ್ಗಾ, ರಾಮನಗರ, ಬಳ್ಳಾರಿ, ಕಾಸರಗೋಡು, ಮಂಗಳೂರು, ಶಿವಮೊಗ್ಗ, ಚಾಮರಾಜನಗರ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ದಂತಹ ಸುಮಾರು 190ಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಕಡೂರು ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಖಾಂಡ್ಯ ಹೋಬಳಿ ಅಧ್ಯಕ್ಷ ಹುಣಸೇಹಳ್ಳಿ ರಾಜಪ್ಪಗೌಡ, ಕಳಸ ತಾಲ್ಲೂಕು ಅಧ್ಯಕ್ಷ ಹಾರ ಸತೀಶ್, ಯುವಸಾಹಿತಿ ಪೃಥ್ವಿ ಸೂರಿ, ಸಾಹಿತಿ ನಾಗಶ್ರೀ ತ್ಯಾಗರಾಜ್, ಕಳಸಾಪುರ ಶಾಲೆ ಪ್ರಾಂಶುಪಾಲ ನಾಗರಾಜ್‌ರಾವ್ ಕಲ್ಕಟ್ಟೆ, ಸಂಸ್ಕೃತಿ ಚಿಂತಕ ಕೆ.ಟಿ. ವೆಂಕಟೇಶ್, ಶೃಂಗೇರಿ ಕಸಾಪ ಕಾರ್ಯದರ್ಶಿ ಸುನೀತಾ, ಕಾಫಿ ಬೆಳೆಗಾರ ಎಸ್.ವಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.